PM Jan Dhan Yojana: ಕೇಂದ್ರ ಸರ್ಕಾರದ (Central Government) ವತಿಯಿಂದ ಗ್ರಾಹಕರಿಗೆ ಜನ್ ಧನ್ ಖಾತೆಯ ಸೌಲಭ್ಯವನ್ನು ನೀಡಲಾಗುತ್ತದೆ. ಈ ಬ್ಯಾಂಕ್ ಖಾತೆಗಳಿಗೆ  ಸರಕಾರದ ವತಿಯಿಂದ ಹಲವು ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ. ನೀವು ಸಹ ಈ ಖಾತೆಯನ್ನು ತೆರೆದಿದ್ದರೆ ಅಥವಾ ಅದನ್ನು ತೆರೆಯಲು ಯೋಜಿಸುತ್ತಿದ್ದರೆ, ಹಣಕಾಸು ಸಚಿವಾಲಯವು (Finance Ministry) ಈ ಖಾತೆಗಳ ಕುರಿತು ಪ್ರಮುಖ ಮಾಹಿತಿಯನ್ನು ನೀಡಿದೆ. ಬನ್ನಿ ಈ ಮಾಹಿತಿಯನ್ನು ತಿಳಿದುಕೊಳ್ಳೋಣ. 


COMMERCIAL BREAK
SCROLL TO CONTINUE READING

ಖಾತೆಗಳ ಠೇವಣಿ 1.5 ಲಕ್ಷ ಕೋಟಿ ದಾಟಿದೆ (PM Jan Dhan Account Benefits)
ಜನ್ ಧನ್ ಯೋಜನೆಯಡಿ ತೆರೆದಿರುವ ಬ್ಯಾಂಕ್ ಖಾತೆಗಳಲ್ಲಿ ಮಾಡಲಾಗಿರುವ  ಒಟ್ಟು ಠೇವಣಿ ಮೊತ್ತ 1.5 ಲಕ್ಷ ಕೋಟಿ ದಾಟಿದೆ. ಏಳೂವರೆ ವರ್ಷಗಳ ಹಿಂದೆ ಸರಕಾರ ಈ ಯೋಜನೆ ಆರಂಭಿಸಿತ್ತು. ಹಣಕಾಸು ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ಅಡಿಯಲ್ಲಿ ಖಾತೆಗಳ ಸಂಖ್ಯೆ 44.23 ಕೋಟಿ ತಲುಪಿದೆ. ಈ ಖಾತೆಗಳಲ್ಲಿ ಜಮೆಯಾದ ಮೊತ್ತ 1.5 ಲಕ್ಷ ಕೋಟಿ ರೂ.


2014 ರಲ್ಲಿ ಯೋಜನೆ ಪ್ರಾರಂಭವಾಯಿತು
ಈ ವಿತ್ತೀಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಯೋಜನೆಯು ಕಳೆದ ವರ್ಷ ಆಗಸ್ಟ್‌ನಲ್ಲಿ ಏಳು ವರ್ಷಗಳ ಅನುಷ್ಠಾನ ಪೂರ್ಣಗೊಳಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು 2014 ರಲ್ಲಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಜನ್ ಧನ್ ಯೋಜನೆ ಪ್ರಾರಂಭಿಸುವುದಾಗಿ ಘೋಷಿಸಿದ್ದರು.


ಯಾವ ಬ್ಯಾಂಕ್‌ಗಳಲ್ಲಿ ಎಷ್ಟು ಖಾತೆಗಳಿವೆ ಎಂಬುದನ್ನು ತಿಳಿದುಕೊಳ್ಳಿ
ಹಣಕಾಸು ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಒಟ್ಟು 44.23 ಕೋಟಿ ಜನ್ ಧನ್ ಖಾತೆಗಳಲ್ಲಿ 349 ಕೋಟಿ ಖಾತೆಗಳು ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಮತ್ತು 8.05 ಕೋಟಿ ಖಾತೆಗಳು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿವೆ. ಇದನ್ನು ಹೊರತುಪಡಿಸಿ ಉಳಿದ 1.28 ಕೋಟಿ ಖಾತೆಗಳನ್ನು ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ತೆರೆಯಲಾಗಿದೆ.


ಇದನ್ನೂ ಓದಿ-PM Jan-Dhan ಖಾತೆದಾರರಿಗೆ ಸಿಗಲಿದೆ 1.3 ಲಕ್ಷ ರೂ. , ಶೀಘ್ರ ಪೂರೈಸಿಕೊಳ್ಳಿ ಈ ಕೆಲಸ


ರೂಪೇ ಕಾರ್ಡ್ ನೀಡಲಾಗಿದೆ
ಇದಲ್ಲದೆ, PMJDY ಯ 31.28 ಕೋಟಿ ಫಲಾನುಭವಿಗಳಿಗೆ ರುಪೇ ಕಾರ್ಡ್‌ಗಳನ್ನು ವಿತರಿಸಲಾಗಿದೆ. ರುಪೇ ಕಾರ್ಡ್‌ಗಳ ಸಂಖ್ಯೆ ಮತ್ತು ಬಳಕೆ ಕಾಲಾನಂತರದಲ್ಲಿ ಹೆಚ್ಚುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಈ ಯೋಜನೆಯ ಮೊದಲ ವರ್ಷದಲ್ಲಿ 17.90 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಜನ್ ಧನ್ ಖಾತೆಗಳಲ್ಲಿನ ಶೇಷ ಅಥವಾ ಬ್ಯಾಲೆನ್ಸ್ ಖಾತೆದಾರರು ಮಾಡಿದ ವಹಿವಾಟುಗಳನ್ನು ಅವಲಂಬಿಸಿ ಪ್ರತಿದಿನ ಬದಲಾಗಬಹುದು. ಎಂದಾದರೊಂದು ದಿನ ಖಾತೆಯಲ್ಲಿನ 'ಬ್ಯಾಲೆನ್ಸ್' ಕೂಡ ಶೂನ್ಯಕ್ಕೆ ಬರಬಹುದು.


ಇದನ್ನೂ ಓದಿ-PM Jan Dhan Account: ಪಿಎಂ ಜನಧನ ಖಾತೆ ಮೂಲಕ ಸಿಗಲಿದೆ ಬಂಪರ್ ಲಾಭ


24.61 ಕೋಟಿ ಮಹಿಳೆಯರು ಖಾತೆ ಹೊಂದಿದ್ದಾರೆ
ಡಿಸೆಂಬರ್ 8, 2021 ರ ವೇಳೆಗೆ ಜನ್ ಧನ್ ಖಾತೆಗಳಲ್ಲಿ ಶೂನ್ಯ ಶೇಷ ಅಥವಾ ಬ್ಯಾಲೆನ್ಸ್ ಹೊಂದಿರುವ ಖಾತೆಗಳ ಸಂಖ್ಯೆ 3.65 ಕೋಟಿ ಎಂದು ಸರ್ಕಾರ ಕಳೆದ ತಿಂಗಳು ಸಂಸತ್ತಿಗೆ ತಿಳಿಸಿತ್ತು. ಇದು ಒಟ್ಟು ಜನ್ ಧನ್ ಖಾತೆಗಳ ಶೇ. 8.3% ರಷ್ಟಿದೆ. ಅಂಕಿ-ಅಂಶಗಳ ಪ್ರಕಾರ, 29.54 ಕೋಟಿ ಜನ್ ಧನ್ ಖಾತೆಗಳು ಗ್ರಾಮೀಣ ಮತ್ತು ಅರೆ-ನಗರ ಬ್ಯಾಂಕ್ ಶಾಖೆಗಳಲ್ಲಿವೆ. ಡಿಸೆಂಬರ್ 29, 2021 ಕ್ಕೆ ಅನ್ವಹಿಸುವಂತೆ ಒಟ್ಟು ಜನ್ ಧನ್ ಖಾತೆದಾರರಲ್ಲಿ 24.61 ಕೋಟಿ ಮಹಿಳೆಯರಾಗಿದ್ದಾರೆ. 


ಇದನ್ನೂ ಓದಿ-PMJDY:ಜನ್ ಧನ್ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿ, ರೂ.1.3 ಲಕ್ಷದವರೆಗೆ ಪ್ರಯೋಜನ ಪಡೆಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ