ನವದೆಹಲಿ: ಉದ್ಯೋಗದ ನಂತರ, ಅಂದರೆ ನಿವೃತ್ತಿ ವೆಚ್ಚಗಳ ಚಿಂತೆ ಜನರನ್ನು ಹೆಚ್ಚಾಗಿ ಕಾಡುತ್ತದೆ. ಪ್ರತಿಯೊಂದು ವರ್ಗದ ಜನರು ಹೆಚ್ಚಿನ ಮೊತ್ತದ ಹೂಡಿಕೆ ಮಾಡುವುದು ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ನೀವು ಸಣ್ಣ ಮೊತ್ತದ ಹೂಡಿಕೆ ಮಾಡಿ ದೊಡ್ಡ ಲಾಭ ಗಳಿಸಲು ಬಯಸಿದರೆ ಈ ಸುದ್ದಿ ನಿಮಗೆ ತುಂಬಾ ಉಪಯುಕ್ತವಾಗಿದೆ. ಇಂದು ನಾವು ನಿಮಗೆ ಹೂಡಿಕೆಯ ಕೆಲವು ಮೂಲಭೂತ ತತ್ವಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದರ ಮೂಲಕ ನೀವು ಕಡಿಮೆ ಸಮಯದಲ್ಲಿ ಸಣ್ಣ ಹೂಡಿಕೆಯೊಂದಿಗೆ ದೊಡ್ಡ ನಿಧಿಯನ್ನು ನಿಮ್ಮದಾಗಿಸಿಕೊಳ್ಳಬಹುದು.


COMMERCIAL BREAK
SCROLL TO CONTINUE READING

ಯಾವಾಗ ಹೂಡಿಕೆ ಪ್ರಾರಂಭಿಸಬೇಕು?


ಸಣ್ಣ ಹೂಡಿಕೆಗಳಿಂದ ದೊಡ್ಡ ಮೊತ್ತದ ಹಣ ಸಂಗ್ರಹಿಸಲು ಸರಿಯಾದ ಹೂಡಿಕೆ ಸಮಯವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಅದಕ್ಕಾಗಿಯೇ ತಜ್ಞರು ಯಾವಾಗಲೂ ಚಿಕ್ಕ ವಯಸ್ಸಿನಿಂದಲೇ ಹೂಡಿಕೆ ಪ್ರಾರಂಭಿಸಲು ಶಿಫಾರಸು ಮಾಡುತ್ತಾರೆ. ಏಕೆಂದರೆ ಇದು ನಿಮಗೆ ದೀರ್ಘ ಹೂಡಿಕೆಯ ಲಾಭವನ್ನು ನೀಡುತ್ತದೆ. ಇದರಲ್ಲಿ ನಿಮಗೆ ಹೆಚ್ಚಿನ ಅಪಾಯವಿರುವುದಿಲ್ಲ. SIP ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ದೀರ್ಘಾವಧಿಯಲ್ಲಿ ಕೋಟ್ಯಂತರ ರೂ. ಗಳಿಸಬಹುದು.


ಇದನ್ನೂ ಓದಿ: Yamaha RX 100 ಪ್ರಿಯರಿಗೊಂದು ಸಂತಸದ ಸುದ್ದಿ, ಎದೆಬಡಿತ ಹೆಚ್ಚಿಸುವ ಸುದ್ದಿ ಪ್ರಕಟ


SIP ಮೂಲಕ ಕೋಟ್ಯಾಧಿಪತಿಯಾಗಿ


ಈಗ ನಾವು ಇಲ್ಲಿ ಲೆಕ್ಕಾಚಾರದೊಂದಿಗೆ ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳೋಣ. ನೀವು 25ನೇ ವಯಸ್ಸಿನಲ್ಲಿ SIP ಮೂಲಕ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ಪ್ರತಿ ತಿಂಗಳು 5000 ರೂ. ಅಂದರೆ ದಿನಕ್ಕೆ 167 ರೂ. ಉಳಿಸಬೇಕು. ನಂತರ ನೀವು SIP ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ನಿಮ್ಮ ನಿವೃತ್ತಿಯ ವಯಸ್ಸಿನಲ್ಲಿ ಅಂದರೆ 60 ವರ್ಷಗಳಲ್ಲಿ ನೀವು 11.33 ಕೋಟಿ ರೂ.ಗಳಷ್ಟು ದೊಡ್ಡ ಮೊತ್ತವನ್ನು ನಿಮ್ಮದಾಗಿಸಿಕೊಳ್ಳಬಹುದು.  


ನಿಮ್ಮ ಹೂಡಿಕೆಗೆ ಈ ರೀತಿ ರಿಟರ್ನ್ಸ್ ಸಿಗುತ್ತದೆ


  1. ಮಾಸಿಕ ಹೂಡಿಕೆ 5000 ರೂ

  2. ಅಂದಾಜು ಆದಾಯ ಶೇ.14ರಷ್ಟು

  3. ವಾರ್ಷಿಕ SIP ಬೆಳವಣಿಗೆ ಶೇ.10ರಷ್ಟು

  4. ಒಟ್ಟು ಹೂಡಿಕೆ ಅವಧಿ 35 ವರ್ಷ

  5. ಒಟ್ಟು ಹೂಡಿಕೆ 1.62 ಕೋಟಿ ರೂ.

  6. ಒಟ್ಟು ಆದಾಯ 9.70 ಕೋಟಿ ರೂ. ರೂ.

  7. ಮೆಚ್ಯೂರಿಟಿ ಮೊತ್ತ 11.33 ಕೋಟಿ ರೂ.


ಈ ಪ್ರಮುಖ ವಿಷಯಗಳನ್ನು ನೆನಪಿನಲ್ಲಿಡಿ


  • ಪ್ರತಿ ವರ್ಷ ನಿಮ್ಮ ಸಂಬಳ ಹೆಚ್ಚಾದಾಗ ಹೂಡಿಕೆಯ ಮೊತ್ತವನ್ನೂ ಹೆಚ್ಚಿಸಿಕೊಳ್ಳಿ.

  • 35 ವರ್ಷಗಳ ದೀರ್ಘಾವಧಿಯಲ್ಲಿ ನೀವು compoundingನ ಉತ್ತಮ ಪ್ರಯೋಜನ ಪಡೆಯುತ್ತೀರಿ.

  • ಮ್ಯೂಚುವಲ್ ಫಂಡ್‌ಗಳು ದೀರ್ಘಾವಧಿಯಲ್ಲಿ ನಿಮಗೆ ವರ್ಷಕ್ಕೆ ಶೇ.10-16ರಷ್ಟು ಆದಾಯ ಸಿಗುತ್ತದೆ.

  • ನೀವು ಪ್ರತಿ ವರ್ಷವೂ ಹೂಡಿಕೆ ಹೆಚ್ಚಿಸಿದರೆ ನಿಮ್ಮ ನಿವೃತ್ತಿಯ ಮುಂಚೆಯೇ ನೀವು ಮಿಲಿಯನೇರ್ ಆಗುತ್ತೀರಿ.


ಇದನ್ನೂ ಓದಿ: YouTube Earning: ಈ 4 ಕೆಲಸ ಮಾಡಿದ್ರೆ ಯೂಟ್ಯೂಬ್‌ನಲ್ಲಿ ಲಕ್ಷ ಲಕ್ಷ ಗಳಿಸಬಹುದು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.