ನವದೆಹಲಿ: Mutual Fund UPDATE - ನೀವೂ ಕೂಡ ಒಂದು ವೇಳೆ  ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ, ಈ ಸುದ್ದಿ  ನಿಮಗಾಗಿ. ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಮ್ಯೂಚುವಲ್ ಫಂಡ್ ಘಟಕಗಳ ವಹಿವಾಟಿನ ಬಗ್ಗೆ ಹೊಸ ಅಪ್ಡೇಟ್ ಜಾರಿಗೊಳಿಸಿದೆ. ಈ ನವೀಕರಣದ ಬಳಿಕ, ಇದೀಗ ಮ್ಯೂಚುವಲ್ ಫಂಡ್‌ಗಳಲ್ಲಿ ನಿಮ್ಮ ಹಣವು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿರಲಿದೆ. ಹೂಡಿಕೆ ಮಾಡಿದ ಮೊತ್ತದ Redemption ಸಂದರ್ಭದಲ್ಲಿ ಪರಿಶೀಲನೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು SEBI (Security And Exchange Board Of India) ಹೊರಡಿಸಿದೆ.

COMMERCIAL BREAK
SCROLL TO CONTINUE READING

ಮ್ಯೂಚವಲ್ ಫಂಡ್ ವಹಿವಾಟಿಗೆ ಸಂಬಂಧಿಸಿದೆ ಈ ಹೊಸ ನಿಯಮ
ಷೇರು ಮಾರುಕಟ್ಟೆ (Share Market) ವೇದಿಕೆಯಲ್ಲಿನ ಮ್ಯೂಚುಯಲ್ ಫಂಡ್ (Mutual Fund Unit) ಘಟಕಗಳ ವಹಿವಾಟುಗಳಿಗೆ ಈ ಹೊಸ ಅಪ್ಡೇಟ್ ಸಂಬಂಧಿಸಿದೆ. ಅಕ್ಟೋಬರ್ 2021 ರಲ್ಲಿ SEBI ಹೊರಡಿಸಿದ್ದ ಸುತ್ತೋಲೆಯಲ್ಲಿ, 'ಮ್ಯೂಚುವಲ್ ಫಂಡ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಶೇರ್ ಬ್ರೋಕರ್‌ಗಳು ಮತ್ತು ಕ್ಲಿಯರಿಂಗ್ ಏಜೆಂಟ್ ಗಳು ಮ್ಯೂಚುವಲ್ ಫಂಡ್ ವಹಿವಾಟುಗಳಿಗಾಗಿ ತಮ್ಮದೇ ಹೆಸರಿನಲ್ಲಿ ನೀಡಲಾದ ಪಾವತಿಗಳನ್ನು ಸ್ವೀಕರಿಸುವ ಹಾಗಿಲ್ಲ' ಎಂದು ಹೇಳಿತ್ತು. ಆದರೆ, SEBI ಯಿಂದ ಮಾನ್ಯತೆ ಪಡೆದ  ಕ್ಲಿಯರಿಂಗ್ ಕಾರ್ಪೊರೇಶನ್‌ನ ಏಜೆಂಟ್ ಗಳಿಗೆ ಈ ರೀತಿಯ ಪಾವತಿಗಳನ್ನು ಸ್ವೀಕರಿಸುವುದಕ್ಕೆ ವಿನಾಯ್ತಿ ನೀಡಲಾಗಿದೆ.


ಇದನ್ನೂ ಓದಿ-Arecanut Price: ಮಾರುಕಟ್ಟೆಯಲ್ಲಿ ಇಂದಿನ ರಾಶಿ ಅಡಿಕೆ ಬೆಲೆ ಎಷ್ಟಿದೆ ತಿಳಿಯಿರಿ

ವಂಚನೆಯ ಸಾಧ್ಯತೆಗಳು ಕಡಿಮೆ
ಪಾವತಿಯನ್ನು ಸ್ವೀಕರಿಸುವವರು ಯಾವುದೇ ತಪ್ಪು ಮಾಡುತ್ತಿಲ್ಲ ಎಂಬುದನ್ನು ಸ್ಟಾಕ್ ಎಕ್ಸ್ಚೇಂಜ್ (Stock Exchange) ಮತ್ತು ಕ್ಲಿಯರಿಂಗ್ ಕಾರ್ಪೊರೇಷನ್ (Clearing Corporation) ಪರವಾಗಿ ನಿರ್ಧರಿಸಲಾಗುವುದು ಮತ್ತು ಅದನ್ನು ಸುನಿಶ್ಚಿತ ಗೊಳಿಸಲಾಗುವುದು. ಹೂಡಿಕೆದಾರರ ಕುಂದುಕೊರತೆಗಳ ಪರಿಹಾರಕ್ಕಾಗಿ ಅವು ಕೆಲಸ ಮಾಡಬೇಕಾಗುತ್ತದೆ. ಮ್ಯೂಚುವಲ್ ಫಂಡ್ ಯೂನಿಟ್‌ಗಳ (Mutual Fund Unit) ವಹಿವಾಟಿಗೆ ಸಂಬಂಧಿಸಿದಂತೆ ಸೆಬಿ ಇದೇ ರೀತಿಯ ಆದೇಶವನ್ನು ಹೊರಡಿಸಿದೆ. ಸ್ಟಾಕ್ ಮಾರುಕಟ್ಟೆಯ (Stock Market) ಹೊರತಾಗಿ, ಇದು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ಇತರ ಘಟಕಗಳಿಗೂ ಕೂಡ ಅನ್ವಯಿಸಲಿದೆ.


ಇದನ್ನೂ ಓದಿ-Air Travel : ವಿಮಾನ ಪ್ರಯಾಣಿಕರಿಗೆ ಬಿಗ್ ಶಾಕ್ : ದುಬಾರಿಯಾಗಲಿದೆ ಪ್ರಯಾಣ ದರ!?

ಮೇ 1 ರಿಂದ ಸ್ವಿಂಗ್ ಪ್ರೈಸಿಂಗ್ ಸಿಸ್ಟಂ ಜಾರಿ (Swing Pricing System)
ಬರುವ ಮೇ 1 ರಿಂದ SEBI ಸ್ವಿಂಗ್ ಪ್ರೈಸಿಂಗ್ ಮೆಕ್ಯಾನಿಸಮ್ ಜಾರಿಗೆ ತರಲಿದೆ. ಮ್ಯೂಚವಲ್ ಫಂಡ್ ಹೂಡಿಕೆಗಳಿಗಾಗಿಯೇ ಈ ಕಾರ್ಯವಿಧಾನವನ್ನು ವಿಶೇಷವಾಗಿ ರೂಪಿಸಲಾಗಿದೆ. ಮಾರುಕಟ್ಟೆಯ ಏರಿಳಿತದ ಸಂದರ್ಭಗಳಲ್ಲಿ ಹೂಡಿಕೆದಾರರು ತಕ್ಷಣವೇ ಮಾರುಕಟ್ಟೆಯಿಂದ ಹಣ ಹಿಂಪಡೆಯಬಾರದು ಎಂಬ ಉದ್ದೇಶದಿಂದ ಇದನ್ನು SEBI ಜಾರಿಗೆ ತರುತ್ತಿದೆ. ಈ ಕಾರ್ಯವಿಧಾನ ಜಾರಿಗೆ ಬಂದಾದಲ್ಲಿ, ಯಾವುದೇ ಒಂದು ಫಂಡ್ ನಲ್ಲಿ ಹೂಡಿಕೆ ಮಾಡುವಾಗ ಅಥವಾ ಹಿಂಪಡೆಯುವಾಗ, ಹೂಡಿಕೆದಾರರಿಗೆ ಸ್ವಿಂಗ್ ಫ್ಯಾಕ್ಟರ್ ಅಡಿ ಅಡ್ಜಸ್ಟ್ ಮಾಡಲಾದ NAV ಸಿಗಲಿದೆ.


ಇದನ್ನೂ ಓದಿ-FY 21-22 : ಮಾರ್ಚ್ 31 ರೊಳಗೆ ತಪ್ಪದೆ ಮುಗಿಸಿ ಈ 5 ಹಣಕಾಸು ಸಂಬಂಧಿತ ಕೆಲಸಗಳನ್ನು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.