ನವದೆಹಲಿ: ಕೇಂದ್ರ ಸರ್ಕಾರವು ಶೀಘ್ರದಲ್ಲೇ ಹೊಸ ವಿದ್ಯುತ್ ದರವನ್ನು ಜಾರಿಗೆ ತರಲಿದೆ. ಹೊಸ ನಿಯಮದನ್ವಯ ಹಗಲಿನಲ್ಲಿ ವಿದ್ಯುತ್ ಶುಲ್ಕವು ಶೇ.20ರಷ್ಟು ಕಡಿಮೆಯಾದರೆ, ರಾತ್ರಿ ವೇಳೆಯ ಪೀಕ್ ಅವರ್‌ಗಳಲ್ಲಿ ಶೇ.20ರಷ್ಟು ವಿದ್ಯುತ್ ಶುಲ್ಕ ಹೆಚ್ಚಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಈ ಸಂಬಂಧ ಕೇಂದ್ರ ವಿದ್ಯುತ್ ಸಚಿವಾಲಯವು ಶುಕ್ರವಾರ ಹೊಸ ವಿದ್ಯುತ್ ನಿಯಮಗಳನ್ನು ಪ್ರಕಟಿಸಿದೆ. ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಈ ಹೊಸ ವ್ಯವಸ್ಥೆಯನ್ನು ಅಳವಡಿಸುವುದರಿಂದ ಗ್ರಿಡ್‌ನಲ್ಲಿನ ಹೊರೆ ಮತ್ತು ಪೀಕ್ ಅವರ್‌ನಲ್ಲಿ ವಿದ್ಯುತ್ ಬೇಡಿಕೆ ಕಡಿಮೆಯಾಗುತ್ತದೆ ಎಂದ ವಿದ್ಯುತ್ ಸಚಿವಾಲಯ ತಿಳಿಸಿದೆ. ಏಪ್ರಿಲ್ 2024ರಿಂದ ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಗೆ ಈ ನೀತಿಯನ್ನು ಜಾರಿಗೊಳಿಸಲಾಗುವುದು. 1 ವರ್ಷದ ನಂತರ ಕೃಷಿ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳ ವಿದ್ಯುತ್ ಗ್ರಾಹಕರಿಗೆ ಈ ನಿಯಮ ಅನ್ವಯವಾಗಲಿದೆಯಂತೆ.


ಇದನ್ನೂ ಓದಿ: Minimum Pension: ಸರ್ಕಾರಿ ನೌಕರರ ಪೆನ್ಷನ್ ಕುರಿತು ಮಹತ್ವದ ಅಪ್ಡೇಟ್ ಪ್ರಕಟ, ನಿವೃತ್ತಿ ಬಳಿಕ ಎಷ್ಟು ಹಣ ಸಿಗಲಿದೆ ಗೊತ್ತಾ?


ಈ ವ್ಯವಸ್ಥೆಯು ಗರಿಷ್ಠ ಸಮಯದಲ್ಲಿ ಗ್ರಿಡ್‌ನಲ್ಲಿನ ಬೇಡಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು 2030ರ ವೇಳೆಗೆ ಪಳೆಯುಳಿಕೆಯಲ್ಲದ ಇಂಧನಗಳಿಂದ ತನ್ನ ಶಕ್ತಿಯ ಸಾಮರ್ಥ್ಯದ ಶೇ.65ರಷ್ಟು ಸಾಧಿಸುವ ಗುರಿಯತ್ತ ಕೆಲಸ ಮಾಡಲು ದೇಶಕ್ಕೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.


ಈ ಬಗ್ಗೆ ಮಾತನಾಡಿರುವ ಕೇಂದ್ರ ವಿದ್ಯುತ್ ಸಚಿವ ಆರ್.ಕೆ.ಸಿಂಗ್, ‘ಸೌರ ವಿದ್ಯುತ್ ಅಗ್ಗವಾಗಿದ್ದು, ಸೌರ ವಿದ್ಯುತ್ ಉತ್ಪಾದಿಸುವ ದಿನದಲ್ಲಿ ವಿದ್ಯುತ್ ಶುಲ್ಕ ಕಡಿಮೆ ಆಗಲಿದೆ. ಇದರಿಂದ ಗ್ರಾಹಕರಿಗೆ ತುಂಬಾ ಅನುಕೂಲವಾಗಲಿದೆ. ಸೌರಶಕ್ತಿ ಲಭ್ಯವಿಲ್ಲದ ರಾತ್ರಿಗಳಲ್ಲಿ ಉಷ್ಣ, ಜಲ ಮತ್ತು ಅನಿಲ ಆಧಾರಿತ ಸ್ಥಾವರಗಳ ಮೂಲಕ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ’ ಎಂದು ಹೇಳಿದರು.


ಇದನ್ನೂ ಓದಿ: Fitch Ratings: 2023-24 ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಮುನ್ಸೂಚನೆಯನ್ನು ಮತ್ತೊಮ್ಮೆ ಅಂದಾಜಿಸಿದ ಫೀಚ್


‘ಸೌರ ವಿದ್ಯುತ್ ಉತ್ಪಾದನೆಗಿಂತ ಅವುಗಳ ವೆಚ್ಚ ಹೆಚ್ಚಾಗಿರುತ್ತದೆ. ಈ ಹಿನ್ನೆಲೆ ರಾತ್ರಿ ವಿದ್ಯುತ್ ಶುಲ್ಕವನ್ನು ಇದು ಬಿಂಬಿಸುತ್ತದೆ. ಈ ನೀತಿಯು 2030ರ ವೇಳೆಗೆ ಶೇ.65ರಷ್ಟು ಪಳೆಯುಳಿಕೆಯೇತರ ಇಂಧನ ದಕ್ಷತೆ ಸಾಧಿಸಲು ಸಹಾಯ ಮಾಡುತ್ತದೆ. 2070ರ ವೇಳೆಗೆ ಶೂನ್ಯ ಹೊರಸೂಸುವಿಕೆ ಗುರಿಗೆ ಅನುಗುಣವಾಗಿ ಈ ದಿಸೆಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.


ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಈ ನೀತಿಯಿಂದ ಸೌರ ವಿದ್ಯುತ್ ವ್ಯವಸ್ಥೆ ಹೊಂದಿರುವ ಗ್ರಾಹಕರಿಗೆ ಅನುಕೂಲವಾಗಲಿದೆ. ಹಗಲು ಬಳಸುವ ವಿದ್ಯುತ್‌ಗೆ ಕಡಿಮೆ ಶುಲ್ಕವಿದ್ದರೆ, ರಾತ್ರಿ ಬಳಸುವ ಲೈಟ್‌ಗಳು, ಫ್ಯಾನ್‌ಗಳು ಮತ್ತು ಎಸಿಗಳಿಗೆ ಹೆಚ್ಚಿನ ವಿದ್ಯುತ್ ಶುಲ್ಕವನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ ಎಂದ ವರದಿಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.