PPF Interest Rate : ನೀವು PPF ಖಾತೆ (PPF) ಅಥವಾ ಸುಕನ್ಯಾ ಸಮೃದ್ಧಿ ಯೋಜನೆ (SSY) ಅಥವಾ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಮೂಲಕ ಹಣವನ್ನು ಹೂಡಿಕೆ ಮಾಡುತ್ತಿದ್ದರೆ ಈ ಸುದ್ದಿ ನೀವು ಓದಲೇ ಬೇಕು. ಸಣ್ಣ ಉಳಿತಾಯ ಯೋಜನೆಗಳ ಅಡಿಯಲ್ಲಿ, ನೀವು ಪ್ರತಿ ಹಣಕಾಸು ವರ್ಷದಲ್ಲಿ ನಿಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಜಮಾ ಮಾಡಬೇಕು. ಖಾತೆಯನ್ನು ಸಕ್ರಿಯವಾಗಿರಿಸಲು, ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸುವುದು ಇಲ್ಲಿ ಬಹಳ ಮುಖ್ಯ. ಖಾತೆದಾರರು ಪ್ರತಿ ವರ್ಷ ಕನಿಷ್ಠ ಮೊತ್ತವನ್ನು ಠೇವಣಿ ಮಾಡಲು ವಿಫಲವಾದರೆ, ಖಾತೆಯನ್ನು ಫ್ರೀಜ್ ಮಾಡುವ ಸಾಧ್ಯತೆ ಇರುತ್ತದೆ.  ಅಲ್ಲದೆ ಖಾತೆದಾರರ ಮೇಲೆ ದಂಡವನ್ನು ಕೂಡಾ ವಿಧಿಸಬಹುದು.


COMMERCIAL BREAK
SCROLL TO CONTINUE READING

ಪ್ರಸಕ್ತ ಹಣಕಾಸು ವರ್ಷದಲ್ಲಿ PPF, NPS ಮತ್ತು ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಠೇವಣಿ ಮಾಡಲು ಮಾರ್ಚ್ 31, 2024 ಕೊನೆಯ ದಿನಾಂಕವಾಗಿದೆ. 2023 ರ ಬಜೆಟ್‌ನಲ್ಲಿ, ಹೊಸ ತೆರಿಗೆ ಪದ್ಧತಿಯನ್ನು ಸರ್ಕಾರವು ಹೆಚ್ಚು ಆಕರ್ಷಕವಾಗಿ ಮಾಡಿದೆ. ಏಪ್ರಿಲ್ 1, 2023 ರಿಂದ ಹೊಸ ತೆರಿಗೆ  ಪದ್ಧತಿ ಅಡಿಯಲ್ಲಿ, ಆದಾಯ ತೆರಿಗೆ ಸ್ಲ್ಯಾಬ್ ಅನ್ನು ಬದಲಾಯಿಸಲಾಯಿತು. ಒಂದು ಆರ್ಥಿಕ ವರ್ಷದಲ್ಲಿ ಮೂಲ ವಿನಾಯಿತಿ ಮಿತಿಯನ್ನು  2.5 ಲಕ್ಷದಿಂದ ರೂ 3 ಲಕ್ಷಕ್ಕೆ ಹೆಚ್ಚಿಸಲಾಯಿತು. ಇದಲ್ಲದೇ ಹೊಸ ತೆರಿಗೆ ಪದ್ಧತಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡಾ ಲಭ್ಯವಿದೆ.ಇದರ ಅಡಿಯಲ್ಲಿ, 7 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.


ಇದನ್ನೂ ಓದಿ : ಕಬ್ಬು ಬೆಳೆಗಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್: ಭರ್ಜರಿ ಗಿಫ್ಟ್ ನೀಡಲು ಕೊನೆಯ ಸಂಪುಟ ಸಭೆಯಲ್ಲಿ ನಿರ್ಧಾರ


ಕನಿಷ್ಠ ಮೊತ್ತವನ್ನು ಠೇವಣಿ ಮಾಡದಿದ್ದರೆ ದಂಡ ತೆರಬೇಕಾದೀತು : 
ಪ್ರಸಕ್ತ ಹಣಕಾಸು ವರ್ಷ 2023-24ಕ್ಕೆ ತೆರಿಗೆಯನ್ನು ಪಾವತಿಸಲು ನೀವು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿರಬಹುದು. ಹಾಗಿದ್ದರೆ ಕಳೆದ ಆರ್ಥಿಕ ವರ್ಷದವರೆಗೆ ಹಳೆಯ ತೆರಿಗೆ ಪದ್ಧತಿಯ ಅಡಿಯಲ್ಲಿ ತೆರಿಗೆ ಪಾವತಿಸುವುದರ ಜೊತೆಗೆ ಸಣ್ಣ ಉಳಿತಾಯ ಯೋಜನೆಗಳಾದ PPF, ಸುಕನ್ಯಾ ಸಮೃದ್ಧಿ ಯೋಜನೆ (SSY) ಮತ್ತು NPSಗಳಲ್ಲಿ  ಹೂಡಿಕೆ ಮಾಡುತ್ತಿರುತ್ತೀರಿ ಎಂದುಕೊಳ್ಳೋಣ. ಇದೀಗ ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿದರೂ ಸಹ, ಈ ಉಳಿತಾಯ ಯೋಜನೆಗಳಲ್ಲಿನ ಹೂಡಿಕೆಗಳ ಮೇಲಿನ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯುವುಡು ಸಾಧ್ಯವಾಗುವುದಿಲ್ಲ. ಈ ಎಲ್ಲಾ ಖಾತೆಗಳಲ್ಲಿ ಕನಿಷ್ಠ ಮೊತ್ತವನ್ನು ಠೇವಣಿ ಮಾಡದಿದ್ದರೆ ದಂಡವನ್ನು ತೆರೆಬೇಕಾಗುತ್ತದೆ. 


PPF ನಲ್ಲಿ ಠೇವಣಿ ಇಡಲು ಎಷ್ಟು ಹಣ ಬೇಕು? : 
PPF ನಿಯಮಗಳು 2019 ರ ಪ್ರಕಾರ, ಪ್ರತಿ ಹಣಕಾಸು ವರ್ಷದಲ್ಲಿ PPF ಖಾತೆಯಲ್ಲಿ ಕನಿಷ್ಠ 500 ರೂ. ಠೇವಣಿ  ಮಾಡಬೇಕಾಗುತ್ತದೆ. ಕನಿಷ್ಠ ಮೊತ್ತವನ್ನು ಠೇವಣಿ ಮಾಡದಿದ್ದರೆ ಪಿಪಿಎಫ್ ಖಾತೆ ನಿಷ್ಕ್ರಿಯವಾಗುತ್ತದೆ. PPF ಖಾತೆಯು ನಿಷ್ಕ್ರಿಯವಾಗಿರುವಾಗ ಸಾಲ ಮತ್ತು ಹಿಂಪಡೆಯುವ ಸೌಲಭ್ಯಗಳು ಲಭ್ಯವಿರುವುದಿಲ್ಲ. ಖಾತೆ ಡೀಫಾಲ್ಟ್ ಆಗಿದ್ದಲ್ಲಿ ಪ್ರತಿ ವರ್ಷ 50 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಡೀಫಾಲ್ಟ್ ಶುಲ್ಕದ ಹೊರತಾಗಿ, ಠೇವಣಿದಾರರು ಪ್ರತಿ ವರ್ಷ ಕನಿಷ್ಠ 500 ರೂ. ಪಾವತಿಸಬೇಕಾಗುತ್ತದೆ. 


ಇದನ್ನೂ ಓದಿ : Gold Rate: ಮತ್ತೆ ಗಗನ ಕುಸುಮವಾಯ್ತು ಬಂಗಾರ… ಇಂದು ಎಷ್ಟಾಗಿದೆ ಗೊತ್ತಾ 10 ಗ್ರಾಂ ಚಿನ್ನದ ಬೆಲೆ?


ಸುಕನ್ಯಾ ಸಮೃದ್ಧಿ ಯೋಜನೆ : 
ಹೆಣ್ಣು ಮಗುವಿಣ ಹೆಸರಿನಲ್ಲಿ ಹಣ ಉಳಿತಾಯ ಮಾಡಲು ಬಯಸುವವರಿಗೆ ತೆರಿಗೆ ಉಳಿಸುವ ಹೂಡಿಕೆಯ ಆಯ್ಕೆಯಾಗಿದೆ. SSY ಯೋಜನೆಯ ನಿಯಮಗಳ ಪ್ರಕಾರ, ಖಾತೆದಾರರು ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ 250 ರೂ. ಉಳಿತಾಯ ಮಾಡಬೇಕಾಗುತ್ತದೆ.  ಒಂದು ಹಣಕಾಸು ವರ್ಷದಲ್ಲಿ ಖಾತೆಯಲ್ಲಿ ಕನಿಷ್ಠ ರೂ 250 ಠೇವಣಿ ಮಾಡದಿದ್ದರೆ ಸುಕನ್ಯಾ ಖಾತೆಯನ್ನು ಡೀಫಾಲ್ಟ್ ಖಾತೆ ಎಂದು ಪರಿಗಣಿಸಲಾಗುತ್ತದೆ. ಯೋಜನೆಯ ನಿಯಮಗಳ ಪ್ರಕಾರ,  ಯಾವುದೇ ಡೀಫಾಲ್ಟ್ ಖಾತೆಯನ್ನು ಮೆಚ್ಯೂರಿಟಿಯ ಮೊದಲು ಯಾವುದೇ ಸಮಯದಲ್ಲಿ ಪುನರುಜ್ಜೀವನಗೊಳಿಸಲು ಅನುಮತಿ ನೀಡಲಾಗುತ್ತದೆ. ಖಾತೆಯನ್ನು ಪುನರುಜ್ಜೀವನಗೊಳಿಸಲು,  ಡೀಫಾಲ್ಟ್ ಮೊತ್ತವಾಗಿ ಪ್ರತಿ ವರ್ಷಕ್ಕೆ 50 ರೂ.ಯಂತೆ ಪಾವತಿಸಬೇಕಾಗುತ್ತದೆ. 


NPS : 
ಕೆಲವು ತೆರಿಗೆದಾರರು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80CCD(1B) ಅಡಿಯಲ್ಲಿ ಹೆಚ್ಚುವರಿ 50,000 ರೂ. ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿಸಲು NPS ಖಾತೆಯನ್ನು ತೆರೆಯುತ್ತಾರೆ. ಸೆಕ್ಷನ್ 80 ಸಿ ಅಡಿಯಲ್ಲಿ, 50,000 ರೂ.  ಹೂಡಿಕೆಯನ್ನು  1.5 ಲಕ್ಷದ ಮಿತಿಗಿಂತ ಹೆಚ್ಚು ಅನುಮತಿಸಲಾಗಿದೆ. NPS ನಿಯಮಗಳ ಪ್ರಕಾರ,  ಒಬ್ಬ ವ್ಯಕ್ತಿ ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ 1,000 ರೂ.ಹೂಡಿಕೆ ಮಾಡಬೇಕಾಗುತ್ತದೆ. ಆದರೆ ನಿಮ್ಮ ಖಾತೆಯು ನಿಷ್ಕ್ರಿಯವಾಗಿದ್ದರೆ  500 ರೂ. ಠೇವಣಿ ಮಾಡುವ ಮೂಲಕ ಅದನ್ನು ಸಕ್ರಿಯಗೊಳಿಸಬಹುದು. ಆದರೆ ಇಲ್ಲಿ ನೀವು ಹಣಕಾಸಿನ ವರ್ಷದಲ್ಲಿ ಕನಿಷ್ಠ 1000 ರೂ.ಜಮಾ ಮಾಡಲೇ ಬೇಕು. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.