ನವದೆಹಲಿ : ಬ್ಯಾಂಕ್ ಗ್ರಾಹಕರಿಗೆ ಆರ್‌ಬಿಐ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಬ್ಯಾಂಕುಗಳಿಂದ Online ನಲ್ಲಿ ಹಣ ವರ್ಗಾವಣೆ ಮಾಡಲು ಬಳಸುವ NEFT ಸೇವೆ ಇಂದು ಮಧ್ಯಾಹ್ನ 2 ಗಂಟೆಯವರೆಗೆ ಲಭ್ಯವಿರುವುದಿಲ್ಲ ಎಂದು ಆರ್‌ಬಿಐ ತಿಳಿಸಿದೆ.


COMMERCIAL BREAK
SCROLL TO CONTINUE READING

ತಾಂತ್ರಿಕ ಉನ್ನತೀಕರಣಕ್ಕಾಗಿ ನೆಫ್ಟ್ ಸೇವೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಆರ್‌ಬಿಐ(Reserve Bank of India) ಸ್ವತಃ ನಿಯಂತ್ರಿಸುವ NEFT ವ್ಯವಸ್ಥೆ ಭಾನುವಾರ ಮಧ್ಯಾಹ್ನ 2 ಗಂಟೆಯವರೆಗೆ ಲಭ್ಯವಿರುವುದಿಲ್ಲ ಎಂದು ಭಾರತದ ಕೇಂದ್ರ ಬ್ಯಾಂಕ್ ಹೇಳಿಕೆ ತಿಳಿಸಿದೆ.


ಇದನ್ನೂ ಓದಿ : Fixed Deposit ಹೊಂದಿದವರು ಜೂನ್ 30ರೊಳಗೆ ಈ ಫಾರ್ಮ್ ಸಲ್ಲಿಸಿ, ಇಲ್ಲದಿದ್ದರೆ ಹಾನಿ ತಪ್ಪಿದ್ದಲ್ಲ


ಕಾರ್ಯಕ್ಷಮತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ NEFT(National Electronic Funds Transfer)ಯ ತಾಂತ್ರಿಕ ನವೀಕರಣವನ್ನು ಮೇ 23, 2021 ರ ಭಾನುವಾರ 12:01 ಗಂಟೆಯಿಂದ 14:00 ಗಂಟೆಯವರೆಗೆ ಎನ್ ಇಎಫ್ ಟಿ ಸೇವೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ಆರ್ ಟಿಜಿಎಸ್ ವ್ಯವಸ್ಥೆ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಆರ್‌ಬಿಐ ತಿಳಿಸಿದೆ.


ಇದನ್ನೂ ಓದಿ : 8th Pay Commission ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೊಂದು ಉಪಯುಕ್ತ ಮಾಹಿತಿ


Online ನಲ್ಲಿ ಹಣ ವರ್ಗಾವಣೆಯ ವಿಧಾನಗಳು : 


ಬ್ಯಾಂಕುಗಳು ಸಹ ಭಾನುವಾರ ಮುಚ್ಚಲ್ಪಟ್ಟಿರುವುದರಿಂದ, ಗ್ರಾಹಕರು ಹಣವನ್ನು ವರ್ಗಾಯಿಸಲು ತೊಂದರೆಗಳನ್ನು ಎದುರಿಸಬಹುದು. ಈ ಪರಿಸ್ಥಿತಿಯಲ್ಲಿ, ಗ್ರಾಹಕರು ತಕ್ಷಣದ ಪಾವತಿ ಸೇವೆ (IMPS) ಮೂಲಕ ಹಣ ವರ್ಗಾವಣೆ ಸೌಲಭ್ಯವನ್ನು ಬಳಸಿಕೊಳ್ಳಬಹುದು.


ಇದನ್ನೂ ಓದಿ : Sovereign Gold Bond : ಕಡಿಮೆ ಬೆಲೆಯಲ್ಲಿ ಚಿನ್ನ ಖರೀದಿಸಲು ಇಲ್ಲಿದೆ ಅವಕಾಶ..!


ಐಎಂಪಿಎಸ್ NEFTಯಂತೆ ಕೆಲಸ ಮಾಡುತ್ತದೆ, ಆದರೆ ಮುಖ್ಯವಾಗಿ ಹಣವನ್ನು ತಕ್ಷಣವರ್ಗಾಯಿಸಲು ಬಳಸಲಾಗುತ್ತದೆ. ಐಎಂಪಿಎಸ್(Immediate Payment Service) ಮೂಲಕ ವರ್ಗಾಯಿಸಲಾದ ಹಣವನ್ನು NEFTಗೆ ಹೋಲಿಸಿದರೆ, ಒಂದು ಕ್ಷಣದಲ್ಲಿ ಇತ್ಯರ್ಥಪಡಿಸಲಾಗುತ್ತದೆ, ಇದು ವಹಿವಾಟು ಪೂರ್ಣಗೊಳಿಸಲು ಕೆಲವು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದಾಗ್ಯೂ, ಬ್ಯಾಂಕುಗಳು ಸಾಮಾನ್ಯವಾಗಿ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ತ್ವರಿತ ಮಾರ್ಗವನ್ನು ನೀಡಲು ಐಎಂಪಿಎಸ್ ವಹಿವಾಟುಗಳಿಗೆ ಸಣ್ಣ ಶುಲ್ಕವನ್ನು ವಿಧಿಸುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.