New Labour Code Update: ಹೊಸ ವೇತನ ಸಂಹಿತೆ ಜಾರಿ ಕುರಿತು ಹೊಸ ಅಪ್ಡೇಟ್ ಪ್ರಕಟವಾಗಿದೆ. ಲೋಕಸಭೆಯಲ್ಲಿ ಕಾರ್ಮಿಕ ಖಾತೆ ರಾಜ್ಯ ಸಚಿವ ರಾಮೇಶ್ವರ ತೇಲಿ ಹೊಸ ವೇತನ ಸಂಹಿತೆ ಜಾರಿಗೊಳಿಸುವುದರ ಕುರಿತು ತಮ್ಮ ಉತ್ತರವನ್ನು ಮಂಡಿಸಿದ್ದಾರೆ. ಹಲವು ರಾಜ್ಯಗಳು ಕರಡು ಪ್ರತಿ ಸಲ್ಲಿಸಿವೆ ಎಂದು ರಾಜ್ಯ ಸಚಿವ ರಾಮೇಶ್ವರ್ ತೇಲಿ ತಿಳಿಸಿದ್ದಾರೆ. ನಾಲ್ಕು ಕಾರ್ಮಿಕ ಸಂಹಿತೆಗಳ ಮೇಲೆ ರಾಜ್ಯಗಳು ತಮ್ಮ ಪಕ್ಷವನ್ನು ಮಂಡಿಸಿವೆ ಮತ್ತು ಯಾವ ಯಾವ ರಾಜ್ಯಗಳು ಇದುವರೆಗೆ ತಮ್ಮ ಪಕ್ಷವನ್ನು ತಿಳಿಸಿವೆ ಎಂಬುದರ ಕುರಿತು ರಾಮೇಶ್ವರ್ ತೇಲಿ ಮಾಹಿತಿ ನೀಡಿದ್ದಾರೆ.
ಯಾವಾಗ ಜಾರಿಗೆ ಬರುತ್ತೆ ನೂತನ ವೇತನ ಸಂಹಿತೆ ಗೊತ್ತಾ?
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 4 ಲೇಬರ್ ಕೋಡ್ಗಳ ಅಡಿಯಲ್ಲಿ ನಿಯಮಗಳನ್ನು ಅಂತಿಮಗೊಳಿಸಿದೆ. 4 ಲೇಬರ್ ಕೋಡ್ಗಳು ವೇತನ/ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ಕೆಲಸ-ವಿಶೇಷ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ (OSH) ಮತ್ತು ಸಾಮಾಜಿಕ ಮತ್ತು ಔದ್ಯೋಗಿಕ ಸುರಕ್ಷತಾ ಸಂಹಿತೆಯನ್ನು ಒಳಗೊಂಡಿವೆ. ರಾಷ್ಟ್ರಪತಿಗಳ ಒಪ್ಪಿಗೆ ಪಡೆದ ನಂತರ ಈ ನಾಲ್ಕು ಸಂಹಿತೆಗಳನ್ನು ಅಧಿಸೂಚನೆಗೊಳಿಸಲಾಗಿದೆ. ಆದರೆ ಅವುಗಳ ಅನುಷ್ಠಾನಕ್ಕೆ ನಿಯಮಗಳನ್ನು ಸಹ ಅಧಿಸೂಚನೆಗೊಲಿಸಬೇಕಾಗಿದೆ. ಯಾವ ರಾಜ್ಯಗಳು ಯಾವ ಸಂಧಿತೆಯನ್ನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಈ ವರ್ಷದ ಅಕ್ಟೋಬರ್ ವೇಳೆಗೆ ಹೊಸ ವೇತನ ಸಂಹಿತೆ ಜಾರಿಯಾಗುವ ನಿರೀಕ್ಷೆ ಇದೆ.
1. ವೇತನದ ಸಂಹಿತೆ (ದಿ ಕೋಡ್ ಆನ್ ವೇಜಸ್, 2019): ಉತ್ತರ ಪ್ರದೇಶ, ಗುಜರಾತ್, ಗೋವಾ ಸೇರಿದಂತೆ ಒಟ್ಟು 31 ರಾಜ್ಯಗಳು ಇದಕ್ಕೆ ತಮ್ಮ ಒಪ್ಪಿಗೆಯನ್ನು ಸೂಚಿಸಿವೆ.
2. ಸಾಮಾಜಿಕ ಮತ್ತು ಔದ್ಯೋಗಿಕ ಭದ್ರತಾ ಸಂಹಿತೆ (ದಿ ಕೋಡ್ ಆನ್ ಸೋಶಿಯಲ್ ಸೆಕ್ಯೂರಿಟಿ 2020): ಗುಜರಾತ್, ಹರಿಯಾಣ, ಮಧ್ಯಪ್ರದೇಶ ಸೇರಿದಂತೆ ಒಟ್ಟು 25 ರಾಜ್ಯಗಳು ಇದಕ್ಕೆ ತಮ್ಮ ಒಪ್ಪಿಗೆ ಸೂಚಿಸಿವೆ.
3. ಕೈಗಾರಿಕಾ ಸಂಬಂಧಗಳ ಸಂಹಿತೆ (ದಿ ಇಂಡಸ್ಟ್ರಿಯಲ್ ರಿಲೇಶನ್ಸ್ ಕೋಡ್, 2020): ಬಿಹಾರ, ಗುಜರಾತ್, ಹರಿಯಾಣ ಸೇರಿದಂತೆ ಒಟ್ಟು 26 ರಾಜ್ಯಗಳು ಇದನ್ನು ಒಪ್ಪಿಕೊಂಡಿವೆ.
4. ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ(OSH) (ದಿ ಆಕ್ಯುಪೆಶನಲ್ ಸೇಫ್ಟಿ ಹೆಲ್ತ್ ಅಂಡ್ ವರ್ಕಿಂಗ್ ಕಂಡಿಷನ್ಸ್ ಕೋಡ್ 2020): ಬಿಹಾರ, ಅಸ್ಸಾಂ, ಗೋವಾ, ಗುಜರಾತ್ ಸೇರಿದಂತೆ ಒಟ್ಟು 24 ರಾಜ್ಯಗಳು ಈ ಸಂಹಿತೆಯನ್ನು ಒಪ್ಪಿಕೊಂಡಿವೆ.
ಏಕಕಾಲಕ್ಕೆ ಕಾರ್ಯಗತಗೊಳಿಸಲು ಬಯಸುತ್ತಿದೆ ಸಚಿವಾಲಯ
ಈ ನಾಲ್ಕು ಪ್ರಮುಖ ಕಾರ್ಮಿಕ ಸಂಹಿತೆಗಳಲ್ಲಿ, ವೇತನ/ವೇತನ ಸಂಹಿತೆಯನ್ನು 2019 ರಲ್ಲಿ ಸಂಸತ್ತು ಅನುಮೊದಿಸಿತ್ತು, ಉಳಿದ ಮೂರು ಸಂಹಿತೆಗಳನ್ನೂ 2020 ರಲ್ಲಿ ಸಂಸತ್ತಿನ ಉಭಯ ಸದನಗಳು ಅನುಮೊದಿಸಿವೆ. ಕಾರ್ಮಿಕ ಸಚಿವಾಲಯವು ಎಲ್ಲಾ ನಾಲ್ಕು ಸಂಹಿತೆಗಳನ್ನು ಏಕಕಾಲದಲ್ಲಿ ಜಾರಿಗೆ ತರಲು ಬಯಸುತ್ತಿದೆ.
ಹೊಸ ವೇತನ ಸಂಹಿತೆಯಲ್ಲಿ ಏನಿದೆ?
ವೇಜ್ ಕೋಡ್ ಆಕ್ಟ್, 2019 ರ ಪ್ರಕಾರ, ಉದ್ಯೋಗಿಯ ಮೂಲ ವೇತನವು ಕಂಪನಿಯ ವೆಚ್ಚದ (CTC) ಶೇ. 50 ಕ್ಕಿಂತ ಕಡಿಮೆ ಇರುವಂತಿಲ್ಲ. ಪ್ರಸ್ತುತ ಹಲವು ಕಂಪನಿಗಳು ಮೂಲ ವೇತನವನ್ನು ಕಡಿಮೆ ಮಾಡಿ, ಅದರ ಮೇಲೆ ಹೆಚ್ಚಿನ ಭತ್ಯೆಗಳನ್ನು ನೀಡುವುದರಿಂದ ಕಂಪನಿಯ ಮೇಲಿನ ಹೊರೆ ಕಡಿಮೆ ಮಾಡಿಕೊಳ್ಳುತ್ತವೆ. ಹೊಸ ವೇತನ ಸಂಹಿತೆಗಳ ನಿಬಂಧನೆಗಳು ಯಾವುದು ತಿಳಿದುಕೊಳ್ಳೋಣ ಬನ್ನಿ,
ವೇತನದ ಸಂರಚನೆ ಸಂಪೂರ್ಣ ಬದಲಾಗಲಿದೆ
ವೇತನ ಸಂಹಿತೆ ಕಾಯಿದೆ, 2019 ರ ಅನುಷ್ಠಾನದೊಂದಿಗೆ, ನೌಕರರ ವೇತನ ಸಂಸ್ರಚನೆ ಸಂಪೂರ್ಣವಾಗಿ ಬದಲಾಗಲಿದೆ. ಇದರಿಂದ ಉದ್ಯೋಗಿಗಳ 'ಟೇಕ್ ಹೋಮ್ ಸ್ಯಾಲರಿ' ಕಡಿಮೆಯಾಗಲಿದೆ, ಏಕೆಂದರೆ ಮೂಲ ವೇತನವನ್ನು ಹೆಚ್ಚಿಸುವುದರಿಂದ ಉದ್ಯೋಗಿಗಳು ಹೆಚ್ಚು ಪಿಎಫ್ ಕೊಡುಗೆಯನ್ನು ಸಲ್ಲಿಸಬೇಕಾಗಲಿದೆ, ಅಂದರೆ ಇದರಿಂದ ಅವರ ಭವಿಷ್ಯವು ಹೆಚ್ಚು ಸುರಕ್ಷಿತವಾಗಿರಲಿದೆ.ಪಿಎಫ್ ಜೊತೆಗೆ ಗ್ರಾಚ್ಯುಟಿಯ ಕೊಡುಗೆಯೂ ಸಹ ಹೆಚ್ಚಾಗಲಿದೆ. ಅಂದರೆ, ಟೇಕ್ ಹೋಮ್ ಸಂಬಳವು ಖಂಡಿತವಾಗಿಯೂ ಕಡಿಮೆಯಾಗಲಿದೆ. ಆದರೆ ಉದ್ಯೋಗಿ ನಿವೃತ್ತಿಯ ನಂತರ ಹೆಚ್ಚಿನ ಮೊತ್ತವನ್ನು ಪಡೆಯಲಿದ್ದಾನೆ.
ಟೇಕ್ ಹೋಮ್ ಸಂಬಳ ಕಡಿಮೆಯಾಗುತ್ತದೆ, ನಿವೃತ್ತಿ ಸುಧಾರಿಸುತ್ತದೆ
ಮೂಲ ವೇತನ ಹೆಚ್ಚಳದಿಂದಾಗಿ, ಉದ್ಯೋಗಿಗಳ ವೇತನದಿಂದ ಹೆಚ್ಚು ಪಿಎಫ್ ಕಡಿತವಾಗಲಿದೆ, ಇದರಿಂದ ನೌಕರರು ಕೊಂಡೊಯ್ಯುವ ವೇತನ ಕಡಿಮೆಯಾಗಲಿದೆ. ಆದರೆ, ಅವರ ಭವಿಷ್ಯ ಹೆಚ್ಚು ಸುರಕ್ಷಿತವಾಗಿರುತ್ತದೆ. ಪ್ರಾವಿಡೆಂಟ್ ಫಂಡ್ (ಪಿಎಫ್) ಮತ್ತು ಮಾಸಿಕ ಗ್ರಾಚ್ಯುಟಿಗಳಿಗೆ ಕೊಡುಗೆ ಹೆಚ್ಚಾಗುವುದರಿಂದ ಇದು ಅವರ ನಿವೃತ್ತಿಯ ನಂತರದ ಜೀವನಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ.
ಇದನ್ನೂ ಓದಿ-Flight Ticket Offer: ಕೇವಲ 100 ರೂ.ಗಳಲ್ಲಿ ವಿಮಾನದಲ್ಲಿ ಸಂಚರಿಸುವ ಅವಕಾಶ, ಜೊತೆಗೆ 50 ಲಕ್ಷ ರೂ.ಗಳವರೆಗೆ ಲಾಭ !
ಕಂಪನಿಗಳಿಗೆ ಕಷ್ಟ
ಉದ್ಯೋಗಿಗಳ CTC ಅನೇಕ ಅಂಶಗಳ ಮೇಲೆ ಅವಲಂಭಿಸಿರುತ್ತದೆ. ಮೂಲ ಸಂಬಳ, ಮನೆ ಬಾಡಿಗೆ (HRA), PF, ಗ್ರಾಚ್ಯುಟಿ, LTC ಮತ್ತು ಮನರಂಜನಾ ಭತ್ಯೆ ಇತ್ಯಾದಿಗಳನ್ನು ಅದು ಒಳಗೊಂಡಿರುತ್ತದೆ. ಹೊಸ ವೇಜ್ ಕೋಡ್ ನಿಯಮದ ಅನುಷ್ಠಾನದಿಂದ, ಮೂಲ ವೇತನವನ್ನು ಹೊರತುಪಡಿಸಿ ಸಿಟಿಸಿಯಲ್ಲಿ ಸೇರಿಸಬೇಕಾದ ಇತರ ಅಂಶಗಳು ಶೇಕಡಾ 50 ಕ್ಕಿಂತ ಹೆಚ್ಚಿರಬಾರದು ಎಂಬುದನ್ನು ಕಂಪನಿಗಳು ನೋಡಿಕೊಳ್ಳಬೇಕಾಗಲಿದೆ. ಇದು ಕಂಪನಿಗಳ ತಲೆನೋವು ಹೆಚ್ಚಿಸುವ ಸಾಧ್ಯತೆ ಇದೆ.
ಹೆಚ್ಚಿನ ವೇತನ ಹೊಂದಿದ ನೌಕರರ ಚಿಂತೆ ಹೆಚ್ಚಾಗಲಿದೆ
ಟೇಕ್ ಹೋಮ್ ಪೇನಲ್ಲಿನ ಕಡಿತದ ಪರಿಣಾಮವು ಕಡಿಮೆ ಮತ್ತು ಮಧ್ಯಮ ಆದಾಯ ಇರುವವರಿಗೆ ಕಡಿಮೆ ಬಾಧಿಸಲಿದೆ. ಆದರೆ ಹೆಚ್ಚಿನ ಆದಾಯ ಗಳಿಸುವವರಿಗೆ ಇದರಿಂದ ದೊಡ್ಡ ಹಿನ್ನಡೆಯಾಗಬಹುದು. ಹೆಚ್ಚು ಗಳಿಸುವವರ ಪಿಎಫ್ ಕೊಡುಗೆಯು ಹೆಚ್ಚಾದರೆ, ಅವರ ಟೇಕ್ ಹೋಮ್ ವೇತನ ಕಡಿಮೆಯಾಗಲಿದೆ. ಏಕೆಂದರೆ ವೇತನ ಹೆಚ್ಚಾಗಿರುವ ಉದ್ಯೋಗಿಗಳ ಮೂಲ ವೇತನವೂ ಹೆಚ್ಚಿರುತ್ತದೆ, ಆದ್ದರಿಂದ ಪಿಎಫ್ ಕೊಡುಗೆಯನ್ನು ಸಹ ಹೆಚ್ಚು ಕಡಿತಗೊಳಿಸಲಾಗುತ್ತದೆ. ಇಂತಹ ಉದ್ಯೋಗಿಗಳಿಗೆ ಗ್ರಾಚ್ಯುಟಿಯನ್ನು ಸಹ ಹೆಚ್ಚು ಕಡಿತಗೊಳಿಸಲಾಗುತ್ತದೆ. ಮೂಲ ವೇತನ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ, ಆದ್ದರಿಂದ ಸಂಬಳ ಹೆಚ್ಚಿದ್ದರೆ ತೆರಿಗೆ ಕೂಡ ಅದೇ ಪ್ರಮಾಣದಲ್ಲಿ ಕಡಿತವಾಗಲಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ