First FlixBus in south india : ಪ್ರಮುಖ ನಗರಗಳ ನಡುವೆ ಬಸ್ ಸಂಚಾರ ಒದಗಿಸುವ ಜರ್ಮನಿ ಮೂಲದ ಫ್ಲಿಕ್ಸ್‌ಬಸ್ (German Based Flixbus) ಸಂಚಾರಕ್ಕೆ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ ಮಂಗಳವಾರ ಹಸಿರು ನಿಶಾನೆ ತೋರಿದರು. ಇದರೊಂದಿಗೆ, ಫ್ಲಿಕ್ಸ್ ಬಸ್ ಸೇವೆಯು ದಕ್ಷಿಣ ಭಾರತಕ್ಕೆ ಪದಾರ್ಪಣೆ ಮಾಡಿದೆ.


COMMERCIAL BREAK
SCROLL TO CONTINUE READING

[[{"fid":"440252","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ದಕ್ಷಿಣ ಭಾರತದಲ್ಲಿ ಮೊದಲ ಫ್ಲಿಕ್ಸ್‌ಬಸ್ (First FlixBus in South India) ಸೇವೆಗೆ ಹಸಿರು ನಿಶಾನೆ ತೋರಿ ಮಾತನಾಡಿದ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ,  ಭಾರತವೂ ಸೇರಿದಂತೆ 43 ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಫ್ಲಿಕ್ಸ್‌ಬಸ್ ಸೇವೆಯು ದಕ್ಷಿಣ ಭಾರತದಲ್ಲಿ ಜನರ ಪ್ರಯಾಣದ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 


ಇದನ್ನೂ ಓದಿ- ಗೌರಿ-ಗಣೇಶ ಹಬ್ಬಕ್ಕಾಗಿ ಊರಿಗೆ ಹೋಗುವವರಿಗೆ KSRTC ಗುಡ್ ನ್ಯೂಸ್, ಟಿಕೆಟ್ ಬುಕ್ಕಿಂಗ್‌ನಲ್ಲೂ ರಿಯಾಯಿತಿ 


ಖಾಸಗಿ ಬಸ್ ನಿರ್ವಾಹಕರ ಸಹಯೋಗದಲ್ಲಿ ಸಂಚಾರ ಜಾಲ ವಿಸ್ತರಿಸಿಕೊಳ್ಳುವ ಯೋಜನೆಯನ್ನು ಫ್ಲಿಕ್ಸ್‌ಬಸ್ (Flixbus) ಹೊಂದಿದೆ. ಹೆಚ್ಚಿನ ಅನುಕೂಲ, ಸುರಕ್ಷತೆ ಹಾಗೂ ಹೊರೆ ಎನ್ನಿಸದ ದರಗಳ ಮೂಲಕ ಬಸ್ ಪ್ರಯಾಣಿಕರ ವಿಶ್ವಾಸ ಗಳಿಸುವ ಗುರಿ ಹೊಂದಿದೆ ಎಂದರು.


[[{"fid":"440253","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]


ಬಸ್ ಸಂಚಾರದಲ್ಲಿ ಭಾರತವು ಜಗತ್ತಿನ ಎರಡನೇ ದೊಡ್ಡ ಮಾರುಕಟ್ಟೆಯಾಗಿದೆ. ಪರಿಸರ ಸ್ನೇಹಿ ಇಂಧನಗಳ (Environment Friendly Fuels) ಬಳಕೆಗೆ ಒತ್ತು ನೀಡಿ ದೇಶದಲ್ಲಿ ಸುಸ್ಥಿರ  ಸಂಚಾರಕ್ಕೆ ಕೊಡುಗೆ ನೀಡಲು ಸಂಸ್ಥೆಯು ಆದ್ಯತೆ ನೀಡಬೇಕೆಂದು ಸಚಿವರು ಅಭಿಪ್ರಾಯಪಟ್ಟರು.


ಇದನ್ನೂ ಓದಿ- ಆಹಾರ ಇಲಾಖೆಯಿಂದ ಸಮರ: 10 ಲಕ್ಷ ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆ!


ಜರ್ಮನಿಯ ಡೆಪ್ಯುಟಿ ಕಾನ್ಸುಲ್ ಜನರಲ್ ಅನೆಟ್ ಬೆಸಿಯರ್, ಫ್ಲಿಕ್ಸ್ ಬಸ್ ಸಹ-ಸ್ಥಾಪ ಡೇನಿಯಲ್ ಕ್ರೌಸ್,   ಫ್ಲಿಕ್ಸ್ ಬಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೂರ್ಯ ಖುರಾನ ಅವರು ಇದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.