Big News: ದೇಶದ ಕೋಟ್ಯಾಂತರ ಅನ್ನದಾತರಿಗೆ ದೀಪಾವಳಿ ಉಡುಗೊರೆ ನೀಡಿದ ಕೇಂದ್ರ ಸರ್ಕಾರ
Rabi Crop MSP: ರಬಿ ಹಂಗಾಮಿನ 6 ಬೆಳೆಗಳ ಹೊಸ ಕನಿಷ್ಠ ಬೆಂಬಲ ಬೆಲೆಯನ್ನು ಶೇ.3 ರಿಂದ 9 ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಮತ್ತು ರಬಿ ಋತುವಿನ ಈ ಪ್ರಮುಖ ಬೆಳೆಗಳ ಹೊಸ ಬೆಲೆಗಳನ್ನು ಸಹ ಬಿಡುಗಡೆ ಮಾಡಿದೆ.
Rabi MSP 2023-24: ಕೆಲವು ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ಖಾರಿಫ್ ಬೆಳೆಗಳ ಹೊಸ ಕನಿಷ್ಠ ಬೆಂಬಲ ಬೆಲೆ ಬಿಡುಗಡೆ ಮಾಡುವ ಮೂಲಕ ರೈತರಿಗೆ ದೊಡ್ಡ ಪರಿಹಾರವನ್ನು ಒದಗಿಸಿತ್ತು. ಇದೇ ಸರಣಿಯಲ್ಲಿ ಇದೀಗ ಮತ್ತೊಮ್ಮೆ ಕೇಂದ್ರ ಸಂಪುಟ ಸಭೆಯಲ್ಲಿ ರೈತರ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ರಬಿ ಋತುವಿನ 6 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲ, ರಬಿ ಋತುವಿನ ಮುಖ್ಯ ಬೆಳೆಗಳಾದ ಗೋಧಿ, ಹುರುಳಿ, ಉದ್ದು, ಸಾಸಿವೆ ಮುಂತಾದವುಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ ಶೇ.3 ರಿಂದ 9 ರಷ್ಟು ಹೆಚ್ಚಿಸಲು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಮಂಗಳವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ರಬಿ ಬೆಳೆಗಳ ಎಂಎಸ್‌ಪಿ ಕುರಿತು ವಿವರವಾದ ಮಾಹಿತಿಯನ್ನು ನೀಡಿದ್ದಾರೆ.
ಈ ಬೆಳೆಗಳ ಬೆಲೆ ಹೆಚ್ಚಾಗಿದೆ
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಗೋಧಿ, ಬಾರ್ಲಿ, ಹುರುಳಿ, ಉದ್ದು, ಸಾಸಿವೆ ಮತ್ತು ಸೂರ್ಯಕಾಂತಿಗಳ ಹೊಸ ಕನಿಷ್ಠ ಬೆಂಬಲ ಬೆಲೆಗಳ ಕುರಿತು ತಮ್ಮ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಸರ್ಕಾರವು ಗೋಧಿಯ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 110 ರೂ ಹೆಚ್ಚಿಸಿದೆ, ನಂತರ ಇದೀಗ 2023-24 ರ ರಬಿ ಹಂಗಾಮಿಗೆ ಪ್ರತಿ ಕ್ವಿಂಟಲ್ ಗೋಧಿಯನ್ನು ರೂ.2125ಕ್ಕೆ ಖರೀದಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-PM Kisan: ಈ ಒಂದು ತಪ್ಪಿನಿಂದ 4 ಕೋಟಿ ರೈತರಿಗೆ ನಷ್ಟ!
PM Kisan: ಪಿಎಂ ಕಿಸಾನ್ ಸಮ್ಮಾನ್ ನಿಧಿಯ 12ನೇ ಕಂತು ಬಂತು, ತಕ್ಷಣ ಖಾತೆ ಪರಿಶೀಲಿಸಿ
(ಹಕ್ಕುತ್ಯಾಗ- ಈ ಸುದ್ದಿಯಲ್ಲಿ ನೀಡಲಾಗಿರುವ ಮಾಹಿತಿ ಮಾಧ್ಯಮ ವರದಿಗಳನ್ನು ಆಧರಿಸಿದೆ. ಯಾವುದೇ ಸಲಹೆಯನ್ನು ಅನುಸರಿಸುವ ಮುನ್ನ ವಿಷಯ ತಜ್ಞರಸಲಹೆ ಪಡೆಯಲು ರೈತ ಬಾಂಧವರಿಗೆ ಮನವಿ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.