Kotak Mahindra Bank Credit Cards: ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಖಾಸಗಿ ವಲಯದ ಬ್ಯಾಂಕ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು ತಕ್ಷಣವೇ ಜಾರಿಗೆ ಬರುವಂತೆ ಕೊಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) ಹೊಸ ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸುವುದನ್ನು ನಿರ್ಬಂಧಿಸಿದೆ. ಆರ್ಬಿಐ ಈ ಕ್ರಮದಿಂದಾಗಿ ಕೊಟಕ್ ಮಹೀಂದ್ರಾ ಬ್ಯಾಂಕ್ ಯಾವುದೇ ಹೊಸ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ವಿತರಿಸುವಂತಿಲ್ಲ, ಅಷ್ಟೇ ಅಲ್ಲ, ಬ್ಯಾಂಕ್ ಇನ್ಮುಂದೆ ಆನ್ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ (Mobile Banking) ಮೂಲಕ ಯಾವುದೇ ಹೊಸ ಗ್ರಾಹಕರನ್ನು ಕೂಡ ಸೇರಿಸುವಂತಿಲ್ಲ.
ಆರ್ಬಿಐನ ಈ ಕಠಿಣ ಕ್ರಮಕ್ಕೆ ಕಾರಣ!
2022 ಮತ್ತು 2023 ರ ನಡುವೆ ಬ್ಯಾಂಕಿನ ಐಟಿ ಮೂಲಸೌಕರ್ಯದಲ್ಲಿ ನವೀಕರಣದ ಕೊರತೆಯಿಂದಾಗಿ, ಬ್ಯಾಂಕ್ ದೀರ್ಘಕಾಲದವರೆಗೆ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಆರ್ಬಿಐ (RBI) ಈಗಾಗಲೇ ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಬ್ಯಾಂಕ್ ಈ ಬಗ್ಗೆ ಸರಿಯಾಗಿ ಕ್ರಮ ಕೈಗೊಂಡಿಲ್ಲ. ಹಾಗಾಗಿ, ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ರ ಸೆಕ್ಷನ್ 35A ಅಡಿಯಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ವಿರುದ್ಧ ಈ ಕ್ರಮ ಕೈಗೊಂಡಿದೆ.
ಇದನ್ನೂ ಓದಿ- 20 ರೂಪಾಯಿಗೆ ಊಟ, 3 ರೂ.ಗೆ ನೀರು ರೈಲ್ವೆ ಹೊರ ತಂದಿದೆ ಹೊಸ ಫುಡ್ ಚಾರ್ಟ್
ಮುಂದಿನ ದಿನಗಳಲ್ಲಿ ಬ್ಯಾಂಕ್ನ ಸರ್ವರ್ನಲ್ಲಿ ವ್ಯತ್ಯಯವಾಗಬಹುದು ಮತ್ತು ಗ್ರಾಹಕರು ಯಾವುದೇ ರೀತಿಯ ಗಂಭೀರ ಸಮಸ್ಯೆಗಳನ್ನು ಎದುರಿಸಬಹುದು ಎಂದು ನಿಯಂತ್ರಕರು ತಿಳಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಆರ್ಬಿಐ ಈ ಕ್ರಮ ಕೈಗೊಂಡಿದೆ.
ರಿಸರ್ವ್ ಬ್ಯಾಂಕ್ (Reserve Bank) ಪ್ರಕಾರ, ಐಟಿ ವಲಯಕ್ಕೆ ಸಂಬಂಧಿಸಿದ ನ್ಯೂನತೆಗಳು ಗ್ರಾಹಕರಿಗೆ ಸಮಸ್ಯೆಗಳನ್ನು ಉಂಟುಮಾಡುವುದಲ್ಲದೆ, ಡಿಜಿಟಲ್ ಬ್ಯಾಂಕಿಂಗ್ ಮತ್ತು ಆರ್ಥಿಕ ಪರಿಸರ ವ್ಯವಸ್ಥೆಯನ್ನು ಹಾಳುಮಾಡುತ್ತದೆ ಎನ್ನಲಾಗಿದೆ.
ಹಳೆಯ ಗ್ರಾಹಕರ ಮೇಲೆ ಏನು ಪರಿಣಾಮ?
ಪ್ರಸ್ತುತ, ದೇಶದಲ್ಲಿ ಬಹುತೇಕ ಗ್ರಾಹಕರು ಕೋಟಕ್ ಮಹೀಂದ್ರಾ ಬ್ಯಾಂಕ್ನ ಸೇವೆಯ (Service of Kotak Mahindra Bank) ಲಾಭವನ್ನು ಪಡೆಯುತ್ತಿದ್ದಾರೆ, ಆದರೆ ಈಗ ಆರ್ಬಿಐನ ಈ ಕ್ರಮವು ಹಳೆಯ ಗ್ರಾಹಕರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬ ಬಗ್ಗೆ ಹಲವರಲ್ಲಿ ಅನುಮಾನಗಳಿವೆ. ಆದರೆ, ಈ ಬಗ್ಗೆ ಯಾವುದೇ ಆತಂಕವಿಲ್ಲ. ಈಗಾಗಲೇ ಬ್ಯಾಂಕಿನ ಗ್ರಾಹಕರಾಗಿರುವವರು ಮೊದಲಿನಂತೆ ಎಲ್ಲ ಸೇವೆಗಳನ್ನು ಪಡೆಯುವುದನ್ನು ಮುಂದುವರೆಸುತ್ತಾರೆ.
ಇದನ್ನೂ ಓದಿ- IndiGo: ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇಂಡಿಗೋ ಸಂಸ್ಥೆಯಿಂದ ಇನ್-ಫ್ಲೈಟ್ ಎಂಟರ್ಟೈನ್ಮೆಂಟ್ ಕಂಟೆಂಟ್ ಸೌಲಭ್ಯ!
ಬ್ಯಾಂಕ್ ತನ್ನ ಅಸ್ತಿತ್ವದಲ್ಲಿರುವ ಕ್ರೆಡಿಟ್ ಕಾರ್ಡ್ (Credit card) ಬಳಕೆದಾರರಿಗೆ ಮೊದಲಿನಂತೆ ಸಕಲ ಸೌಲಭ್ಯಗಳನ್ನು ಒದಗಿಸುವುದನ್ನು ಮುಂದುವರೆಸಲಿದೆ ಎಂದು ಸೆಂಟ್ರಲ್ ಬ್ಯಾಂಕ್ ಭರವಸೆ ನೀಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.