ನವೆಹಲಿ: ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಬಿಗ್ ಅಲರ್ಟ್ ಬಂದಿದೆ. ಮ್ಯೂಚುಯಲ್ ಫಂಡ್‌ ಹೂಡಿಕೆದಾರರು ಮಾರ್ಚ್ 31ರೊಳಗೆ ನಾಮಿನಿಯನ್ನು ಆಯ್ಕೆ ಮಾಡಬೇಕು. ಒಂದು ವೇಳೆ ಈ ಕೆಲಸ ಮಾಡದಿದ್ರೆ ನೀವು ಹೂಡಿಕೆ ಮಾಡಿದ ಹಣ ನಿಮಗೆ ಸಿಗುವುದಿಲ್ಲ. ಏಕೆಂದರೆ ನಾಮಿನಿ ಆಯ್ಕೆ ಮಾಡದಿದ್ರೆ ಹೂಡಿಕೆದಾರರ ಖಾತೆಗಳನ್ನು ಕ್ಲೋಸ್ ಮಾಡಲಾಗುತ್ತದೆ ಮತ್ತು ಹೂಡಿಕೆ ಹಣವನ್ನು ಹಿಂಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ.


COMMERCIAL BREAK
SCROLL TO CONTINUE READING

ಹೂಡಿಕೆದಾರರು ಯಾವುದೇ ನಾಮಿನಿಯನ್ನು ಹೊಂದಿಲ್ಲವೆಂದು ಫಂಡ್ ಹೌಸ್‌ಗಳಿಗೆ ಘೋಷಣೆ ನೀಡಬೇಕಾಗುತ್ತದೆ. ಇದರಿಂದಾಗಿ ಅವರು ನಾಮನಿರ್ದೇಶನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ನೀವು ಹೂಡಿಕೆ ಮಾಡುತ್ತಿರುವ ಮ್ಯೂಚುವಲ್ ಫಂಡ್‍ಗಳಗೆ ನೀವು ನಾಮಿನಿ ಆಯ್ಕೆ ಮಾಡದಿದ್ದರೆ ಕೂಡಲೇ ಈ ಕೆಲಸ ಮಾಡಿ.  


ನಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) 2022ರ ಜೂನ್ 15ರಂದು ಈ ಬಗ್ಗೆ ಸುತ್ತೋಲೆ ಹೊರಡಿಸಿತ್ತು. ಮ್ಯೂಚುವಲ್ ಫಂಡ್ ಗ್ರಾಹಕರು 2022ರ ಆಗಸ್ಟ್ 1 ಅಥವಾ ನಂತರ ನಾಮಿನಿ ವಿವರ ಒದಗಿಸುವುದನ್ನು ಕಡ್ಡಾಯಗೊಳಿಸಿತ್ತು. ನಂತರ ಕೊನೆಯ ದಿನಾಂಕವನ್ನು 2022ರ ಅಕ್ಟೋಬರ್‍ಗೆ ಮುಂದೂಡಿಕೆ ಮಾಡಲಾಗಿತ್ತು. ಅಸ್ತಿತ್ವದಲ್ಲಿರುವ ಎಲ್ಲಾ ಮ್ಯೂಚುಯಲ್ ಫಂಡ್ ಖಾತೆಗಳಿಗೆ (ಜಂಟಿ ಖಾತೆ ಒಳಗೊಂಡಂತೆ) ಇದೀಗ ಕೊನೆಯ ದಿನಾಂಕವನ್ನು 2023ರ ಮಾರ್ಚ್ 31ರವರೆಗೂ ವಿಸ್ತರಿಸಲಾಗಿದೆ. ಈ ಕೊನೆಯ ಅವಕಾಶದಲ್ಲಿಯೂ ನೀವು ನಾಮಿನಿ ಆಯ್ಕೆ ಮಾಡದಿದ್ದರೆ, ನಿಮ್ಮ ಖಾತೆಯಿಂದ ಹಣ ಹಿಂಪಡೆಯಲು ಸಾಧ್ಯವಾಗುವುದಿಲ್ಲ.


ಇದನ್ನೂ ಓದಿ: New Wage Rates 2023-24: ದೇಶಾದ್ಯಂತ ಇರುವ ಕೋಟ್ಯಾಂತರ ಕೂಲಿ ಕಾರ್ಮಿಕರಿಗೆ ಒಂದು ಭಾರಿ ನೆಮ್ಮದಿಯ ಸುದ್ದಿ!


ತಜ್ಞರು ಏನು ಹೇಳುತ್ತಾರೆ?


ಈ ಕ್ರಮದ ಹಿಂದಿನ ಸೆಬಿಯ ಉದ್ದೇಶ ವಿವರಿಸಿದ ಆನಂದ್ ರಾಠಿ ವೆಲ್ತ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ನಿರಂಜನ್ ಬಾಬು ರಾಮಾಯಣಂ, ‘ಈ ಹಿಂದೆ ಅನೇಕ ಹೂಡಿಕೆ ಖಾತೆಗಳನ್ನು ಯಾವುದೇ ನಾಮಿನಿ ಆಯ್ಕೆ ಮಾಡದೆ ತೆರೆಯಲಾಗುತ್ತಿತ್ತು. ಒಂದು ವೇಳೆ ಹೂಡಿಕೆದಾರ ಆಕಸ್ಮಿಕ ಮರಣ ಹೊಂದಿದರೆ ಹೂಡಿಕೆ ಹಣವನ್ನು ನಾಮಿನಿಗೆ ವರ್ಗಾಯಿಸಬಹುದು. ಒಂದು ವೇಳೆ ನಾಮಿನಿಯನ್ನೇ ಆಯ್ಕೆ ಮಾಡದಿದ್ರೆ ಯಾರ ಖಾತೆಗೆ ಹಣ ವರ್ಗಾಯಿಸುವುದು? ಈ ಪ್ರಶ್ನೆಗೆ ಹೂಡಿಕೆದಾರರೇ ಉತ್ತರಿಸಬೇಕು.


ಎಲ್ಲಾ ಮ್ಯೂಚುಯಲ್ ಫಂಡ್ ಪೋರ್ಟ್ಫೋಲಿಯೊಗಳಲ್ಲಿ ಹೂಡಿಕೆದಾರರಿಗೆ ನಾಮನಿರ್ದೇಶನವು ಕಡ್ಡಾಯವಾಗಿದೆ. ನೀವು ಆಫ್‌ಲೈನ್ ಫಿಸಿಕಲ್ ಫಾರ್ಮ್ ಮೂಲಕ ನಾಮನಿರ್ದೇಶನಕ್ಕೆ ಅರ್ಜಿ ಸಲ್ಲಿಸಿದರೆ, ಅದಕ್ಕೆ ಸಹಿ ಹಾಕಬೇಕಾಗುತ್ತದೆ. ಇದರ ಹೊರತಾಗಿ ನೀವು ಆನ್‌ಲೈನ್ ನಾಮನಿರ್ದೇಶನಕ್ಕಾಗಿ ಇ-ಸೈನ್ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಜಂಟಿ ಖಾತೆಗಳನ್ನು ಹೊಂದಿರುವವರು ಸಹ ನಾಮನಿರ್ದೇಶನವನ್ನು ಮಾಡಬೇಕಾಗುತ್ತದೆ. ಬಹುತೇಕರು ಮನೆಯವರಿಗೆ ತಿಳಿಸಿದೆ, ನಾಮಿಯನ್ನು ಆಯ್ಕೆ ಮಾಡದೆ ಹೂಡಿಕೆ ಮಾಡುತ್ತಾರೆ. ಇದರಿಂದ ಅವರಿಗೆ ಹೆಚ್ಚು ನಷ್ಟವಾಗುತ್ತದೆ. ನಾಮಿನಿ ಆಯ್ಕೆ ಮಾಡುವುದು ತುರ್ತು ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತದೆ. ಇದನ್ನು ಹೂಡಿಕೆದಾರರು ಅರ್ಥ ಮಾಡಿಕೊಳ್ಳಬೇಕಾಗಿದೆ.


ಇದನ್ನೂ ಓದಿ:   SBI Special FD Scheme: ಎಸ್ಬಿಐ ಈ ವಿಶೇಷ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಕೇವಲ 5 ದಿನಗಳು ಬಾಕಿ ಉಳಿದಿವೆ, ಸಿಗುತ್ತೆ ಶೇ.7.60ರಷ್ಟು ಬಡ್ಡಿದರದ ಲಾಭ!


SIPನ ಅನುಕೂಲಗಳು ಯಾವುವು?


ಭವಿಷ್ಯ ದೃಷ್ಟಿಯಿಂದ ಜನರು ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಎಫ್‌ಡಿ, ಪಿಎಫ್ ಅಥವಾ ಯಾವುದೇ ಇತರ ಯೋಜನೆಗಳಿಗೆ ಹೋಲಿಸಿದರೆ ಮ್ಯೂಚುವಲ್ ಫಂಡ್‍ ಹೂಡಿಕೆಯಿಂದ ಅವರು ಹೆಚ್ಚಿನ ಆದಾಯ  ಪಡೆಯುತ್ತಾರೆ. ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ಜನರು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಕೆಲವು ಜನಪ್ರಿಯ SIPಗಳ ಮೂಲಕ ಜನರು ಶೇ.12-14ರಷ್ಟು ಆದಾಯ ಪಡೆಯಬಹುದು. SIPನಲ್ಲಿನ ಹೂಡಿಕೆಯು ಸಹ ಅಪಾಯಕಾರಿ ಎಂಬುದನ್ನು ಹೂಡಿಕೆದಾರರು ಗಮನಿಸಬೇಕು. ಉತ್ತಮ SIP ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಉತ್ತಮ ಆದಾಯ ಗಳಿಸಬಹುದು.    


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.