Mutual Fund Investment: ಮ್ಯೂಚುವಲ್ ಫಂಡ್‌ಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಒಂದು ಉತ್ತಮ ವಿಧಾನವಾಗಿದೆ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಅತ್ಯುತ್ತಮ ಸಂಗತಿ ಎಂದರೆ ಫಂಡ್ ಮ್ಯಾನೇಜರ್‌ಗಳ ಸೇವೆ. ಸೂಚ್ಯಂಕಕ್ಕಿಂತ ಹೆಚ್ಚಿನ ಲಾಭ ಪಡೆಯಲು ಮ್ಯೂಚುವಲ್ ಫಂಡ್ ಕಂಪನಿಗಳು ವೃತ್ತಿಪರರನ್ನು ನೇಮಿಸಿಕೊಳ್ಳುತ್ತವೆ. ಆದ್ರೆ, ಹೂಡಿಕೆದಾರರು ಕೇವಲ ಫಂಡ್ ಮ್ಯಾನೇಜರ್ ಅನ್ನು ಅವಲಂಬಿಸುವುದು ಕೆಲವೊಮ್ಮೆ ಹಿನ್ನಡೆಯಾಗಬಹುದು. ಮ್ಯೂಚುವಲ್ ಫಂಡ್ ಹೂಡಿಕೆಯಿಂದ ಹೆಚ್ಚಿನ ಆದಾಯವನ್ನು ಪಡೆಯಲು, ಉತ್ತಮ ಕಾರ್ಯನಿರತ ನಿಧಿಯನ್ನು ಆರಿಸಿದರೆ ಸಾಕಾಗುವುದಿಲ್ಲ ಕಾಲಕಾಲಕ್ಕೆ ಅದರ ಕಾರ್ಯಕ್ಷಮತೆಯನ್ನು ಪರಿಶೀಲಿಸುವುದು ತುಂಬಾ  ಮುಖ್ಯವಾಗಿದೆ. ಇದಕ್ಕಾಗಿ, ಹೂಡಿಕೆದಾರರು ಐದು ಸ್ಮಾರ್ಟ್ ವಿಧಾನಗಳನ್ನು ಬಳಸಬಹುದು. ಇದರ ಮೂಲಕ ನೀವು ನಿಮಗೆ ಬರುವ ಆದಾಯಕ್ಕಿಂತ ಶೇ.1.5 ರಷ್ಟು ಹೆಚ್ಚಿಗೆ ರಿಟರ್ನ್ ಪಡೆಯಬಹುದು.


COMMERCIAL BREAK
SCROLL TO CONTINUE READING

1. ಡೈರೆಕ್ಟ್ ಫಂಡ್ ಆಯ್ಕೆ ಮಾಡಿ - ಹೂಡಿಕೆದಾರರು ತಮ್ಮ ಬಂಡವಾಳವನ್ನು ನೇರ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಆದಾಯವನ್ನು  ಶೇ.1-1.5 ರಷ್ಟು ಹೆಚ್ಚಿಸಬಹುದು.  ಸಾಮಾನ್ಯ ಮ್ಯೂಚುವಲ್ ಫಂಡ್ ಹೂಡಿಕೆಗಿಂತ ನೇರ ಯೋಜನೆ ಹೆಚ್ಚು ಯೋಗ್ಯವಾಗಿದೆ. ಏಕೆಂದರೆ ಹೂಡಿಕೆದಾರರು ಬಂಡವಾಳವನ್ನು ಫಂಡ್ ಹೌಸ್‌ಗೆ ಪಾವತಿಸಬೇಕಾಗಿಲ್ಲ. ಏಕೆಂದರೆ ಅದು ಬ್ರೋಕರೆಜ್ ಒಳಗೊಂಡಿರುತ್ತದೆ ಮತ್ತು ಇದು ಹೂಡಿಕೆಯ ಶೇ.1 ರಿಂದ ಶೇ.1.5 ರಷ್ಟಿರುತ್ತದೆ. ಇದಲ್ಲದೆ ಮ್ಯೂಚುವಲ್ ಫಂಡ್ ಲೋಡ್ ಎಂದರೆ ಫಂಡ್‌ನಲ್ಲಿ ಷೇರುಗಳನ್ನು ಖರೀದಿಸಲು ಪಾವತಿಸಬೇಕಾದ ಶುಲ್ಕ ಎಂದರ್ಥ. ಇದನ್ನು ನಿಧಿ ವ್ಯವಸ್ಥಾಪಕರ ಸಲಹೆ ಅಥವಾ ಸೇವೆಗಳಂತೆ ಮರುಪಾವತಿಸಲಾಗುತ್ತದೆ. ಅಂದರೆ, ನೀವು 10 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದ್ದರೆ, ಹೂಡಿಕೆದಾರರು ನಿಧಿಯನ್ನು ಖರೀದಿಸಲು 1 ಶೇಕಡಾ (100 ರೂಪಾಯಿ) ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರರ್ಥ ಕೇವಲ 9900 ರೂಪಾಯಿಗಳನ್ನು ಮಾತ್ರ ಹೂಡಿಕೆ ಮಾಡಲಾಗುತ್ತದೆ. ಇದಕ್ಕೆ ವಿರುದ್ಧವಾಗಿ, 10 ಸಾವಿರ ರೂಪಾಯಿಗಳನ್ನು ನೇರ ಯೋಜನೆಯಲ್ಲಿ ಹೂಡಿಕೆ ಮಾಡಲಾಗುತ್ತದೆ ಏಕೆಂದರೆ ಈ ಲೋಡ್ ಅನ್ನು ಅದರಲ್ಲಿ ಪರಿಗಣಿಸಲಾಗುವುದಿಲ್ಲ.


2. ಏಕಕಾಲಕ್ಕೆ ಹೂಡಿಕೆ ಮಾಡುವ ಬದಲು SIP ಆಯ್ಕೆ ಮಾಡಿ - ನಿಮ್ಮ ಬಂಡವಾಳವನ್ನು ಒಂದೇ ಮೊತ್ತದಲ್ಲಿ ಹೂಡಿಕೆ ಮಾಡುವ ಬದಲು, ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ಹೂಡಿಕೆ ಮಾಡಿ. ಇದರೊಂದಿಗೆ, ಸಣ್ಣ ಮೊತ್ತವನ್ನು ನಿಯಮಿತವಾಗಿ ಹೂಡಿಕೆ ಮಾಡುವ ಮೂಲಕ ಯೂನಿಟ್ಸಗಳನ್ನೂ ನೇವು ಹೆಚ್ಚಿಸಬಹುದು. ಒಟ್ಟಾರೆ ಹೂಡಿಕೆಗೆ ವಿರುದ್ಧವಾಗಿ SIP ಗಾಗಿ ಉತ್ತಮ ಸಮಯಕ್ಕಾಗಿ ಕಾಯುವ ಅಥವಾ ಯೋಚಿಸುವ ಅವಶ್ಯಕತೆ ಇಲ್ಲ. ಇನ್ನೊಂದೆಡೆ ದೊಡ್ಡ ಮೊತ್ತದ ಹೂಡಿಕೆಯಲ್ಲಿ ಹೂಡಿಕೆದಾರರು ಹೆಚ್ಚಿನ ಲಾಭವನ್ನು ಪಡೆಯಲು ಬಯಸಿದರೆ ಮಾರುಕಟ್ಟೆ ಕುಸಿತಕ್ಕಾಗಿ ಕಾಯಬೇಕು ಆದರೆ ಅದನ್ನು ಊಹಿಸುವುದು ಅಸಾಧ್ಯವಾದ ಕೆಲಸ.


3. ಇಂಡೆಕ್ಸ್ ಫಂಡ್ ನಲ್ಲಿ ಹೂಡಿಕೆ ಮಾಡಿ - ನೇರ ಯೋಜನೆಗಳಂತೆ, ಸೂಚ್ಯಂಕ ನಿಧಿಯಲ್ಲಿ (Index Fund) ಹೂಡಿಕೆ ಮಾಡುವುದು ಹೂಡಿಕೆಯ ವೆಚ್ಚವನ್ನುಕಡಿಮೆ ಮಾಡುತ್ತದೆ.  ಸೂಚ್ಯಂಕ ನಿಧಿಯಲ್ಲಿ ಹೂಡಿಕೆ ಮಾಡುವ ಪ್ರಯೋಜನವೆಂದರೆ ಅದನ್ನು ಮಾರುಕಟ್ಟೆ ಸೂಚ್ಯಂಕದ ಕಾರ್ಯಕ್ಷಮತೆಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ತನ್ಮೂಲಕ, ಇದು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


4. ನಿಮ್ಮ ಹೂಡಿಕೆಯನ್ನು ಡೈವರ್ಸಿಫೈ ಮಾಡಿ - ನಿಮ್ಮ ಬಂಡವಾಳವನ್ನು ಕೇವಲ ಒಂದು ಆಸ್ತಿ ವರ್ಗದಲ್ಲಿ ಹೂಡಿಕೆ ಮಾಡಬೇಡಿ. ಬದಲಾಗಿ, ಹೂಡಿಕೆದಾರರು ತಮ್ಮ ಅಪಾಯದ ಕ್ಷಮತೆಯನ್ನು  ಆಧರಿಸಿ ಬಹು ಆಸ್ತಿ ವರ್ಗಗಳಲ್ಲಿ ಹೂಡಿಕೆ ಮಾಡುವುದು ಸರಿಯಾದ ನಿರ್ಧಾರವಾಗಿದೆ. ಹೂಡಿಕೆದಾರರು ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಹೆಚ್ಚು ರಿಸ್ಕ್ ತೆಗೆದುಕೊಳ್ಳಬಹುದಾದವರು ಸ್ಮಾಲ್ ಕ್ಯಾಪ್ ಫಂಡ್‌ಗಳಲ್ಲಿ ಹೆಚ್ಚಿನ ಬಂಡವಾಳವನ್ನು ಹೂಡಿಕೆ ಮಾಡಬೇಕು. ಸ್ಮಾಲ್ ಕ್ಯಾಪ್ ಹೂಡಿಕೆಗಳು ಹೆಚ್ಚಿನ ಆದಾಯವನ್ನು ನೀಡುವ ಸಾಮರ್ಥ್ಯವನ್ನು ಹೊಂದಿವೆ.


ಇದನ್ನೂ ಓದಿ-ಈ ಬ್ಯಾಂಕ್ ಗ್ರಾಹಕರಿಗೆ ನೀಡುತ್ತಿದೆ 2 ಲಕ್ಷ ರೂ. ಗಳ ಲಾಭ, ಬಳಸಿಕೊಳ್ಳುವುದು ಹೇಗೆ ತಿಳಿಯಿರಿ


5. ಡೆಟ್ vs ಇಕ್ವಿಟಿ ಫಂಡ್ ಹೂಡಿಕೆ - ಡೆಟ್ ಫಂಡ್ ಗಳು ರಿಸ್ಕ್ ಫ್ರೀ ಫಂಡ್ ಗಳಾಗಿರುತ್ತವೆ ಹಾಗೂ ಇದರಲ್ಲಿ ಆದಾಯ ಕೂಡ ಅಂದಾಜಿಸಬಹುದು. ಇದಕ್ಕೆ ವಿರುದ್ಧವಾಗಿ ಇಕ್ವಿಟಿ ಫಂಡ್ ಗಳ ಮೂಲಕ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಆದರೆ, ಇದರಲ್ಲಿ ಮಾರುಕಟ್ಟೆಯ ರಿಸ್ಕ್ ಇರುತ್ತದೆ. ಮ್ಯೂಚವಲ್ ಫಂಡ್ ಗಳ ಮೂಲಕ ಡೆಟ್ ಹಾಗೂ ಇಕ್ವಿಟಿ ಫಂಡ್ ಎರಡರಲ್ಲಿಯೂ ಕೂಡ ಹೂಡಿಕೆ ಮಾಡಬಹುದು. ವಯಸ್ಸು ಹೆಚ್ಚಾದಂತೆ ಹೂಡಿಕೆದಾರರ ಅಪಾಯ ಎದುರಿಸುವ ಸಾಮರ್ಥ್ಯ ಕೂಡ ಕಡಿಮೆಯಾಗುತ್ತದೆ. ಹೀಗಿರುವಾಗ ಹೂಡಿಕೆದಾರರು ಡೆಟ್ ಫಂಡ್ ನಲ್ಲಿ ಅತ್ಯಧಿಕ ಹೂಡಿಕೆ ಮಾಡಬಹುದು. ನಿಮ್ಮ ವಯಸ್ಸನ್ನು 100ಕ್ಕಿಂತ ಕೆಳಗಿಳಿಸಿ, ಬರುವ ಸಂಖ್ಯೆಯಷ್ಟು ಪ್ರತಿಶತವನ್ನು ಇಕ್ವಿಟಿ ಫಂಡ್ ಗಳಲ್ಲಿ ಹೂಡಿಕೆ ಮಾಡಿ. ಒಂದು ವೇಳೆ ಯಾವುದೇ ಹೂಡಿಕೆದಾರರ ರಿಸ್ಕ್ ತೆಗೆದುಕೊಳ್ಳುವ ಕ್ಷಮತೆ ಅಧಿಕವಾಗಿದ್ದರೆ, ಹೇಳಲಾಗಿರುವ ಮಿತಿಗಿಂತ ಶೇ.10-15ರಷ್ಟು ಅಧಿಕ ಹೂಡಿಕೆಯನ್ನು ಇಕ್ವಿಟಿ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು.


ಇದನ್ನೂ ಓದಿ-ಆಧಾರ್ ಗೆ ಸಂಬಂಧಿಸಿದ ಈ ಕೆಲಸವನ್ನು ತಕ್ಷಣ ಮಾಡಿ ಮುಗಿಸಿ, ಇಲ್ಲವಾದರೆ ತೆರಬೇಕಾದೀತು ದಂಡ


6. ಪರ್ಫಾರ್ಮೆನ್ಸ್ ರಿವ್ಯೂ ಮಾಡಲು ಮರೆಯಬೇಡಿ - ಹೂಡಿಕೆದಾರರು ಕಾಲಕಾಲಕ್ಕೆ ತಮ್ಮ ಹೂಡಿಕೆಯ ಪರಫಾರ್ಮೆನ್ಸ್ ಪರಿಶೀಲಿಸಲು ಮರೆಯಬೇಡಿ ಹಾಗೂ ಅವಶ್ಯಕತೆ ಬಿದ್ದರೆ, ನಿಮ್ಮ ಹೂಡಿಕೆಯನ್ನು ಸರಿಯಾದ ಫಂಡ್ ಗಳಲ್ಲಿ ಹೂಡಿಕೆ ಮಾಡಿ. ಹೂಡಿಕೆದಾರರ ಪ್ರಕಾರ ವಾರ್ಷಿಕವಾಗಿ ಕನಿಷ್ಠ ಎರಡು ಬಾರಿ ಪೋರ್ಟ್ಫೋಲಿಯೋ ರಿವ್ಯೂ ಮಾಡಬೇಕು. ಒಂದು ವೇಳೆ ಫಂಡ್ ಪರ್ಫಾರ್ಮೆನ್ಸ್ ಗೆ ಅನುಗುಣವಾಗಿ ಇಲ್ಲ ಎಂದಾದಲ್ಲಿ ಎಕ್ಸಿಟ್ ಮಾಡುವ ಮೊದಲು ಇಂಡಸ್ಟ್ರಿ ಪರ್ಫಾರ್ಮೆನ್ಸ್ ಅವಶ್ಯವಾಗಿ ಪರಿಶೀಲಿಸಿ.


ಇದನ್ನೂ ಓದಿ-National Pension Scheme: ಪ್ರತಿದಿನ 50 ರೂ. ಹೂಡಿದರೆ ಸಿಗಲಿದೆ 34 ಲಕ್ಷ ರೂ. ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ