LK Advani Health News: ಎಲ್.ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು.. ಏಮ್ಸ್‌ಗೆ ದಾಖಲು

Lal Krishna Advani Health News: ಬಿಜೆಪಿಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 

Written by - Chetana Devarmani | Last Updated : Jun 27, 2024, 09:03 AM IST
    • ಎಲ್‌ಕೆ ಅಡ್ವಾಣಿ ಅನಾರೋಗ್ಯ ಆಸ್ಪತ್ರೆಗೆ ದಾಖಲು
    • ಬಿಜೆಪಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ
    • ದೆಹಲಿ ಏಮ್ಸ್‌ ಆಸ್ಪತ್ರೆಗೆ ಅಡ್ವಾಣಿ ಅಡ್ಮಿಟ್‌
LK Advani Health News: ಎಲ್.ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು.. ಏಮ್ಸ್‌ಗೆ ದಾಖಲು  title=
Lal Krishna Advani

ನವದೆಹಲಿ: ಭಾರತರತ್ನ ಲಾಲ್ ಕೃಷ್ಣ ಅಡ್ವಾಣಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ರಾತ್ರಿ ಅವರನ್ನು ದೆಹಲಿ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. 96 ವರ್ಷದ ಹಿರಿಯ ಬಿಜೆಪಿ ನಾಯಕನಿಗೆ ವಿಶೇಷ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಅಡ್ವಾಣಿ ಆರೋಗ್ಯದ ಬಗ್ಗೆ ಏಮ್ಸ್ ಮಾಹಿತಿ ನೀಡಿದೆ. ಬಿಜೆಪಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರನ್ನು ಏಮ್ಸ್‌ಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರನ್ನು ನಿಗಾದಲ್ಲಿರಿಸಲಾಗಿದೆ ಎಂದು ಏಮ್ಸ್ ಹೇಳಿಕೆಯಲ್ಲಿ ತಿಳಿಸಿದೆ. 

ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಆಸ್ಪತ್ರೆ ನೀಡಿಲ್ಲ. ತಡರಾತ್ರಿ ಅಡ್ವಾಣಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ. ಎಲ್‌ಕೆ ಅಡ್ವಾಣಿ ಅವರನ್ನು ಆಸ್ಪತ್ರೆಯ ವೃದ್ಧಾಪ್ಯ ವಿಭಾಗದ ತಜ್ಞರ ನಿಗಾದಲ್ಲಿ ಇರಿಸಲಾಗಿದೆ. ಎಲ್‌ಕೆ ಅಡ್ವಾಣಿ ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. 

ಎಲ್‌ಕೆ ಅಡ್ವಾಣಿ ಅವರ ಆರೋಗ್ಯವನ್ನು ಕಾಲಕಾಲಕ್ಕೆ ಮನೆಯಲ್ಲಿ ತಪಾಸಣೆ ಮಾಡಲಾಗುತ್ತಿತ್ತು, ಆದರೆ ಕೆಲವು ಗಂಟೆಗಳ ಹಿಂದೆ ಅವರ ಆರೋಗ್ಯ ಹದಗೆಟ್ಟ ಕಾರಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. 

ಈ ವರ್ಷ ಮಾರ್ಚ್ 30 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಇದನ್ನೂ ಓದಿ: ಗ್ರಾಹಕರ ಕೊರಳಿಗೆ ಬೆಲೆ ಏರಿಕೆ ಪಾಶ: ರಾಜ್ಯ ಸರ್ಕಾರದ ವಿರುದ್ಧ ಪ್ರಲ್ಹಾದ ಜೋಶಿ ಕಿಡಿ 

1927 ರಲ್ಲಿ ಕರಾಚಿಯಲ್ಲಿ ಜನಿಸಿದ ಅಡ್ವಾಣಿ 1942 ರಲ್ಲಿ ಸ್ವಯಂಸೇವಕರಾಗಿ ಸಂಘಕ್ಕೆ ಸೇರಿದರು. ಅವರು 1986 ರಿಂದ 1990 ರವರೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು, ನಂತರ 1993 ರಿಂದ 98 ರವರೆಗೆ ಮತ್ತು 2004 ರಿಂದ 2005 ರವರೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಎಲ್‌ಕೆ ಅಡ್ವಾಣಿ ಗೃಹ ಸಚಿವರಾಗಿದ್ದರು ಮತ್ತು ಅಟಲ್ ಸರ್ಕಾರದಲ್ಲಿ ಉಪಪ್ರಧಾನಿಯಾಗಿದ್ದರು. 2009 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿತ್ತು. 

ದೇಶದಲ್ಲಿ ಎಲ್‌ಕೆ ಅಡ್ವಾಣಿ ರಾಮಮಂದಿರ ಚಳವಳಿಯ ನಾಯಕ ಎಂದೇ ಬಿಂಬಿತರಾದವರು. 1990 ರ ದಶಕದಲ್ಲಿ ಎಲ್‌ಕೆ ಅಡ್ವಾಣಿ ಭರ್ಜರಿ ಪ್ರಚಾರದಿಂದಾಗಿ, ದೇಶದಲ್ಲಿ ಭಾರತೀಯ ಜನತಾ ಪಕ್ಷದ ಗ್ರಾಫ್ ಹೆಚ್ಚಾಯಿತು ಮತ್ತು ಲೋಕಸಭಾ ಸಂಸದರ ಸಂಖ್ಯೆ ಹೆಚ್ಚಾಗಲು ಪ್ರಾರಂಭಿಸಿತು. ಇಂದು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಿದೆ. 2014 ರಲ್ಲಿ ಮೊದಲ ಬಾರಿಗೆ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೇರಿತು. 

ಇದನ್ನೂ ಓದಿ: NRI Kannada: ಯುಎಇ ರಾಷ್ಟ್ರದ ದುಬೈ ದೇಶದಲ್ಲಿ ಕನ್ನಡ ವಚನ ಪಾಠಶಾಲೆ ಪ್ರಾರಂಭ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News