Huge Discount On Cheapest Car: ದೇಶದ ಅತ್ಯಂತ ಅಗ್ಗದ ಕಾರ್ ಮೇಲೆ ಸಿಗುತ್ತಿದೆ ಭಾರಿ ಡಿಸ್ಕೌಂಟ್, ಬೆಲೆ 3 ಲಕ್ಷಕ್ಕೂ ಕಮ್ಮಿ, 22 ಕಿ.ಮೀ ಮೈಲೇಜ್

Huge Discount On Cheapest Car: ದೇಶದ ಅತಿದೊಡ್ಡ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ (Maruti Suzuki) ತನ್ನ ಅಗ್ಗದ ಮತ್ತು ಉತ್ತಮ ಮೈಲೇಜ್ ನೀಡುವ ಕಾರುಗಳಿಗೆ ಹೆಸರುವಾಸಿಯಾಗಿದೆ. ಈ ಜುಲೈನಲ್ಲಿ, ಕಂಪನಿಯು ತನ್ನ ಅರೆನಾ (Maruti Arena) ಮತ್ತು ನೆಕ್ಸಾ (Maruti Nexa) ಎರಡೂ ಶೋ ರೂಂಗಳಿಂದ ಮಾರಾಟವಾಗುವ ಕಾರುಗಳಿಗೆ ಭಾರಿ ರಿಯಾಯಿತಿಯನ್ನು ನೀಡುತ್ತಿದೆ. 

Written by - Nitin Tabib | Last Updated : Jul 10, 2021, 08:35 PM IST
  • ಮಾರುತಿ ಸುಜುಕಿ (Maruti Suzuki) ತನ್ನ ಅಗ್ಗದ ಮತ್ತು ಉತ್ತಮ ಮೈಲೇಜ್ ನೀಡುವ ಕಾರುಗಳಿಗೆ ಹೆಸರುವಾಸಿಯಾಗಿದೆ.
  • ಈ ಜುಲೈನಲ್ಲಿ, ಕಂಪನಿಯು ತನ್ನ ಅರೆನಾ (Maruti Arena) ಮತ್ತು ನೆಕ್ಸಾ (Maruti Nexa) ಕಾರುಗಳ ಮೇಲೆ ರಿಯಾಯಿತಿ ನೀಡುತ್ತಿದೆ.
  • ಈ ತಿಂಗಳು, ಕಂಪನಿಯ ತನ್ನ ಅಗ್ಗದ ಕಾರು ಮಾರುತಿ ಆಲ್ಟೊ ಮೇಲೆ ಭಾರಿ ರಿಯಾಯಿತಿಯನ್ನು ನೀಡುತ್ತಿದೆ.
Huge Discount On Cheapest Car: ದೇಶದ ಅತ್ಯಂತ ಅಗ್ಗದ ಕಾರ್ ಮೇಲೆ ಸಿಗುತ್ತಿದೆ ಭಾರಿ ಡಿಸ್ಕೌಂಟ್, ಬೆಲೆ 3 ಲಕ್ಷಕ್ಕೂ ಕಮ್ಮಿ, 22 ಕಿ.ಮೀ ಮೈಲೇಜ್  title=
Huge Discount On Cheapest Car (File Photo)

Huge Discount On Cheapest Car: ದೇಶದ ಅತಿದೊಡ್ಡ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ (Maruti Suzuki) ತನ್ನ ಅಗ್ಗದ ಮತ್ತು ಉತ್ತಮ ಮೈಲೇಜ್ ನೀಡುವ ಕಾರುಗಳಿಗೆ ಹೆಸರುವಾಸಿಯಾಗಿದೆ. ಈ ಜುಲೈನಲ್ಲಿ, ಕಂಪನಿಯು ತನ್ನ ಅರೆನಾ (Maruti Arena) ಮತ್ತು ನೆಕ್ಸಾ (Maruti Nexa) ಎರಡೂ ಶೋ ರೂಂಗಳಿಂದ ಮಾರಾಟವಾಗುವ ಕಾರುಗಳಿಗೆ ಭಾರಿ ರಿಯಾಯಿತಿಯನ್ನು ನೀಡುತ್ತಿದೆ. ಈ ತಿಂಗಳು, ಕಂಪನಿಯ ತನ್ನ ಅಗ್ಗದ ಕಾರು ಮಾರುತಿ ಆಲ್ಟೊ ಮೇಲೆ ಭಾರಿ ರಿಯಾಯಿತಿಯನ್ನು ನೀಡುತ್ತಿದೆ. ಕಡಿಮೆ ಬೆಲೆ ಮತ್ತು ಉತ್ತಮ ಮೈಲೇಜ್‌ಗೆ ಹೆಸರುವಾಸಿಯಾದ ಈ ಕಾರನ್ನು ಖರೀದಿಸುವ ಮೂಲಕ ನೀವು ಭಾರಿ ಉಳಿತಾಯ ಮಾಡಬಹುದು.

ಮಾಧ್ಯಮ ವರದಿಗಳ ಪ್ರಕಾರ, Maruti Alto ಖರೀದಿಯ ಮೇಲೆ ನೀವು ಜುಲೈ ತಿಂಗಳಿನಲ್ಲಿ ಒಟ್ಟು 43,000 ರೂ. ಉಳಿತಾಯ ಮಾಡಬಹುದು. ಇದರಲ್ಲಿ 25,000 ರೂ.ಗಳ ಕ್ಯಾಶ್ ಡಿಸ್ಕೌಂಟ್ ಹಾಗೂ 15,000 ರೂ.ಗಳ ಎಕ್ಸ್ಚೇಂಜ್ ಬೋನಸ್ ಶಾಮೀಲಾಗಿದೆ. ಈ ಕಾರಿನ ಮೇಲೆ ಕಂಪನಿ 3,000 ರೂ.ಗಳ ಕಾರ್ಪೋರೆಟ್ ಡಿಸ್ಕೌಂಟ್ ಕೂಡ ನೀಡುತ್ತಿದೆ. ಇದಲ್ಲದೆ, ಮಾರುತಿ ತನ್ನ ಎಸ್ ಪ್ರೆಸ್ಸೋ (Maruti Spresso) ಕಾರಿನ ಮೇಲೂ ಕೂಡ 43,000 ರೂ.ಗಳ ರಿಯಾಯ್ತಿ ನೀಡುತ್ತಿದೆ.

ಇದನ್ನೂ ಓದಿ- Tip To Earn Money From Home: ಕೇವಲ 50 ಪೈಸೆಯಲ್ಲಿ ಮನೆಯಲ್ಲಿಯೇ ಕುಳಿತು 'ಮಾಲಾಮಾಲ್' ಆಗಿ

ಮಾರುತಿ ಆಲ್ಟೊ ಒಟ್ಟು 6 ಶ್ರೇಣಿಗಳಲ್ಲಿ ಲಭ್ಯವಿದೆ ಹಾಗೂ ಕಾರಿನ ಬೇಸ್ ವೇರಿಯಂಟ್ ಅಂದರೆ ಸ್ಟ್ಯಾಂಡರ್ಡ್ ವೇರಿಯಂಟ್ ನ ಬೆಲೆ 2.99 ಲಕ್ಷ ರೂ.ಗಳಾಗಿದೆ. ಈ ಕಾರಿನ ಟಾಪ್ ವೇರಿಯಂಟ್ ಆಗಿರುವ vxi ಪ್ಲಸ್ ಬೆಲೆ 4.60 ಲಕ್ಷ  ರೂ.ಗಳಾಗಿದೆ. ಕಂಪನಿ ಇದರಲ್ಲಿ 796 ಸಿಸಿ ಸಾಮರ್ಥ್ಯದ ಪೆಟ್ರೋಲ್ ಇಂಜಿನ್ ಅಳವಡಿಸಿದೆ. ಈ ಇಂಜಿನ್ 40.3 bhp ಪವರ್ ಹಾಗೂ 60Nm ಟಾರ್ಕ್ ಉತ್ಪಾದಿಸುತ್ತದೆ. ಸಾಮಾನ್ಯವಾಗಿ ಈ ಕಾರು 22 ಕಿ.ಮೀ ಪ್ರತಿ ಲೀಟರ್ ಮೈಲೇಜ್ ನೀಡುತ್ತದೆ.

ಇದನ್ನೂ ಓದಿ- Cheap Gold - ಅಗ್ಗದ ದರದಲ್ಲಿ ಚಿನ್ನ ಖರೀದಿಸುವ ಅವಕಾಶ ಮತ್ತೆ ಸಿಗುತ್ತಿದೆ, ಇಲ್ಲಿದೆ ಡೀಟೇಲ್ಸ್

ಮಾರುತಿ ತನ್ನ Alto ಕಾರಿನ ನೆಕ್ಸ್ಟ್ ಜೆನರೆಶನ್ ಮಾಡೆಲ್ ಮೇಲೂ ಕೂಡ ಕಾರ್ಯನಿರ್ವಹಿಸುತ್ತದೆ. ಈ ಕಾರು ಇದೆ ವರ್ಷದ ಕೊನೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ನೂತನ ಮಾಡೆಲ್ ನಲ್ಲಿ ಕಂಪನಿ ಹಲವು ದೊಡ್ಡ ಬದಲಾವಣೆಗಳನ್ನೂ ಮಾಡುತ್ತಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ತನ್ನ ಇತರ ಮಾಡೆಲ್ ಗಳಿಂದ ಭಿನ್ನವಾಗಿಸಲಿದೆ ಎನ್ನಲಾಗಿದೆ. ನೂತನ ಆಲ್ಟೊ ಕಾರು ಖ್ಯಾತ HEARTECT ಪ್ಲಾಟ್ಫಾರ್ಮ್ ಬೇಸ್ಡ್ ಆಗಿರಲಿದ್ದು, ಈ ತಂತ್ರಜ್ಞಾನದ ಮೇಲೆ ಎಸ್ ಪ್ರೆಸ್ಸೋ ಹಾಗೂ ವ್ಯಾಗನ್ ಆರ್ (Maruti WagonR) ಕಾರುಗಳನ್ನು ಸಿದ್ಧಪಡಿಸಲಾಗಿದೆ. ಇದರಿಂದ ಕಾರಿನ ತೂಕ ಕಡಿಮೆಯಾಗುವುದರ ಜೊತೆಗೆ ಕಾರು ಬಲಿಷ್ಟವಾಗಲಿದೆ ಹಾಗೂ ಕಾರು ಉತ್ತಮ ಪರ್ಫಾರ್ಮೆನ್ಸ್ ನೀಡಲಿದೆ ಎನ್ನಲಾಗಿದೆ.

ಇದನ್ನೂ ಓದಿ-SBI Alert! ಜುಲೈ 10 ಮತ್ತು 11 ರಂದು ಈ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News