PM Kisan Samman Nidhi Yojana: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 12 ನೇ ಕಂತು ಬಿಡುಗಡೆಯಾಗಿದೆ. ಪ್ರಧಾನಿ ಮೋದಿ ಇಂದು ರೈತರಿಗಾಗಿ ಈ ಕಂತು ಬಿಡುಗಡೆ ಮಾಡಿ, ದೀಪಾವಳಿಯ ಉಡುಗೊರೆಯನ್ನು ನೀಡಿದ್ದಾರೆ. ಯೋಜನೆಯಡಿ 12ನೇ ಕಂತಿನ 2000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗಿದೆ. ದೇಶದ 11 ಕೋಟಿಗೂ ಹೆಚ್ಚು ರೈತರು ಇದರ ಲಾಭ ಪಡೆದಿದ್ದಾರೆ. ನೀವು ಸಹ ಯೋಜನೆಯಡಿ ಫಲಾನುಭವಿಗಳಾಗಿದ್ದರೆ ಮತ್ತು 12 ನೇ ಕಂತಿನ ಹಣ ನಿಮ್ಮ ಖಾತೆಗೆ ಬರಬೇಕಿದ್ದರೆ, ನೀವು ಖಾತೆಗೆ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.
ಆನ್‌ಲೈನ್‌ನಲ್ಲಿ ಖಾತೆಗೆ ಹಣ ಬಂದಿದೆಯೇ ಅಥವಾ ಇಲ್ಲ ಈ ರೀತಿ ಪರಿಶೀಲಿಸಿ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಪ್ರತಿ ವರ್ಷ 6000 ರೂಪಾಯಿ ನೀಡಲಾಗುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2,000 ರೂಪಾಯಿಗಳನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಲಾಗುತ್ತದೆ. ಖಾತೆಗೆ ಹಣ ತಲುಪಿದೆಯೇ ಎಂಬುದನ್ನು ತಿಳಿದುಕೊಳ್ಳಲು, ಮೊದಲು PM ಕಿಸಾನ್‌ನ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಹೋಗಿ. ವೆಬ್‌ಸೈಟ್‌ನಲ್ಲಿರುವ 'ಫಾರ್ಮರ್ಸ್ ಕಾರ್ನರ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಈಗ ಅದರಲ್ಲಿ, ನೀವು 'ಬೆನಿಫಿಶಿಯರಿ ಸ್ಟೇಟಸ್' ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಬಳಿಕ ಹೊಸ ಪುಟ ತೆರೆಯುತ್ತದೆ. ಇದರ ಮೇಲೆ, ಫಲಾನುಭವಿಯು ತನ್ನ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಗಳಲ್ಲಿ ಯಾವುದಾದರೂ ಒಂದು ಆಯ್ಕೆಯನ್ನು ಆರಿಸಬೇಕಾಗುತ್ತದೆ. ಆಯ್ಕೆಯನ್ನು ಆರಿಸಿದ ನಂತರ, ವಿವರಗಳನ್ನು ಭರ್ತಿ ಮಾಡಬೇಕು. 'ಡೇಟಾ ಪಡೆಯಿರಿ' ಆಯ್ಕೆಯ ಕ್ಲಿಕ್ ಮಾಡುವ ಮೂಲಕ ಕಂತುಗಳ ಸ್ಥಿತಿಯನ್ನು ಪರದೆಯ ಮೇಲೆ ನಿಮಗೆ ಕಾಣಿಸಲಿದೆ. ಇಲ್ಲಿಂದ ನಿಮಗೆ ಹಣ ಸಿಕ್ಕಿದೆಯೋ ಇಲ್ಲವೋ ತಿಳಿಯುತ್ತದೆ.
ಹಣ ಸಿಗದಿದ್ದರೆ ಇಲ್ಲಿ ದೂರು ನೀಡಿ
ಪಿಎಂ ಕಿಸಾನ್ ಯೋಜನೆಯ ಹಣ ನಿಮ್ಮ ಖಾತೆಗೆ ತಲುಪಿಲ್ಲದಿದ್ದರೆ, ತಕ್ಷಣ ಸಹಾಯವಾಣಿ ಸಂಖ್ಯೆ ಮತ್ತು ಇಮೇಲ್ ಐಡಿಗೆ ದೂರು ನೀಡಿ. ಪಿಎಂ ಕಿಸಾನ್‌ನ ಸಹಾಯವಾಣಿ ಸಂಖ್ಯೆ 155261. ಇದಲ್ಲದೆ, ನೀವು ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 18001155266 ಮತ್ತು ಪಿಎಂ ಕಿಸಾನ್ ಲ್ಯಾಂಡ್‌ಲೈನ್ ಸಂಖ್ಯೆ 011-23381092, 011-24300606 ನಲ್ಲಿ ನಿಮ್ಮ ದೂರನ್ನು ನೋಂದಾಯಿಸಬಹುದು. ನಿಮ್ಮ ದೂರನ್ನು ನೀವು pmkisan-ict@gov.in ಇಮೇಲ್ ಐಡಿಗೆ ಕಳುಹಿಸಬಹುದು.
ಹಣ ಏಕೆ ಬರುವುದಿಲ್ಲ?
ಒಂದು ವೇಳೆ ಯಾವುದೇ ಫಲಾನುಭವಿಯು ತನ್ನ ಖಾತೆಯಲ್ಲಿ ಇ-ಕೆವೈಸಿ ಮಾಡಿಸದಿದ್ದರೆ, ಅಂತಹ ಫಲಾನುಭವಿಯ ಖಾತೆಗೆ ಪಿಎಂ ಕಿಸಾನ್ ಯೋಜನೆಯ 12 ನೇ ಕಂತಿಗೆ ಹಣ ಬರುವುದಿಲ್ಲ. ನೋಂದಾಯಿತ ರೈತರಿಗೆ ಸರ್ಕಾರ ಇ-ಕೆವೈಸಿ ಕಡ್ಡಾಯಗೊಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಇ-ಕೆವೈಸಿ ಮಾಡದಿದ್ದರೆ, ತಕ್ಷಣ ಅದನ್ನು ಮಾಡಿಸಿ. ಇ-ಕೆವೈಸಿ ಮಾಡಿದ ನಂತರ ನಿಂತು ಹೋದ ಎಲ್ಲಾ ಕಂತುಗಳ ಹಣ ಬಿಡುಗಡೆಯಾಗಲಿದೆ.
ನೀವು ಆನ್‌ಲೈನ್‌ನಲ್ಲಿ ಈ ರೀತಿ ಇ-ಕೆವೈಸಿ ಮಾಡಬಹುದು
>> PM-Kisan ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
>> ಬಲಭಾಗದಲ್ಲಿರುವ eKYC ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
>> ಆಧಾರ್ ಕಾರ್ಡ್ ಸಂಖ್ಯೆ, ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಸರ್ಚ್ ಗುಂಡಿಯ ಮೇಲೆ ಕ್ಲಿಕ್ ಮಾಡಿ.
>> ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಅಲ್ಲಿ ನಮೂದಿಸಿ.
>> ಇದರ ನಂತರ 'Get OTP' ಕ್ಲಿಕ್ ಮಾಡಿ ಮತ್ತು ಮೊಬೈಲ್‌ನಲ್ಲಿ ಬಂದ OTP ಅನ್ನು ನಮೂದಿಸಿ.
>> ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, KYC ನವೀಕರಣವನ್ನು ಮಾಡಲಾಗುತ್ತದೆ.
ಇದನ್ನೂ ಓದಿ-Ration Card : ಪಡಿತರ ಅಂಗಡಿಯಲ್ಲಿ ಡಿಸ್ಕೌಂಟ್ ಅಲ್ಲಿ ಸಿಗಲಿದೆ LPG ಸಿಲಿಂಡರ್!
ಯಾವ ರೈತರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ?
12ನೇ ಕಂತಿನ ಹಣ ಬಿಡುಗಡೆಗೂ ಮುನ್ನವೇ ಅನರ್ಹ ರೈತರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಅವರ ಖಾತೆಗೆ 12ನೇ ಕಂತಿನ ಹಣ ಬರುವುದಿಲ್ಲ. ಅರ್ಹತೆ ಇಲ್ಲದ ರೈತರು ಮತ್ತು ಇ-ಕೆವೈಸಿ ಮಾಡಿಸದ ರೈತರನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಆದರೆ, ಇಕೆವೈಸಿ ಮಾಡಿದರೆ ರೈತರ ಖಾತೆಗೆ 2000 ರೂ.ಬರುತ್ತದೆ. ಈ ಬಾರಿ ಅರ್ಹತೆ ಇಲ್ಲದ ರೈತರ ಬಗ್ಗೆಯೇ ಚರ್ಚೆ ನಡೆದಿದೆ. ಉತ್ತರ ಪ್ರದೇಶ ಒಂದೇ ರಾಜ್ಯದಲ್ಲಿ 21 ಲಕ್ಷಕ್ಕೂ ಹೆಚ್ಚು ರೈತರ ನೋಂದಣಿ ರದ್ದುಪಡಿಸಲಾಗಿದೆ.
ಇದನ್ನೂ ಓದಿ-4 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯ ಸಿಎನ್ಜಿ ಕಾರುಗಳಿವು .! ನೀಡುತ್ತದೆ 35KMಗಿಂತ ಅಧಿಕ ಮೈಲೇಜ್
ಪಿಎಂ ಕಿಸಾನ್ ಯೋಜನೆ ಯಾವಾಗ ಆರಂಭಗೊಂಡಿದೆ?
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2019 ರಲ್ಲಿ ಆರಂಭಗೊಂಡಿದೆ. ಪ್ರಧಾನಿ ಮೋದಿ ಅವರೇ ಈ ಯೋಜನೆಗೆ ಚಾಲನೆ ನೀಡಿದ್ದರು. ಯೋಜನೆಯ ಹಣ ನೇರವಾಗಿ ಫಲಾನುಭವಿ ರೈತರ ಖಾತೆಗೆ ತಲುಪುತ್ತದೆ. ಯೋಜನೆಯು ಪ್ರಾರಂಭವಾದಾಗಿನಿಂದ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಈ ಯೋಜನೆಯಡಿ ಇದುವರೆಗೆ ದೇಶಾದ್ಯಂತ ಇರುವ ರೈತರಿಗೆ 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆರ್ಥಿಕ ಸಹಾಯ ಒದಗಿಸಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.