ಬೆಂಗಳೂರು: ಮಿನಿ ಟ್ರಕ್ ಮೂಲಕ ಮನೆ ಮನೆಗೆ ನಂದಿನಿ ಹಾಲು ಸರಬರಾಜು ಮಾಡಲು ಕೆಎಂಎಫ್ ಮುಂದಾಗಿದೆ. ಕೆಎಂಎಫ್ ಮನೆ ಬಾಗಿಲಿಗೇ ಹಾಲಿನ ಪ್ಯಾಕ್ ಗಳನ್ನು ತಲುಪಿಸಲು ಮದರ್ ಡೈರಿಯ ಜೊತೆ ಪಾಲುದಾರಿಗೆ ಮಾಡಿಕೊಂಡಿದ್ದು ನಂದಿನಿ ಆನ್ ವ್ಹೀಲ್ಸ್ ಸೇವೆಯನ್ನು ಪ್ರಾರಂಭಿಸಿದೆ.


COMMERCIAL BREAK
SCROLL TO CONTINUE READING

ಇದರಿಂದಾಗಿ ಜನತೆ ಮಿಲ್ಕ್ ಬೂತ್(Milk) ಗೆ ಹೋಗುವುದು ತಪ್ಪಲಿದೆ. ಪ್ರಾಯೋಗಿಕವಾಗಿ ಈ ಯೋಜನೆಯನ್ನು ಯಲಹಂಕ ಝೋನ್ ನಲ್ಲಿ ಜ.18 ರಿಂದ ಜಾರಿಗೆ ಬಂದಿದೆ. ಎಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ದಿನ ನಿತ್ಯದ ಪದಾರ್ಥಗಳವರೆಗೆ ಮನೆ ಬಾಗಿಲಿಗೇ ತಲುಪಿಸುವ ಸೇವೆಗಳ ಕೊರತೆ ಇಲ್ಲ. ಈಗ ಕೆಎಂಎಫ್ ಸಹ ಇಂಥಹದ್ದೇ ಸೇವೆಯನ್ನು ಪ್ರಾರಂಭಿಸಲು ಸಜ್ಜುಗೊಂಡಿದೆ.


IT Return ಸಲ್ಲಸಲು ಮರೆತಿದ್ದೀರಾ..? ಚಿಂತಿಸಬೇಡಿ ಇನ್ನೂ ಸಮಯವಿದೆ..


ಈಗಾಗಲೇ ಇಂತಹ 8 ಮಿನಿ ಟ್ರಕ್ ಗಳು ನಗರ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸುತ್ತಿವೆ. ಆದರೆ ಅವುಗಳನ್ನು ಮಂಡ್ಯ, ಬೆಂಗಳೂರು ಡೈರಿ, ಮಂಗಳೂರು ಹಾಗೂ ಇತರ ಹಾಲಿಕ ಒಕ್ಕೂಟಗಳು ಮುನ್ನಡೆಸುತ್ತಿವೆ. ಯಲಹಂಕದಲ್ಲಿನ ಸೇವೆಗಳು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈ ರೀತಿಯ ಹೆಚ್ಚಿನ ಟ್ರಕ್ ಗಳನ್ನು ಪರಿಚಯಿಸಲು ನಿರ್ಧರಿಸಲಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.


Gold Price Today - Good News:ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಇಳಿಕೆ


ಕೆಎಂಎಫ್ ನ ಹಾಲಿನ ವಾಹನಗಳು ಬೆಳಿಗ್ಗೆ 9 ರಿಂದ ರಾತ್ರಿ 8 ವರೆಗೆ ಹೊತ್ತು ಆ ಭಾಗಗಳಲ್ಲಿ ಸಂಚರಿಸಲಿವೆ, ದಾಸ್ತಾನು ಖಾಲಿಯಾದರೆ ಹತ್ತಿರದ ಪಾರ್ಲರ್ ಗಳಿಂದ ತುಂಬಿಸಿಕೊಂಡು ಸಾರ್ವಜನಿಕರಿಗೆ ವಿತರಣೆ ಮಾಡಲಿವೆ.


Cheapest Recharge Plan: ಕೇವಲ 2 ರೂ.ಗಳಲ್ಲಿ 1 GB ಡೇಟಾ, ಉಚಿತ ಕಾಲಿಂಗ್


ಪ್ರಾಯೋಗಿಕವಾಗಿ ಪ್ರತಿ ಜಿಲ್ಲೆಯಲ್ಲೂ ಇಂತಹ ವಾಹನಗಳು ಸಂಚರಿಸುತ್ತಿವೆ ಎಂದು ಮದರ್ ಡೈರಿಯ ಮಾರ್ಕೆಟಿಂಗ್ ಮ್ಯಾನೇಜರ್ ಯಲಹಂಕ ಝೋನ್ ಹೇಳಿದ್ದಾರೆ.


ವೀಡಿಯೊ ಮೂಲಕ ದೇಶದ ಅತಿದೊಡ್ಡ BANK ನೀಡಿದೆ ಈ ಎಚ್ಚರಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.