MG Electric Car: ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್‌ ವಾಹನಗಳ ಭರಾಟೆ ಜೋರಾಗಿದ್ದು, ಆಟೋಮೊಬೈಲ್‌ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಕಡಿಮೆ ದರದಲ್ಲಿ ಹಲವಾರು ಉತ್ತಮ ಸೌಲಭ್ಯಗಳನ್ನು ಹೊಂದಿರುವ ಸ್ಕೂಟರ್‌, ಬೈಕ್‌ ಮತ್ತು ಕಾರುಗಳು ಎಲೆಕ್ಟ್ರಿಕ್‌ ವಿಭಾಗದಲ್ಲಿ ಬಿಡುಗಡೆಯಾಗುತ್ತಿವೆ. ಎಲ್ಲಾ ಕಂಪನಿಗಳು ಸಹ ಹೊಸ ಹೊಸ ಮಾದರಿಯಲ್ಲಿ ವಾಹನಗಳನ್ನು ಮಾರುಕಟ್ಟೆಗೆ ತರುತ್ತಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ. ಅದರಂತೆ ಪ್ರಸಿದ್ಧ ವಾಹನ ತಯಾರಕ ಎಂಜಿ ಮೋಟಾರ್‌ ಕಂಪನಿಯು ಸಹ ಹೊಸ ಎಲೆಕ್ಟ್ರಿಕ್‌ ಕಾರು ಬಿಡಲು ಮುಂದಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.  


COMMERCIAL BREAK
SCROLL TO CONTINUE READING

ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಶೀಘ್ರವೇ ಎಂಜಿ ಮೋಟಾರ್ ಕಂಪನಿ ತನ್ನ ಹೊಸ ಕ್ಲೌಡ್ ಎಲೆಕ್ಟ್ರಿಕ್ ಎಂಪಿವಿ ಪರಿಚಯಿಸಲು ನಿರ್ಧರಿಸಿದೆ. ಈ ಹೊಸ ಇವಿ ಕಾರು ಬಿಡುಗಡೆ ಮಾಡಲು ಈಗಾಗಲೇ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಮಧ್ಯಮ ಕ್ರಮಾಂಕದ ಕಾರು ಮಾರಾಟ ವಿಭಾಗದಲ್ಲಿ ಬೇಡಿಕೆ ಹೆಚ್ಚಾಗಲಿದೆ. ಭಾರತದಲ್ಲಿ ಸದ್ಯ ZS ಇವಿ ಮತ್ತು ಕಾಮೆಟ್ ಇವಿ ಕಾರುಗಳ ಮೂಲಕ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನು ಗಮನಿಸಿರುವ ಎಂಜಿ ಮೋಟಾರ್ ಕಂಪನಿ ಇದೀಗ ಕ್ಲೌಡ್ ಇವಿ ಕಾರನ್ನು ರಸ್ತೆಗಿಳಿಸಲಿ ನಿರ್ಧರಿಸಿದೆ. ಇದು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರಲಿದ್ದು, ZS ಇವಿ ಮತ್ತು ಕಾಮೆಟ್ ಇವಿ ಕಾರುಗಳ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ವರದಿಯಾಗಿದೆ. 


ಇದನ್ನೂ ಓದಿ: ಈ ವಿಡಿಯೋ ನೋಡಿದ ನಂತರ ಮಳೆಯಲ್ಲಿ ನೀವು ರೀಲ್ಸ್‌ ಮಾಡೋಕೆ ಹೋಗಲ್ಲ..!


ಚೀನಾ ಮಾರುಕಟ್ಟೆಯಲ್ಲಿ ಸದ್ಯ ಮಾರಾಟದಲ್ಲಿರುವ ವುಲ್ಲಿಂಗ್ ಮೋಟಾರ್ ನಿರ್ಮಾಣದ ಕ್ಲೌಡ್ ಇವಿ ಕಾರಿನ ಮಾದರಿಯನ್ನೇ ಎಂಜಿ ಮೋಟಾರ್ ಕಂಪನಿ ಭಾರತದಲ್ಲಿ ಹೊಸ ಬದಲಾವಣೆಗೊಂದಿಗೆ ಬಿಡುಗಡೆ ಮಾಡಲು ಮುಂದಾಗಿದೆ. ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸಗಳೊಂದಿಗೆ ಗ್ರಾಹಕರನ್ನು ಸೆಳೆಯಲಿದೆ ಅಂತಾ ಕಂಪನಿಯೇ ಹೇಳಿಕೊಂಡಿದೆ. ಚೀನಾದಲ್ಲಿರುವ ವುಲ್ಲಿಂಗ್ ಮೋಟಾರ್ ಕಂಪನಿಯು ಸದ್ಯ MG ಮಾತೃ ಸಂಸ್ಥೆಯಾದ ಸೈಕ್ ಜೊತೆ ಕಾರ್ಯನಿರ್ವಹಿಸುತ್ತಿದೆ. ಉದ್ಯಮದ ವಿಸ್ತರಣೆಯ ಭಾಗವಾಗಿ ಎಂಜಿ ಕಂಪನಿಯು ವುಲ್ಲಿಂಗ್ ಕಂಪನಿಯ ಜನಪ್ರಿಯ ಇವಿ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ.


ವುಲ್ಲಿಂಗ್ ಕಂಪನಿಯ ಕಾಮೆಟ್ ಇವಿ ಬಳಿಕ ಇದೀಗ ಕ್ಲೌಡ್ ಎಂಪಿವಿ ಕಾರನ್ನು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ವಿನ್ಯಾಸಗಳೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದು 4,295 MM ಉದ್ದ ಇರಲಿದ್ದು, ಅತ್ಯಾಧುನಿಕ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಎಂಟ್ರಿಯಾಗಲಿದೆ. ಈ ಹೊಸ ಇವಿ ಕಾರು ಮಾದರಿಯಲ್ಲಿ ಎಂಜಿ ಕಂಪನಿಯು ಭರ್ಜರಿ ಮೈಲೇಜ್ ನೀಡುವ ವಿವಿಧ ಬ್ಯಾಟರಿ ಪ್ಯಾಕ್ ಆಯ್ಕೆ ನೀಡಲಿದೆ. ಹೊಸ ಕಾರಿನ ಟಾಪ್ ಎಂಡ್ ಮಾದರಿಯು 50.6 kWh ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಒಂದೇ ಒಂದು ಬಾರಿ ಚಾರ್ಜ್‌ ಮಾಡಿದರೆ ಸುಮಾರು 460KM ಮೈಲೇಜ್ ಕೊಡಲಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ: LK Advani Health News: ಎಲ್.ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು.. ಏಮ್ಸ್‌ಗೆ ದಾಖಲು


ಈ ಕಾರಿನಲ್ಲಿ LED ಲೈಟ್ಸ್, ಫ್ಲಶ್ ಡೋರ್ ಹ್ಯಾಂಡಲ್ಸ್, ಡ್ಯುಯಲ್ ಡಿಜಿಟಲ್ ಸ್ಕ್ರೀನ್, 360 ಡಿಗ್ರಿ ಕ್ಯಾಮೆರಾ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಕನೆಕ್ಡೆಡ್ ಕಾರ್ ಟೆಕ್ ಸೇರಿದಂತೆ ವಿವಿಧ ಸೌಲಭ್ಯಗಳಿರಲಿವೆ. ಗರಿಷ್ಠ ಸುರಕ್ಷತೆಗಾಗಿ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ನೀಡಲಾಗುತ್ತಿದ್ದು, ಇದು ಅಪಘಾತ ತಡೆಯುವ ಮೂಲಕ ಪ್ರಾಣಹಾನಿ ಆಗುವುದನ್ನು ನಿಯಂತ್ರಿಸಲಿದೆ. ಇದರ ಎಕ್ಸ್‌ಶೋ ರೂಂ ದರ 18 ಲಕ್ಷ ರೂ.ನಿಂದ 20 ಲಕ್ಷ ರೂ.ವರೆಗೂ ಇರಲಿದೆ ಅಂತಾ ಹೇಳಲಾಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.