ನವದೆಹಲಿ : ಪೆಟ್ರೋಲ್-ಡೀಸೆಲ್ ಬೆಲೆಗಳು (Petrol-Diesel price)ಮುಗಿಲು ಮುಟ್ಟುತ್ತಿವೆ. ಇಂಧನ ಬೆಲೆ ಏರಿಕೆಯಿಂದ ಬಳಲುತ್ತಿರುವ ಗ್ರಾಹಕರು, ಈಗ ಸಿಎನ್‌ಜಿ (CNG) ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಹಾಗಾಗಿ ಸಿಎನ್‌ಜಿ ವಾಹನಗಳ ಬೇಡಿಕೆ ಹೆಚ್ಚುತ್ತಿದೆ. ಅದಕ್ಕಾಗಿಯೇ ಕಾರು ಕಂಪನಿಗಳು ಸಹ ಸಿಎನ್‌ಜಿ ಕಾರುಗಳ (CNG Car) ವೆರಿಯೇಂಟ್ ಗಳತ್ತ ಗಮನ ಹರಿಸುತ್ತಿವೆ. ಮಾರುತಿ ಸುಜುಕಿಯ ಸಿಎನ್‌ಜಿ ಪೋರ್ಟ್ಫೋಲಿಯೊದಲ್ಲಿ ಹಲವು ವಾಹನಗಳಿವೆ. ಈಗ ಕಂಪನಿಯ ಸಿಎನ್‌ಜಿ  ಪೋರ್ಟ್ಫೋಲಿಯೊಗೆ ಮತ್ತೊಂದು ಹೆಸರು ಸೇರ್ಪಡೆ ಯಾಗಲಿದೆ. 


COMMERCIAL BREAK
SCROLL TO CONTINUE READING

Maruti Dzireನ ಸಿಎನ್‌ಜಿ ವೆರಿಯೇಂಟ್  :
 ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚುತ್ತಿರುವ ಕಾರಣ, ಸಿಎನ್‌ಜಿಯ (CNG) ಕ್ರೇಜ್ ಗ್ರಾಹಕರಲ್ಲಿ ಹೆಚ್ಚುತ್ತಿದೆ. Maruti Suzukiಯ ಬೆಸ್ಟ್ ಸೆಲ್ಲಿಂಗ್ ಕಾರು ಡಿಜೈರ್, ಶೀಘ್ರದಲ್ಲೇ ಸಿಎನ್‌ಜಿಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಕಂಪನಿಯು ತನ್ನ ಸಿದ್ಧತೆಗಳನ್ನು ಪೂರ್ಣ ಹುರುಪಿನಿಂದ ಪ್ರಾರಂಭಿಸಿದೆ. ಮಾರುತಿ ಡಿಜೈರ್ ಸಿಎನ್‌ಜಿಯ (Maruti Dezire CNG)ರೋಡ್ ಟೆಸ್ಟಿಂಗ್ ಕೂಡಾ ನಡೆಸಲಾಗಿದೆ. 


ಇದನ್ನೂ ಓದಿ : PM Kisan: ಈ ತಪ್ಪುಗಳಾಗಿದ್ದರೆ ನಿಂತು ಬಿಡಬಹುದು 9 ನೇ ಕಂತು, ಈ ರೀತಿ ಸರಿಪಡಿಸಿಕೊಳ್ಳಿ


ಮಾರುತಿ ಸುಜುಕಿ ವ್ಯಾಗನ್ಆರ್, ಸೆಲೆರಿಯೊ (Celerio), ಎಸ್-ಪ್ರೆಸ್ಸೊ, ಎರ್ಟಿಗಾ (Ertiga), ಆಲ್ಟೊ 800 ಮತ್ತು ಇಕೊ ಮುಂತಾದ ಕಾರುಗಳು ಕಂಪನಿಯಿಂದ ಸಿಎನ್‌ಜಿ ಕಿಟ್ (CNG Kit) ಪಡೆಯುತ್ತವೆ. ಅಂದರೆ ಈ ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅನ್ನು ಅಳವಡಿಸಬಹುದು. ಈ ಕಾರುಗಳಿಗೆ ಮಾರುಕಟ್ಟೆಯಲ್ಲಿ  ಬೇಡಿಕೆಯೂ ಇದೆ.  ಇದೀಗ ಕಂಪನಿ ತನ್ನ ಉಳಿದ ಕಾರುಗಳನ್ನು ಕೂಡಾ ಸಿಎನ್‌ಜಿ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. 


ಡೀಸೆಲ್ ಎಂಜಿನ್ ಪ್ರೊಡಕ್ಷನ್ ಸ್ಥಗಿತ :
ಕಂಪನಿಯು ಈಗ ಡಿಜೈರ್ ನ  ಡೀಸೆಲ್ ಎಂಜಿನ್‌ಗಳ ಉತ್ಪಾದನೆಯನ್ನು ನಿಲ್ಲಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ಮಾರುತಿ ಡಿಜೈರ್ 24 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ದೆಹಲಿಯ ಮಾರುತಿ ಸುಜುಕಿ ಡಿಜೈರ್‌ನ ಎಕ್ಸ್‌ಶೋರೂಂ ಬೆಲೆ 5,98,000 ರೂಗಳಾಗಿದೆ. 


ಇದನ್ನೂ ಓದಿ : Gold-Silver Rate : ಮಹಿಳೆಯೆರೆ ಗಮನಿಸಿ : ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ