Car Insurance Tips: ಪ್ರಸ್ತುತ ಬದಲಾದ ಜೀವನ ಶೈಲಿಯಲ್ಲಿ ಕಾರು ಕೊಳ್ಳುವವರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಾಗಿದೆ. ಕಾರ್ ಖರೀದಿಸುವಾಗ ಭವಿಷ್ಯದ ದೃಷ್ಟಿಯಿಂದ ಕಾರ್ ವಿಮೆ ಕೊಳ್ಳುವುದು ಕೂಡ ಅವಶ್ಯಕ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಸ್ಕ್ಯಾಮರ್‌ಗಳು ರಿಯಾಯಿತಿಯಲ್ಲಿ ಅಗ್ಗದ ವಿಮಾ ಯೋಜನೆಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ನೀವು ಇಂತಹ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಲು ಕಾರ್ ವಿಮೆ ಕೊಳ್ಳುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ತುಂಬಾ ಅವಶ್ಯಕ. 


COMMERCIAL BREAK
SCROLL TO CONTINUE READING

ಹೌದು, ಕಾರ್ ವಿಮಾ (Car Insurance)  ಹೆಸರಿನಲ್ಲಿ ಗ್ರಾಹಕರನ್ನು ವಂಚಿಸುತ್ತಿರುವ ಹಲವು ಪ್ರಕರಣಗಳು ಮುನ್ನಲೆಗೆ ಬರಲಾರಂಭಿಸಿವೆ. ಇಂತಹ ವಂಚನೆಗಳಿಂದ ಬಚಾವ್ ಆಗಲು ವಿಮೆ ಕೊಳ್ಳುವಾಗ ಕೆಲವು ವಿಚಾರಗಳ ಬಗ್ಗೆ ಎಚ್ಚರಿಕೆವಹಿಸುವುದು ಅಗತ್ಯ. ನೀವು ಕಾರ್ ವಿಮೆಯನ್ನು ಖರೀದಿಸುತ್ತಿದ್ದರೆ (Buying Car Insurance) ಅಂತಹ ಸಂದರ್ಭದಲ್ಲಿ ಈ ಪ್ರಮುಖ ವಿಚಾರಗಳ ಬಗ್ಗೆ ವಿಶೇಷ ಗಮನಹರಿಸಿ. ಅವುಗಳೆಂದರೆ... 


ಇದನ್ನೂ ಓದಿ- ಕೋಟಕ್ ಬ್ಯಾಂಕ್ ವಿರುದ್ಧ ಆರ್‌ಬಿಐ ಕಠಿಣ ಕ್ರಮ, ಹಳೆಯ ಗ್ರಾಹಕರ ಮೇಲೆ ಏನು ಪರಿಣಾಮ?


ಕಾರ್ ವಿಮಾ ಪಾಲಿಸಿಯನ್ನು ಖರೀದಿಸುವಾಗ ನೆನಪಿಡಬೇಕಾದ ಅಂಶಗಳೆಂದರೆ... 
* ನೀವು ವಿಮಾ ಪಾಲಿಸಿ (Insurance policy) ಖರೀದಿಸುವಾಗ ಅದರ ಪೇಪರ್‌ಗಳನ್ನು ಎಚ್ಚರಿಕೆಯಿಂದ ಓದಿ. ಆನ್‌ಲೈನ್‌ನಲ್ಲಿ ನೀಡಿರುವ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ. 


*  ನೀವು ವಿಮೆಯನ್ನು ಪಡೆಯಲು ಹೊರಟಿರುವ ಕಂಪನಿಯ ಹೆಸರನ್ನು ಐ‌ಆರ್‌ಡಿ‌ಎಐ (IRDAI)  ಪೋರ್ಟಲ್‌ನಲ್ಲಿ ಪರಿಶೀಲಿಸುವುದನ್ನು ಮರೆಯಬೇಡಿ. 


*  ವಿಮಾ ಪಾಲಿಸಿಯಲ್ಲಿ UID ಸಂಖ್ಯೆಯನ್ನು ಪರೀಕ್ಷಿಸಲು ಮರೆಯದಿರಿ. ವಾಸ್ತವವಾಗಿ, ಯುಐಡಿ ಸಂಖ್ಯೆಯು ಪ್ರತಿ ಪಾಲಿಸಿಗೆ IRDAI ನಿಂದ ನೀಡುವ ಸಂಖ್ಯೆಯಾಗಿದ್ದು, ಈ ಸಂಖ್ಯೆ ಇಲ್ಲದಿದ್ದರೆ ಅದು ನಕಲಿ ಪಾಲಿಸಿಯಾಗಿರುತ್ತದೆ. 


* ಪ್ರತಿ ವಿಮಾ ಪಾಲಿಸಿಗೆ ಕ್ಯೂಆರ್ ಕೋಡ್ ಅಗತ್ಯ. ಈ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ, ನೀವು ಪಾಲಿಸಿಯ ವಿವರಗಳನ್ನು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ ಇದು ನಿಮ್ಮ ಪಾಲಿಸಿ ಅಸಲಿಯೋ/ನಕಲಿಯೋ ಎಂಬುದನ್ನೂ ಕೊಡೋಯ ಸಾಬೀತುಪಡಿಸುತ್ತದೆ. 


ಇದನ್ನೂ ಓದಿ- Indian Railways: ಇನ್ಮುಂದೆ ಈ ರೈಲಿನಲ್ಲಿ ಕೇವಲ 500ml ಉಚಿತ ನೀರು ಮಾತ್ರ ಸಿಗಲಿದೆ!


* ನೀವು ಕಾರ್ ವಿಮೆಯನ್ನು (Car Insurance)  ಖರೀದಿಸುವಾಗ ಆನ್‌ಲೈನ್ ಅಥವಾ ಚೆಕ್ ಮೂಲಕ ಪಾವತಿ ಮಾಡಿ. ಇದನ್ನು ಏಜೆಂಟ್ ಬದಲಿಗೆ ನೇರವಾಗಿ ಕಂಪನಿಯ ಹೆಸರಿಗೆ ಮಾಡುವುದು ಒಳ್ಳೆಯದು.


* ಕಂಪನಿಯ ಕಸ್ಟಮರ್ ಕೇರ್‌ನಿಂದ ಪಾಲಿಸಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಮರೆಯದಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.