Mutual Fund Investment: ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿರುವ ಕರೋನಾ ವೈರಸ್‌ನ (Coronavirus) ಹೊಸ ರೂಪಾಂತರಿ (Covid-19 New Variant) ಓಮಿಕ್ರಾನ್ (Omicron) ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ವಿಶ್ವಾದ್ಯಂತದ  ಮಾರುಕಟ್ಟೆಗಳಲ್ಲಿ (World Market) ಭಾರಿ ಕುಸಿತ ಕಂಡುಬಂದಿದೆ. ಭಾರತೀಯ ಷೇರು ಮಾರುಕಟ್ಟೆಗಳಲ್ಲೂ (Share Market) ಭಾರಿ ಕುಸಿತ ಕಂಡುಬಂದಿದೆ. ಶುಕ್ರವಾರ ಸೆನ್ಸೆಕ್ಸ್ (Sensex) 1688 ಅಂಕಗಳ ಕುಸಿತ ಕಂಡರೆ, ನಿಫ್ಟಿ (Nifty) 17000ರ ಸನೀಹಕ್ಕೆ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ. ಮಾರುಕಟ್ಟೆಯ ತೀವ್ರ ಕುಸಿತದಿಂದಾಗಿ ಹೂಡಿಕೆದಾರರಲ್ಲಿ ತೀವ್ರ ಸಂಚಲನ ಮೂಡಿದೆ. ಈಕ್ವಿಟಿ ಮಾರುಕಟ್ಟೆಯ ಹೊರತಾಗಿ, ಮ್ಯೂಚುವಲ್ ಫಂಡ್ (Mutual Funds) ಹೂಡಿಕೆದಾರರು (Mutual Fund Investors) ಪ್ರಸ್ತುತ ಕುಸಿತದ ಬಗ್ಗೆ ತುಂಬಾ ಜಾಗರೂಕರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಸ್ತುತ ಪತನದ ಹಿನ್ನೆಲೆ ಮ್ಯೂಚುವಲ್ ಫಂಡ್‌ಗಳ ಅಸ್ತಿತ್ವದಲ್ಲಿರುವ ಹೂಡಿಕೆದಾರರು ಏನು ಮಾಡಬೇಕು ಎಂಬುದು ಅವರ ಮುಂದಿರುವ ಪ್ರಮುಖ ಪ್ರಶ್ನೆಯಾಗಿದೆ. MF  ಹೂಡಿಕೆಯನ್ನು ಪ್ರಾರಂಭಿಸಲು ಉತ್ತಮ ಆಯ್ಕೆ ಯಾವುದು? ಈ ಕುರಿತು ತಜ್ಞರು ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ದೀರ್ಘಾವಧಿಯ ಹೂಡಿಕೆದಾರರು: ಡೌನ್‌ಸೈಡ್‌ನಲ್ಲಿ ಹೆಚ್ಚುವರಿ ಖರೀದಿಸಿ
ಈ ಕುರಿತು ಹೇಳುವ BPN ಫಿನ್‌ಕ್ಯಾಪ್‌ನ ನಿರ್ದೇಶಕ ಎಕೆ ನಿಗಮ್, "ದೀರ್ಘಾವಧಿಯ ದೃಷ್ಟಿಕೋನದಿಂದ ಹೂಡಿಕೆ ಮಾಡುವ ಇಂತಹ ಮ್ಯೂಚುವಲ್ ಫಂಡ್ ಹೂಡಿಕೆದಾರರು ಈ ಕುಸಿತವನ್ನು ಅವಕಾಶವಾಗಿ ಬಳಸಿಕೊಳ್ಳಬೇಕು" ಆದರೆ, ನೀವು ಮಾರುಕಟ್ಟೆಯ ಡೌನ್‌ಟ್ರೆಂಡ್‌ನಲ್ಲಿ ಒಂದು-ಬಾರಿ ಖರೀದಿಯನ್ನು ಮಾಡಿದ್ದೀರಿ ಎಂದು ಇದರ ಅರ್ಥವಲ್ಲ. ದೀರ್ಘಾವಧಿಯ ಹೂಡಿಕೆದಾರರು ಒಂದೇ ಬಾರಿಗೆ ಖರೀದಿಸುವ ಬದಲು ಪ್ರತಿ ಕುಸಿತದ ಮೇಲೆ ಸಣ್ಣ ಮೊತ್ತವನ್ನು ಖರೀದಿಸುವ ತಂತ್ರವನ್ನು ಅಳವಡಿಸಿಕೊಳ್ಳಬೇಕು. ಇದರರ್ಥ ಹೂಡಿಕೆಯು  ಮಾರುಕಟ್ಟೆಯ ಕುಸಿತದ ಮೇಲೆ ಹೆಚ್ಚಾಗಬೇಕು" ಎಂದಿದ್ದಾರೆ. ಅಷ್ಟೇ ಅಲ್ಲ ಪ್ರಸ್ತುತ ಮಾರುಕಟ್ಟೆಯ ಕುಸಿತವು ಹೆಚ್ಚು ಕಾಲ ಉಳಿಯುವ ನಿರೀಕ್ಷೆಯಿಲ್ಲ ಎಂದು ನಿಗಮ್ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಹೂಡಿಕೆದಾರರು ಎಂದಿಗೂ ಭಯಭೀತರಾಗಿ ಮಾರಾಟ ಪ್ರಕ್ರಿಯೆಯಲ್ಲಿ ತೊಡಗಬಾರದು.


ಶಾರ್ಟ್ ಟರ್ಮ್ ಗುರಿಗಳನ್ನು (Short Term Goals) ಹೊಂದಿರುವ ಹೂಡಿಕೆದಾರರು
ಮ್ಯೂಚುವಲ್ ಫಂಡ್‌ಗಳಲ್ಲಿ ನಿಕಟ ಗುರಿಗಳನ್ನು ಹೊಂದಿರುವ ಹಲವು ಹೂಡಿಕೆದಾರರಿರುತ್ತಾರೆ. ಇಂತಹ ಮಾರುಕಟ್ಟೆಯ ಕುಸಿತದಲ್ಲಿ ಅವರು ಏನು ಮಾಡಬೇಕು.  ನಿಕಟ ಹೂಡಿಕೆಯಗುರಿಗಳನ್ನು ಹೊಂದಿರುವ ಹೂಡಿಕೆದಾರರು ಲಾಭವನ್ನು ಕಾಯ್ದಿರಿಸಿ ಡೆಟ್ ಫಂಡ್ ಗಳಿಗೆ ಹೋಗಬೇಕು ಎಂದು ನಿಗಮ್ ಹೇಳುತ್ತಾರೆ.  ಉದಾಹರಣೆಗೆ, ಯಾರಾದರೂ 10 ಲಕ್ಷಗಳ ಕಾರ್ಪಸ್ ರಚಿಸುವ ಗುರಿಯನ್ನು ಹೊಂದಿದ್ದರೆ ಮತ್ತು ಅವರು ಸುಮಾರು 9.80 ಲಕ್ಷ ಅಥವಾ 9.90 ಲಕ್ಷಗಳ ಕಾರ್ಪಸ್ ಅನ್ನು ಹೊಂದಿದ್ದರೆ, ಅವರು ಲಾಭವನ್ನು ಕಾಯ್ದಿರಿಸಿದ ನಂತರ ಡೆಟ್ ಫಂಡ್ ಗಳಲ್ಲಿ ಹೂಡಿಕೆ ಮಾಡಬೇಕು. ಇದರಲ್ಲಿ, ಅವರ ಅಪಾಯವು ಗಮನಾರ್ಹವಾಗಿ ಕಡಿಮೆಯಾಗುತ್ತದೆ ಮತ್ತು ಆದಾಯವೂ ಉತ್ತಮವಾಗಿರುತ್ತದೆ.


ಇದನ್ನೂ ಓದಿ-Earn Money : ನಿಮ್ಮ ಬಳಿ ಈ ಹಳೆಯ ₹1 ನೋಟು ಇದ್ದರೆ ನೀವು ಗಳಿಸಬಹುದು ₹7 ಲಕ್ಷ!


ಹೊಸ ಹೂಡಿಕೆದಾರರು ಏನು ಮಾಡಬೇಕು?
ಮಾರುಕಟ್ಟೆಯ ಕುಸಿತವು ಹೊಸ ಹೂಡಿಕೆದಾರರಿಗೆ ಹೂಡಿಕೆಯನ್ನು ಪ್ರಾರಂಭಿಸಲು ಉತ್ತಮ ಅವಕಾಶ ನೀಡುತ್ತದೆ ಎಂದು ನಿಗಮ್ ಹೇಳುತ್ತಾರೆ. ಆದರೆ, ಪ್ರಸ್ತುತ ಸಮಯದಲ್ಲಿ ಅವರು ಯಾವ ತಂತ್ರದೊಂದಿಗೆ ಹೂಡಿಕೆ ಮಾಡಬೇಕು ಎಂಬುದು ಪ್ರಶ್ನೆ. ಹೊಸ ಹೂಡಿಕೆದಾರರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹೋದರೆ, ಅವರು ಫ್ಲೆಕ್ಸಿಕ್ಯಾಪ್ ಫಂಡ್‌ಗಳು ಅಥವಾ ಲಾರ್ಜ್ ಕ್ಯಾಪ್ ಫಂಡ್‌ಗಳೊಂದಿಗೆ ಪ್ರವೇಶಿಸುವುದು ಉತ್ತಮ ಆಯ್ಕೆಯಾಗಿದೆ. ದೀರ್ಘಾವಧಿಯ ದೃಷ್ಟಿಕೋನದಿಂದ, ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ಹೂಡಿಕೆಯನ್ನು ಪ್ರಾರಂಭಿಸಬಹುದು.


ಇದನ್ನೂ ಓದಿ-7th Pay Commission: Big Update - ಈ ದಿನ ಸರ್ಕಾರಿ ನೌಕರರ ಖಾತೆ ಸಿರಲಿದೆ 18 ತಿಂಗಳ DA ಬಾಕಿ


ಮತ್ತೊಂದೆಡೆ, ಒಬ್ಬರು ಏಕಕಾಲದಲ್ಲಿ ಪೂರ್ಣ ಮೊತ್ತವನ್ನು (Lumpsum Investors) ಅಂದರೆ ಒಟ್ಟು ಮೊತ್ತದಲ್ಲಿ ಹೂಡಿಕೆ ಮಾಡಲು ಬಯಸಿದರೆ, ಈ ಸಮಯದಲ್ಲಿ ಅವರು ವ್ಯವಸ್ಥಿತ ವರ್ಗಾವಣೆ ಯೋಜನೆಯನ್ನು (STP) ಆಯ್ದುಕೊಳ್ಳಬೇಕು. STP ಗಾಗಿ, ಮುಂದಿನ ಕೆಲವು ತಿಂಗಳುಗಳಲ್ಲಿ ಫಂಡ್ ಹೌಸ್ ಕ್ರಮೇಣ ಹೂಡಿಕೆದಾರರ ಹಣವನ್ನು ಹೂಡಿಕೆ ಮಾಡುತ್ತದೆ. ಏರಿಳಿತ ಹೊಂದಿರುವ ಮಾರುಕಟ್ಟೆಗಳಲ್ಲಿ ಹೊಸ ಮತ್ತು ಒಟ್ಟು ಮೊತ್ತದ ಹೂಡಿಕೆದಾರರಿಗೆ STP ಉತ್ತಮ ಆಯ್ಕೆಯಾಗಿದೆ.


ಇದನ್ನೂ ಓದಿ-Royal Enfield ಟೆನ್ಶನ್ ಹೆಚ್ಚಿಸಲು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಈ ಬೈಕ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.