National Pension Scheme: ಪ್ರತಿದಿನ 50 ರೂ. ಹೂಡಿದರೆ ಸಿಗಲಿದೆ 34 ಲಕ್ಷ ರೂ. ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ

 National Pension Scheme: ವೃದ್ಧಾಪ್ಯದ ಜೀವನವನ್ನು ನೆಮ್ಮದಿಯಾಗಿ ಕಳೆಯಬೇಕಾದರೆ, ಸರಿಯಾದ ಸಮಯದಲ್ಲಿ,  ಸರಿಯಾದ ಜಾಗದಲ್ಲಿ ಹೂಡಿಕೆ ಮಾಡುವುದು ಬಹಳ ಮುಖ್ಯ.

Written by - Ranjitha R K | Last Updated : Aug 17, 2021, 02:55 PM IST
  • ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮಾಡಬಹುದು ಸುರಕ್ಷಿತ ಹೂಡಿಕೆ
  • 50 ರೂ.ಗಳ ಹೂಡಿಕೆಯ ಮೇಲೆ ಸಿಗಲಿದೆ 34 ಲಕ್ಷ ರೂಪಾಯಿ
  • ಈ ಸರ್ಕಾರಿ ಯೋಜನೆಯ ಬಗ್ಗೆ ವಿವರವಾಗಿ ತಿಳಿಯಿರಿ
National Pension Scheme: ಪ್ರತಿದಿನ 50 ರೂ. ಹೂಡಿದರೆ ಸಿಗಲಿದೆ   34 ಲಕ್ಷ  ರೂ.  ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ  title=
ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮಾಡಬಹುದು ಸುರಕ್ಷಿತ ಹೂಡಿಕೆ (file photo)

ನವದೆಹಲಿ:  National Pension Scheme: ವೃದ್ಧಾಪ್ಯದ ಜೀವನವನ್ನು ನೆಮ್ಮದಿಯಾಗಿ ಕಳೆಯಬೇಕಾದರೆ, ಸರಿಯಾದ ಸಮಯದಲ್ಲಿ,  ಸರಿಯಾದ ಜಾಗದಲ್ಲಿ ಹೂಡಿಕೆ ಮಾಡುವುದು ಬಹಳ ಮುಖ್ಯ. ನಿವೃತ್ತಿಯ ನಂತರದ ಜೀವನಕ್ಕಾಗಿ ಹೂಡಿಕೆ ಮಾಡಲು ಬಯಸುವುದಾದರೆ ಇರುವ ಉತ್ತಮ ಆಯ್ಕೆ ಎಂದರೆ ರಾಷ್ಟ್ರೀಯ ಪಿಂಚಣಿ ಯೋಜನೆ (National pension Scheme). ಉದ್ಯೋಗವನ್ನು ಆರಂಭಿಸಿದ ತಕ್ಷಣ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನಿವೃತ್ತಿಯ ಸಮಯದಲ್ಲಿ ನೀವು 34 ಲಕ್ಷ ರೂಪಾಯಿಗಳಷ್ಟು ದೊಡ್ಡ ಮೊತ್ತವನ್ನು ಪಡೆಯಬಹುದು. ಇದಕ್ಕಾಗಿ ದೊಡ್ಡ ಮಟ್ಟದ ಹೂಡಿಕೆಯ ಅಗತ್ಯವೂ ಇಲ್ಲ. ಪ್ರತಿದಿನ 50 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಸಾಕು. 

ಪ್ರತಿ ದಿನ 50 ರೂ ಹೂಡಿಕೆ ಮಾಡಿದರೆ ಸಿಗಲಿದೆ 34 ಲಕ್ಷ ರೂ. 
1. ಹೂಡಿಕೆ ಆರಂಭಿಸುವ ವಯಸ್ಸು - 25 ವರ್ಷ
2. NPS ನಲ್ಲಿ ಮಾಸಿಕ ಹೂಡಿಕೆ - Rs 1,500
3. ಹೂಡಿಕೆ ಸಮಯ - 35 ವರ್ಷಗಳು
4. 35 ವರ್ಷಗಳಲ್ಲಿ ಹೂಡಿಕೆ ಮಾಡಿದ ಒಟ್ಟು ಹಣ - 6.30 ಲಕ್ಷಗಳು
5. ಹೂಡಿಕೆಯ ಮೊತ್ತದ ಮೇಲೆ ಪಡೆಯವ ಒಟ್ಟು ಬಡ್ಡಿ - 27.9 ಲಕ್ಷಗಳು
6. ಪಿಂಚಣಿ (Pension) ಸಮಯದಲ್ಲಿ ಒಟ್ಟು ಠೇವಣಿ - 34.19 ಲಕ್ಷ
7. ಇದರ ಅಡಿಯಲ್ಲಿ ಒಟ್ಟು ತೆರಿಗೆ ಉಳಿತಾಯ - 1.89 ಲಕ್ಷ

ಇದನ್ನೂ ಓದಿ  : LIC's Superhit Policy: ಕೇವಲ 233 ರೂ. ಹೂಡಿಕೆ ಮಾಡಿ 17 ಲಕ್ಷ ಪಡೆಯಿರಿ

ನಿವೃತ್ತಿಯ ಸಮಯದಲ್ಲಿ ಎಷ್ಟು ಹಣ ಪಡೆಯಬಹುದು? :
ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿವೃತ್ತಿಯ ಸಮಯ ಬಂದಾಗ, ನಿಮ್ಮ ಹೂಡಿಕೆಯ 60 ಪ್ರತಿಶತವನ್ನು ಹಿಂಪಡೆಯಬಹುದು. ಅಂದರೆ, ನಿವೃತ್ತಿಯ ಸಮಯದಲ್ಲಿ 20.51 ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು. ಈ ರೀತಿಯಾಗಿ, ಈ ಯೋಜನೆಯು ಉತ್ತಮ ಲಾಭವನ್ನೇ ನೀಡುತ್ತದೆ.

ಎಷ್ಟು ಬಡ್ಡಿ ಸಿಗುತ್ತದೆ?
ಉಳಿದ ಮೊತ್ತವನ್ನು ವಾರ್ಷಿಕ ಪಿಂಚಣಿಗಾಗಿ ವರ್ಷಾಶನ ಯೋಜನೆಯಡಿ ಬಳಸಬಹುದು. ಇದರ ಮೇಲೆ ಶೇ. 8 ರಷ್ಟು ಬಡ್ಡಿಯನ್ನು (Interest) ಸರ್ಕಾರ ನೀಡಿದರೆ,  ತಿಂಗಳಿಗೆ 9,000 ರೂ .ಪಿಂಚಣಿ ಪಡೆಯಬಹುದು. ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ (National pension Scheme) ಏಕಕಾಲದಲ್ಲಿ ಎಲ್ಲಾ ಮೊತ್ತವನ್ನು ಹಿಂಪಡೆಯುವಂತಿಲ್ಲ. ಈ ಯೋಜನೆಯಡಿ, ಕೇವಲ 60 ಪ್ರತಿಶತದಷ್ಟು ಮೊತ್ತವನ್ನು ಮಾತ್ರ ಹಿಂಪಡೆಯಬಹುದು. ಉಳಿದ 40 ಪ್ರತಿಶತವನ್ನು ವರ್ಷಾಶನ ಯೋಜನೆಯಲ್ಲಿ ಹೂಡಿಕೆ ಮಾಡಬೇಕು.

ಇದನ್ನೂ ಓದಿ  : Income Tax Savings Tips : 10 ಲಕ್ಷದ ಮೇಲೆ ಸಂಬಳ ಪಡೆಯುತ್ತೀರಾ ಹಾಗಿದ್ರೆ ನೀವು Tax ಕಟ್ಟಬೇಕಿಲ್ಲ : ಅದಕ್ಕೆ ಈ ರೀತಿಯಾಗಿ ಪ್ಲಾನ್ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News