ನವದೆಹಲಿ:  Multiple Bank Accounts - ಒಂದು ವೇಳೆ ನೀವೂ ಕೂಡ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು  ಹೊಂದಿದ್ದರೆ, ಈ ಸುದ್ದಿ ನಿಮಗಾಗಿ. ಬಹು ಬ್ಯಾಂಕ್ ಖಾತೆಗಳಿಂದ ನೀವು ನಷ್ಟ ಅನುಭವಿಸುವ ಸಾಧ್ಯತೆ ಇದೆ. ಏಕೆಂದರೆ ತೆರಿಗೆ ಮತ್ತು ಹೂಡಿಕೆ ತಜ್ಞರು ಒಂದೇ ಖಾತೆಯನ್ನು ಹೊಂದಲು ಸಲಹೆ ನೀಡುತ್ತಾರೆ. ಏಕೆಂದರೆ ಒಂದೇ ಖಾತೆಯನ್ನು ಹೊಂದಿದವರಿಗೆ ರಿಟರ್ನ್ ಸಲ್ಲಿಸಲು ಸುಲಭವಾಗುತ್ತದೆ ಎಂದು ಅವರು ಶಿಫಾರಸ್ಸು ಮಾಡುತ್ತಾರೆ. 


COMMERCIAL BREAK
SCROLL TO CONTINUE READING

ಬಹು ಬ್ಯಾಂಕ್ ಖಾತೆಗಳಿಂದ ನಷ್ಟ ಏನು? Bank Rules
ನೀವು ಬಹು ಬ್ಯಾಂಕುಗಳಲ್ಲಿ ಖಾತೆಯನ್ನು ಹೊಂದಿದ್ದರೆ, ಅವುಗಳನ್ನು ನಿರ್ವಹಿಸುವುದು ಒಂದು ದೊಡ್ಡ ಸವಾಲಿನ ಕೆಲಸ. ಏಕೆಂದರೆ ಪ್ರತ್ಯೇಕ ಬ್ಯಾಂಕ್ ತನ್ನದೇ ಆದ ಪ್ರತ್ಯೇಕ ನಿರ್ವಹಣಾ ಶುಲ್ಕ, ಡೆಬಿಟ್ ಕಾರ್ಡ್ ಶುಲ್ಕ, SMS ಶುಲ್ಕ, ಸೇವಾ ಶುಲ್ಕ, ಕನಿಷ್ಠ ಬ್ಯಾಲೆನ್ಸ್ ಶುಲ್ಕ ಹೊಂದಿರುತ್ತದೆ. ಅಂದರೆ, ನೀವು ಖಾತೆಗಳನ್ನು ಹೊಂದಿರುವ ಬಂಕುಗಳ ಸಂಖ್ಯೆ, ಅದಕ್ಕಾಗಿ ನೀವು ವಿವಿಧ ಶುಲ್ಕಗಳನ್ನೂ ಪಾವತಿಸಬೇಕು. ಇದಲ್ಲದೆ, ಪ್ರತ್ಯೇಕ ಬ್ಯಾಂಕುಗಳ ನಿಯಮಾನುಸಾರ ನೀವು ಬ್ಯಾಂಕ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯದೆ ಹೋದರೆ, ಬ್ಯಾಂಕುಗಳು ನಿಮಗೆ ಭಾರಿ ದಂಡ ವಿಧಿಸುತ್ತವೆ.


ಸಿಂಗಲ್ ಬ್ಯಾಂಕ್ ಖಾತೆ ಹೊಂದಿದ್ದರೆ ಮರುಪಾವತಿ ಸುಲಭ Bank Account Update
ತೆರಿಗೆ ಪಾವತಿದಾರರ ಪ್ರಕಾರ, ಒಂದೇ ಖಾತೆಯನ್ನು ಹೊಂದಿದ್ದರೆ, ಆದಾಯ ತೆರಿಗೆ ಮರುಪಾವತಿ ಸುಲಭ ಎನ್ನುತ್ತಾರೆ. ಏಕೆಂದರೆ, ನಿಮ್ಮ ಆದಾಯದ ಸಂಪೂರ್ಣ ಮಾಹಿತಿ ಒಂದೇ ಖಾತೆಯಲ್ಲಿರುತ್ತದೆ. ಬೇರೆ ಬೇರೆ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ, ಈ ಲೆಕ್ಕಾಚಾರ ಸ್ವಲ್ಪ ಕಠಿಣ ಹಾಗೂ ಸವಾಲಿನಿಂದ ಕೂಡಿರುತ್ತದೆ. ಇಂತಹುದರಲ್ಲಿ ಆದಾಯ ತೆರಿಗೆ ವಿಭಾಗ ನಿಮಗೆ ನೋಟಿಸ್ ಕೂಡ ಜಾರಿಗೊಳಿಸಬಹುದು. ಇಂತಹ ಸಮಸ್ಯೆಗಳ ನಿವಾರಣೆಗೆ ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ವ್ಯವಸ್ಥೆಯನ್ನು ಘೋಷಿಸಿದ್ದರು. 


ತೆರಿಗೆ ಪಾವತಿದಾರರು ಲೆಕ್ಕಾಚಾರ ಒದಗಿಸಬೇಕು Multiple Bank Accounts
ಈ ಹೊಸ ವ್ಯವಸ್ಥೆಯ ಅಡಿ ಇದೀಗ ವೇತನದ ಆದಾಯದ ಹೊರತಾಗಿ ಇತರೆ ಸೋರ್ಸ್ ಗಳಿಂದಾಗುವ ಆದಾಯ ಅಂದರೆ ಉದಾಹರಣೆಗಾಗಿ ಡಿವಿಡೆಂಡ್ ಇನ್ಕಂ, ಕ್ಯಾಪಿಟಲ್ ಗೆನ್ ಇನ್ಕಂ, ಬ್ಯಾಂಕ್ ಡಿಪಾಸಿಟ್ ಇಂಟರೆಸ್ಟ್ ಇನ್ಕಂ, ಪೋಸ್ಟ ಆಫಿಸ್ ಇಂಟರೆಸ್ಟ್ ಇನ್ಕಂ ಮಾಹಿತಿ ಮೊದಲಿನಿಂದಲೇ ತುಂಬಿರಲಿದೆ. ಇದುವರೆಗೆ ತೆರಿಗೆ ಪಾವತಿದಾರರು ಇವುಗಳ ಪ್ರತ್ಯೇಕ ಲೆಕ್ಕಾಚಾರ ಮಾಡಬೇಕಾಗುತ್ತಿತ್ತು. ಹಲವು ಬಾರಿ ಮರೆತು ಹೋಗುವ ಕಾರಣ ಇದರಿಂದ ತೊಂದರೆ ಎದುರಾಗುತ್ತಿತ್ತು. ಆದರೆ, ಇದೀಗ ಹೊಸ ವ್ಯವಸ್ಥೆಯ ಅಡಿ ಈ ಎಲ್ಲಾ ಮಾಹಿತಿ ಮೊದಲೇ ಲಭ್ಯವಿರಲಿದೆ. ಈ ಮಾಹಿತಿಯನ್ನು PAN card ಸಹಾಯದಿಂದ ಪಡೆದುಕೊಳ್ಳಲಾಗುತ್ತಿದೆ. 


ಖಾತೆ ನಿಷ್ಕ್ರೀಯವಾಗಲಿದೆ Money Deduction
ಒಂದು ವರ್ಷದವರೆಗೆ ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆಯಲ್ಲಿ ಯಾವುದೇ ವಹಿವಾಟು ನಡೆಸದಿದ್ದರೆ, ಅದು Inactive Bank Account ಆಗಿ ಬದಲಾಗುತ್ತದೆ. ಎರಡು ವರ್ಷಗಳವರೆಗೆ ಯಾವುದೇ ವಹಿವಾಟು ಇಲ್ಲದಿದ್ದರೆ, ಅದನ್ನು Dormant Account ಅಥವಾ Inoperative ಖಾತೆಯನ್ನಾಗಿ ಪರಿವರ್ತಿಸಲಾಗುತ್ತದೆ. ಇಂತಹ ಬ್ಯಾಂಕ್ ಖಾತೆಯಿಂದ ವಂಚನೆಯ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಸಕ್ರಿಯ ಖಾತೆಗಳೊಂದಿಗೆ, ಆಂತರಿಕ ಮತ್ತು ಬಾಹ್ಯ ವಂಚನೆಯ ಸಾಧ್ಯತೆಗಳು ಹೆಚ್ಚು ಎಂದು ಬ್ಯಾಂಕರ್‌ಗಳು ಹೇಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಆ ಖಾತೆಗಳ ವಿವರಗಳನ್ನು ಪ್ರತ್ಯೇಕ ಲೆಡ್ಜರ್‌ನಲ್ಲಿ ಇರಿಸಲಾಗುತ್ತದೆ.


ಇದನ್ನೂ ಓದಿ-PM Kisan : ರೈತರಿಗೆ ಈಗ ಪ್ರತಿ ವರ್ಷ ₹6000 ಬದಲಿಗೆ ಸಿಗಲಿದೆ ₹36000 : ಈಗಲೇ ಈ ಕೆಲಸ ಮಾಡಿ


ಖಾಸಗಿ ಬ್ಯಾಂಕ್ ಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತವೆ CIBIL Score
ಖಾಸಗಿ ಬ್ಯಾಂಕುಗಳ ಕನಿಷ್ಠ ಬ್ಯಾಲೆನ್ಸ್ ಶುಲ್ಕವು ತುಂಬಾ ಹೆಚ್ಚಾಗಿದೆ. ಉದಾಹರಣೆಗೆ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕನಿಷ್ಠ ಬ್ಯಾಲೆನ್ಸ್ 10 ಸಾವಿರ ರೂ ಇದೆ. ಗ್ರಾಮೀಣ ಪ್ರದೇಶಗಳಿಗೆ ಈ ಶುಲ್ಕ 5000 ರೂ. ಇದೆ. ಈ ಬ್ಯಾಲೆನ್ಸ್ ಅನ್ನು ನೀವು ಕಾಯ್ದುಕೊಳ್ಳದೆ ಹೋದಲ್ಲಿ ಒಂದು ತ್ರೈಮಾಸಿಕಕ್ಕೆ ದಂಡವು 750 ರೂ ಇದೆ. ಇತರ ಖಾಸಗಿ ಬ್ಯಾಂಕುಗಳಿಗೂ ಕೂಡ ಇದೇ ರೀತಿಯ ಶುಲ್ಕಗಳು ಅನ್ವಯವಾಗುತ್ತವೆ. ನೀವು ತಪ್ಪಾಗಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿದ್ದರೆ, ಅನಗತ್ಯವಾಗಿ ನೀವು ಪ್ರತಿ ತಿಂಗಳು ನೂರಾರು ರೂಪಾಯಿಗಳನ್ನು ಪಾವತಿಸಬೇಕಾಗಬಹುದು. ಇದು ನಿಮ್ಮ CIBIL Score ಮೇಲೂ ಪರಿಣಾಮ ಬೀರುತ್ತದೆ.


ಇದನ್ನೂ ಓದಿ-Aadhaar Cardಗೆ ಸಂಬಂಧಿಸಿದ ಈ ಮುಖ್ಯ ಮಾಹಿತಿ ತಿಳಿದಿರಲಿ, UIDAI ನೀಡಿದೆ ಮಾಹಿತಿ


ಸಾವಿರಾರು ರೂ.ಗಳ ನಷ್ಟ ಸಂಭವಿಸಬಹುದು
ಒಂದು ವೇಳೆ ನೀವೂ ಕೂಡ ಹಲವಾರು ಬ್ಯಾಂಕ್ ಗಳಲ್ಲಿ ಖಾತೆಯನ್ನು ಹೊಂದಿದ್ದರೆ, ಕನಿಷ್ಠ ಬ್ಯಾಲೆನ್ಸ್ ಶುಲ್ಕ ನಿರ್ವಹಿಸಲು ಪ್ರತಿ ತಿಂಗಳು ಸಾವಿರಾರು ರೂ. ಖರ್ಚಾಗಲಿದೆ. ಇದು ನಿಮ್ಮ ಹೂಡಿಕೆಯ ಮೇಲೆ ವ್ಯಕ್ತಿರಿಕ್ತ ಪರಿಣಾಮ ಬೀರಲಿದೆ. ಯಾವ ಹಣದ ಮೇಲೆ ನಿಮಗೆ ಕನಿಷ್ಠ ಶೇ.7ರಿಂದ ಶೇ.8ರಷ್ಟು ಆದಾಯ ಬರಬೇಕೋ ಆ ಹಣ ನಿಮ್ಮ ಮಿನಿಮಮ್ ಬ್ಯಾಲೆನ್ಸ್ ಹೂಡಿಕೆಗೆ ಬುಕ್ ಆಗಲಿದೆ. ಇದೆ ಹಣವನ್ನು ನೀವು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡಿ ಶೇ.7 ರಿಂದ ಶೇ.8 ರಷ್ಟು ಆದಾಯ ಪಡೆಯಬಹುದು.


ಇದನ್ನೂ ಓದಿ-7th Pay Commission : DA ಏರಿಕೆ ನಂತರ ಕೇಂದ್ರ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ : ಮತ್ತೆ ವೇತನ ಹೆಚ್ಚಳ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ