ಪಿಂಚಣಿದಾರರಿಗೊಂದು ಮಹತ್ವದ ಅಪ್ಡೇಟ್, ಹಣ ಹಿಂಪಡೆಯುವ ಈ ನಿಯಮದಲ್ಲಾಗಿದೆ ಬದಲ್ಲವಣೆ!
New Pension Withdrawal Rule: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಹಣ ಹಿಂಪಡೆಯುವ ನಿಯಮಗಳು ಬದಲಾಗಿವೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಈ ಕುರಿತು ಮಾಹಿತಿ ನೀಡಿದೆ. Business News In Kannada
ನವದೆಹಲಿ: ನೀವು ಪಿಂಚಣಿ ಹಣವನ್ನು ಹಿಂಪಡೆಯಲು ಯೋಚಿಸುತ್ತಿದ್ದರೆ, ಇದೀಗ ಅದರಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಹಣ ಹಿಂಪಡೆಯುವ ನಿಯಮಗಳು ಬದಲಾಗಿವೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಈ ಕುರಿತು ಮಾಹಿತಿ ನೀಡಿದೆ. Business News In Kannada
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಪಿಂಚಣಿಧಾರಕರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಅಡಿಯಲ್ಲಿ ಹಣವನ್ನು ಹಿಂಪಡೆಯಲು 'ಪೆನ್ನಿ ಡ್ರಾಪ್' ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ. ಇದು ಪಿಂಚಣಿಧಾರಕರ ಹಣವನ್ನು ಸಕಾಲಿಕವಾಗಿ ವರ್ಗಾಯಿಸುವುದನ್ನು ಖಚಿತಪಡಿಸುತ್ತದೆ.
ಖಾತೆಗಳ ನೈಜ ಸ್ಥಿತಿ ತಿಳಿಯಲಿದೆ
'ಪೆನ್ನಿ ಡ್ರಾಪ್' ಪ್ರಕ್ರಿಯೆಯ ಅಡಿಯಲ್ಲಿ, ದಾಖಲೆ ಸಂಗ್ರಹಿಸುವ ಕೇಂದ್ರೀಯ ಏಜೆನ್ಸಿಗಳು (CRAs) ಬ್ಯಾಂಕ್ ಉಳಿತಾಯ ಖಾತೆಯ ನೈಜ ಮತ್ತು ಸಕ್ರಿಯ ಸ್ಥಿತಿಯನ್ನು ನೋಡುತ್ತವೆ. ಇದಲ್ಲದೆ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು 'PRAN' (ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ) ಅಥವಾ ಸಲ್ಲಿಸಿದ ದಾಖಲೆಗಳಲ್ಲಿ ನೀಡಲಾದ ಹೆಸರು ಹೊಂದಾಣಿಕೆಯಾಗುತ್ತದೆ ಎಂಬುದನ್ನು ಖಚಿತಪಡಿಸುತ್ತವೆ.
ಎಲ್ಲಾ ಪಿಂಚಣಿ ಹಿಂಪಡೆಯುವಿಕೆಗೆ ನಿಯಮಗಳು ಅನ್ವಯಿಸುತ್ತವೆ
ಈ ನಿಬಂಧನೆಗಳು NPS, ಅಟಲ್ ಪಿಂಚಣಿ ಯೋಜನೆ ಮತ್ತು NPS ಲೈಟ್‌ನಲ್ಲಿನ ಎಲ್ಲಾ ರೀತಿಯ ಹಿಂಪಡೆಯುವಿಕೆಗಳಿಗೆ ಮತ್ತು ಗ್ರಾಹಕರ ಬ್ಯಾಂಕ್ ಖಾತೆ ವಿವರಗಳಲ್ಲಿನ ಬದಲಾವಣೆಗಳಿಗೆ ಅನ್ವಯಿಸುತ್ತದೆ.
ಇದನ್ನೂ ಓದಿ-ಸಿಬಿಲ್ ಸ್ಕೋರ್ ಗೆ ಸಂಬಂಧಿಸಿದಂತೆ 5 ಹೊಸ ನಿಯಮಗಳನ್ನು ರೂಪಿಸಿದೆ ಆರ್ಬಿಐ, ಸಾಲ ಪಡೆಯುವ ಮುನ್ನ ತಿಳಿದುಕೊಳ್ಳಿ!
ಪೆನ್ನಿ ಡ್ರಾಪ್ ಎಂದರೇನು?
ಫಲಾನುಭವಿಯ ಬ್ಯಾಂಕ್ ಖಾತೆಗೆ ಸಣ್ಣ ಮೊತ್ತವನ್ನು ಹಾಕುವ ಮೂಲಕ ಮತ್ತು ಪೆನ್ನಿ ಡ್ರಾಪ್ ಪ್ರತಿಕ್ರಿಯೆಯ ಆಧಾರದ ಮೇಲೆ ಹೆಸರನ್ನು ಹೊಂದಿಸುವ ಮೂಲಕ 'ಪರೀಕ್ಷಾ ವಹಿವಾಟು' ಮಾಡುವ ಮೂಲಕ ಖಾತೆಯ ಸಿಂಧುತ್ವವನ್ನು ಇದರ ಅಡಿಯಲ್ಲಿ ಪರಿಶೀಲಿಸಲಾಗುತ್ತದೆ
ಇದನ್ನೂ ಓದಿ-November 2023 ರಲ್ಲಿ ಒಟ್ಟು 15 ಬ್ಯಾಂಕ್ ರಜಾದಿನಗಳಿವೆ, ತಪ್ಪದೆ ನೋಟ್ ಮಾಡಿಟ್ಟುಕೊಳ್ಳಿ!
PFRDA ಯ ಇತ್ತೀಚಿನ ಅಧಿಸೂಚನೆಯ ಪ್ರಕಾರ, "ಹೆಸರು ಹೊಂದಾಣಿಕೆ, ನಿರ್ಗಮನ/ಹಿಂತೆಗೆದುಕೊಳ್ಳುವ ಅಪ್ಲಿಕೇಶನ್‌ಗಳನ್ನು ಪ್ರಕ್ರಿಯೆಗೊಳಿಸಲು ಮತ್ತು ಗ್ರಾಹಕರ ಬ್ಯಾಂಕ್ ಖಾತೆ ವಿವರಗಳನ್ನು ಮಾರ್ಪಡಿಸಲು ಪೆನ್ನಿ ಡ್ರಾಪ್ ಪರಿಶೀಲನೆಯು ಯಶಸ್ವಿಯಾಗಬೇಕು."
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.