New RBI Rules: ವೇತನ, ಪಿಂಚಣಿ ಮತ್ತು ಇಎಂಐ ಪಾವತಿಗಳಂತಹ ಪ್ರಮುಖ ವಹಿವಾಟುಗಳಿಗಾಗಿ ಇನ್ಮುಂದೆ ನೀವು ಕೆಲಸದ ದಿನಗಳಿಗಾಗಿ ಕಾಯಬೇಕಾಗಿಲ್ಲ. National Automated Clearing House (NACH)ನ ನಿಯಮಗಳನ್ನುRBI ಬದಲಾಯಿಸಿದೆ. ಈ ಬದಲಾವಣೆಗಳು ಆಗಸ್ಟ್ 1, 2021 ರಿಂದ ಜಾರಿಗೆ ಬರಲಿವೆ. ಅಂದರೆ, ಇನ್ಮುಂದೆ ನೀವು ನಿಮ್ಮ ವೇತನ, ಪಿಂಚಣಿ ಪಡೆಯಲು ಅಥವಾ EMI ಪಾವತಿಸಲು ವೀಕೆಂಡ್  (ಶನಿವಾರ ಮತ್ತು ಭಾನುವಾರ) ಮುಕ್ತಾಯದವರೆಗೆ ಕಾಯಬೇಕಾಗಿಲ್ಲ. ಅಂದರೆ, ವಾರದ ದಿನಗಳು ಸೇರಿದಂತೆ ವಾರಾಂತ್ಯದಲ್ಲಿಯೂ ಕೂಡ ನೀವು ಸೇವೆಗಳನ್ನು ಪಡೆಯಬಹುದಾಗಿದೆ.


COMMERCIAL BREAK
SCROLL TO CONTINUE READING

ವಾರವಿಡಿ ನೀವು NACH ಸೇವೆಯ ಲಾಭ ಪಡೆಯಬಹುದು (NACH Services)
ಹಲವು ಬಾರಿ ತಿಂಗಳ ಮೊದಲ ದಿನ ವಾರಾಂತ್ಯಕ್ಕೆ ಬೀಳುತ್ತದೆ. ಇದರಿಂದ ವೇತನ ಪಡೆಯುವವ ನೌಕರರು ತಮ್ಮ ವೇತನ ಖಾತೆಗೆ ಬರುವುದಕ್ಕಾಗಿ ಸೋಮವಾರದವರೆಗೆ ಕಾಯಬೇಕಾಗುತ್ತದೆ. RBI ಗವರ್ನರ್ ಶಕ್ತಿಕಾಂತ್ ದಾಸ್, ಕಳೆದ ತಿಂಗಳ ತಮ್ಮ ಕ್ರೆಡಿಟ್ ಪಾಲಸಿ ರಿವ್ಯೂ ಸಂದರ್ಭದಲ್ಲಿ ಗ್ರಾಹಕರ ಸೌಕರ್ಯವನ್ನು ಮತ್ತಷ್ಟು ಹೆಚ್ಚಿಸಲು  ಹಾಗೂ 24 X7 ಪ್ರಸ್ತುತ ಇರುವ RTGS (Real Time Gross Settlement) ಲಾಭ ಪಡೆಯಲು, NACH ಸೌಲಭ್ಯವನ್ನು ವಾರದ ಏಳೂ ದಿನಗಳಿಗೆ ನೀಡಲು ಪ್ರಸ್ತಾವನೆಯೊಂದನ್ನು ನೀಡಲಾಗಿದ್ದು, ಇದು ಆಗಸ್ಟ್ 1, 2021ರಿಂದ ಜಾರಿಗೆ ಬರಲಿದೆ ಎಂದು ಘೋಷಿಸಿದ್ದಾರೆ. 


ಇದನ್ನೂ ಓದಿ-Income Tax : ನಿಮಗೆ Taxable Income ಇಲ್ಲ ಆದ್ರೂ ತೆರಿಗೆ ಕಡಿತವಾಗಿದೆಯಾ? ಹಾಗಿದ್ರೆ ಮರುಪಾವತಿ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ 


ಇನ್ಮುಂದೆ ವಾರಾಂತ್ಯದಲ್ಲಿಯೂ ಕೂಡ ವೇತನ, ಪೆನ್ಷನ್, EMI (Salary On Weekend)
NACH ಒಂದು ಬಲ್ಕ್ ಪೇಮೆಂಟ್ ಪ್ಲಾಟ್ ಫಾರ್ಮ್ ಆಗಿದ್ದು, ಇದನ್ನು ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI) ನಿರ್ವಹಿಸುತ್ತದೆ. ಇದು ಹಲವು ರೀತಿಯ ಕ್ರೆಡಿಟ್ ಟ್ರಾನ್ಸ್ಫರ್ ಸೇವೆಗಳಾಗಿರುವ ಡಿವಿಡೆಂಡ್ (Dividend), ಬಡ್ಡಿ, ವೇತನ ಹಾಗೂ ಪೆನ್ಷನ್ (Pension) ಸೌಕರ್ಯ ಒದಗಿಸುತ್ತದೆ. ಇದಲ್ಲದೆ ವಿದ್ಯುತ್ ಬಿಲ್, ಅಡುಗೆ ಅನಿಲ, ಟೆಲಿಫೋನ್, ನೀರು. ಸಾಲ, EMI, ಮ್ಯೂಚವಲ್ ಫಂಡ್ ಹಾಗೂ ಇನ್ಸುರನ್ಸ್ ಪಾವತಿಯ ಸೌಲಭ್ಯ ನೀಡುತ್ತದೆ. ಅಂದರೆ, ಇನ್ಮುಂದೆ ಈ ಎಲ್ಲಾ ಸೇವೆಗಳನ್ನು ಪಡೆಯಲು ಸೋಮವಾರದಿಂದ ಶುಕ್ರವಾರದವರೆಗೆ ಕಾಯಬೇಕಾಗಿಲ್ಲ. ಇವುಗಳನ್ನು ನೀವು ವೀಕ್ ಎಂಡ್ ನಲ್ಲಿಯೂ ಕೂಡ ಮಾಡಬಹುದು.


ಇದನ್ನೂ ಓದಿ-Bajaj Chetak E-scooter Booking: ಬಜಾಜ್ ಇ-ಸ್ಕೂಟರ್ ಬುಕಿಂಗ್ ಇಂದಿನಿಂದ ಆರಂಭ, ಕರ್ನಾಟಕದ ಯಾವ ನಗರದಲ್ಲಿ ಬುಕಿಂಗ್ ಲಭ್ಯ?


ಈ ಕುರಿತು ಹೇಳಿಕೆ ನೀಡಿರುವ RBI, NACH ಲಾಭಾರ್ಥಿಗಳಿಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ (DBT) ಒಂದು ಪ್ರಮುಖ ಡಿಜಿಟಲ್ ಮೋಡ್ ರೂಪದಲ್ಲಿ ಮುಂದೆ ಬಂದಿದ್ದು, ಪ್ರಸ್ತುತ ಸಮಯದಲ್ಲಿ ಕೊವಿಡ್-19 (Covid-19) ಕಾಲಾವಧಿಯಲ್ಲಿ ಸಮಯಕ್ಕೆ ಹಾಗೂ ಪಾರದರ್ಶಕವಾಗಿ ಸಬ್ಸಿಡಿ ವರ್ಗಾವಣೆಯಲ್ಲಿ ಸಹಾಯ ಮಾಡುತ್ತಿದೆ. ಪ್ರಸ್ತುತ NACH ಸೇವೆಗಳನ್ನು ಕೇವಲ ಬ್ಯಾಂಕ್ ಗಳು ಕಾರ್ಯನಿರ್ವಹಿಸುತ್ತಿರುವ ದಿನಗಳಲ್ಲಿ ಮಾತ್ರ ಲಭ್ಯವಿದೆ. ಆದರೆ, ಆಗಸ್ಟ್ 1 ರಿಂದ ಈ ಸೇವೆ ವಾರದ ಏಳೂ ದಿನಗಳವರೆಗೆ ಲಭ್ಯವಿರಲಿದೆ.


ಇದನ್ನೂ ಓದಿ-Hero Glamour Xtec Launch: ಬೈಕ್ ಸವಾರರಿಗೊಂದು ಸಂತಸದ ಸುದ್ದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ