Maruti Grand Vitara:  ಮಾರುತಿ ಸುಜುಕಿ ತನ್ನ ಗ್ರ್ಯಾಂಡ್ ವಿಟಾರಾ SUVಯ ರಫ್ತು ಪ್ರಕ್ರಿಯೆಯನ್ನು ಆರಂಭಿಸಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಕಾರನ್ನು ಬಿಡುಗಡೆ ಮಾಡಲಾಗಿತ್ತು ಮತ್ತು ಮಾರುತಿ ಗುರುವಾರ ಈ ಕುರಿತು  ಮಾಹಿತಿ ನೀಡಿದೆ. ಕಂಪನಿಯ ಪರವಾಗಿ, ಗ್ರ್ಯಾಂಡ್ ವಿಟಾರಾ ಎಸ್‌ಯುವಿ ರಫ್ತು ಪ್ರಾರಂಭವಾಗಿದೆ ಎಂದು ಹೇಳಲಾಗಿದೆ, ಅದರ ಮೊದಲ ಕನ್ಸೈನ್ಮೆಂಟ್ ಅನ್ನುಲ್ಯಾಟಿನ್ ಅಮೆರಿಕಕ್ಕೆ ಕಳುಹಿಸಲಾಗುತ್ತಿದೆ. ಗಮನಾರ್ಹವಾಗಿ, ದೇಶದ ಪ್ರಮುಖ ಮತ್ತು ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾವನ್ನು ಲ್ಯಾಟಿನ್ ಅಮೇರಿಕಾ, ಆಫ್ರಿಕಾ, ಪಶ್ಚಿಮ ಏಷ್ಯಾ ಮತ್ತು ನೆರೆಯ ಪ್ರದೇಶಗಳ 60 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುವ ಗುರಿಯನ್ನು ಹೊಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಶೀಘ್ರದಲ್ಲಿಯೇ ಸರ್ಕಾರಿ ನೌಕರರ ಮೇಲೆ ಹಣದ ಸುರಿಮಳೆ, ಮಾರ್ಚ್ 2023 ರಲ್ಲಿ ವೇತನದಲ್ಲಿ 90 ಸಾವಿರ ಹೆಚ್ಚಳ! ಇಲ್ಲಿದೆ ಲೆಕ್ಕಾಚಾರ


ಈ ಕುರಿತು ಹೇಳಿಕೆ ಪ್ರಕಟಿಸಿರುವ ಮಾರುತಿ ಸುಜುಕಿ, 'ಭಾರತದಿಂದ ರಫ್ತುಗಳನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸುತ್ತಾ, ಮಾರುತಿ ಸುಜುಕಿ ತನ್ನ ಅಂತರರಾಷ್ಟ್ರೀಯ ಅಸ್ತಿತ್ವವನ್ನು ಹೆಚ್ಚಿಸಲು ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ' ಎಂದು ಹೇಳಿದೆ. ಮಾರುತಿ ಸುಜುಕಿ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಹಿಸಾಶಿ ಟಕೆಯುಚಿ, "ಈ ರಫ್ತು ಪ್ರಕ್ರಿಯೆಗಾಗಿ ಉತ್ಪನ್ನ ಪೋರ್ಟ್ಫೋಲಿಯೊವನ್ನು ವಿಸ್ತರಿಸುವುದು ಯಶಸ್ಸಿನ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ. ಗ್ರ್ಯಾಂಡ್ ವಿಟಾರಾ ಸೇರಿದಂತೆ, ನಾವು ಈಗ 17 ಮಾದರಿಗಳನ್ನು ರಫ್ತು ಮಾಡುತ್ತಿದ್ದೇವೆ. ಜುಲೈ 2022 ರಲ್ಲಿ ಅನಾವರಣಗೊಂಡ ಗ್ರ್ಯಾಂಡ್ ವಿಟಾರಾ ಇದೀಗ ಆ ಪಟ್ಟಿಗೆ ಸೇರಿದೆ. ದೇಶೀಯ ಮಾರುಕಟ್ಟೆಯಲ್ಲಿ ಅಗಾಧ ಪ್ರತಿಕ್ರಿಯೆ ಪಡೆದ ಮತ್ತು ಮೇಡ್ ಇನ್ ಇಂಡಿಯಾ ಗ್ರ್ಯಾಂಡ್ ವಿಟಾರಾ ಸಾಗರೋತ್ತರ ಮಾರುಕಟ್ಟೆಗಳಲ್ಲಿಯೂ ಇದೇ ರೀತಿಯ ಯಶಸ್ಸನ್ನು ಕಂಡುಕೊಳ್ಳುತ್ತದೆ ಎಂಬ ವಿಶ್ವಾಸ ನಾವು ಹೊಂದಿದ್ದೇವೆ" ಎಂದಿದ್ದಾರೆ.


ಇದನ್ನೂ ಓದಿ-ಬಜೆಟ್ ಮಂಡನೆಗೂ ಮುನ್ನವೇ ನೌಕರ ವರ್ಗಕ್ಕೆ ಭಾರಿ ಸಂತಸದ ಸುದ್ದಿ! ವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ ಗೊತ್ತಾ?


2022 ರ ಕ್ಯಾಲೆಂಡರ್ ವರ್ಷದಲ್ಲಿ, ಮಾರುತಿ 2.6 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ರಫ್ತು ಮಾಡಿದೆ, ಇದು ಯಾವುದೇ ಒಂದು ಕ್ಯಾಲೆಂಡರ್ ವರ್ಷದಲ್ಲಿ ಕಂಪನಿಯ ಅತ್ಯಧಿಕ ರಫ್ತು ಆಗಿದೆ. ಗ್ರಾಂಡ್ ವಿಟಾರಾ ರಫ್ತು ಪ್ರಾರಂಭದೊಂದಿಗೆ, ಕಂಪನಿಯು ಭಾರತದ ಪ್ರಮುಖ ಪ್ರಯಾಣಿಕ ವಾಹನ ರಫ್ತುದಾರನಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ. ಭಾರತದಲ್ಲಿ ಗ್ರಾಂಡ್ ವಿಟಾರಾ ಬೆಲೆ ರೂ.10.45 ಲಕ್ಷದಿಂದ ರೂ.19.65 ಲಕ್ಷದವರೆಗೆ ಇರುತ್ತದೆ. ಇವು ಎಕ್ಸ್ ಶೋ ರೂಂ ಬೆಲೆಗಳಾಗಿವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.