Pan Masala- Tobaco New Rule: ಪಾನ್ ಮಸಾಲಾ, ತಂಬಾಕು ಮತ್ತು ಗುಟ್ಕಾ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳು ಏಪ್ರಿಲ್ 1 ರಿಂದ ಭಾರೀ ದಂಡವನ್ನು ಎದುರಿಸಲಿವೆ. ಜಿಎಸ್‌ಟಿ ಕೌನ್ಸಿಲ್ ಇಂದು ಈ ಕುರಿತು ಹೊಸ ಸಲಹೆಯನ್ನು ನೀಡಿದ್ದು, ಈ ಬಗ್ಗೆ ಮಾಹಿತಿ ನೀಡಲಾಗಿದೆ. ಜಿಎಸ್‌ಟಿ ನೀಡಿದ ಸಲಹೆಯ ಪ್ರಕಾರ, ತಂಬಾಕು ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳು ತಮ್ಮ ಪ್ಯಾಕಿಂಗ್ ಯಂತ್ರಗಳನ್ನು ಏಪ್ರಿಲ್ 1 ರಿಂದ ಜಿಎಸ್‌ಟಿ ಅಧಿಕಾರಿಗಳೊಂದಿಗೆ ನೋಂದಾಯಿಸಿಕೊಳ್ಳಬೇಕು ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ತಂಬಾಕು ಉತ್ಪನ್ನ ತಯಾರಿಕಾ ಕಂಪನಿಯು ತನ್ನ ಪ್ಯಾಕಿಂಗ್ ಯಂತ್ರೋಪಕರಣಗಳನ್ನು ಜಿಎಸ್‌ಟಿ ಅಧಿಕಾರಿಗಳೊಂದಿಗೆ ನೋಂದಾಯಿಸಲು ವಿಫಲವಾದರೆ, ಅವು ರೂ 1 ಲಕ್ಷದವರೆಗೆ ದಂಡವನ್ನು ಪಾವತಿಸಬೇಕಾಗಲಿದೆ.


ಮಸೂದೆಯಲ್ಲಿ ತಿದ್ದುಪಡಿ ಮಾಡಿದ ನಂತರ ನಿರ್ಧಾರ ಕೈಗೊಳ್ಳಲಾಗಿದೆ
ತಂಬಾಕು ಉತ್ಪಾದನಾ ವಲಯದಲ್ಲಿ ಆದಾಯ ಸೋರಿಕೆಯನ್ನು ತಡೆಯುವುದು ಸರ್ಕಾರದ ಈ ಕ್ರಮದ ಉದ್ದೇಶವಾಗಿದೆ. ಹಣಕಾಸು ಮಸೂದೆ, 2024 ಕೇಂದ್ರ ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿಗಳನ್ನು ಪರಿಚಯಿಸಿದ್ದು, ಅಲ್ಲಿ ನೋಂದಾಯಿಸದ ಪ್ರತಿ ಯಂತ್ರಕ್ಕೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.


ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ
ಜಿಎಸ್‌ಟಿ ಕೌನ್ಸಿಲ್‌ನ ಶಿಫಾರಸಿನ ಆಧಾರದ ಮೇಲೆ ತೆರಿಗೆ ಅಧಿಕಾರಿಗಳು ಕಳೆದ ವರ್ಷ ತಂಬಾಕು ತಯಾರಕರಿಂದ ಯಂತ್ರಗಳ ನೋಂದಣಿಗಾಗಿ ವಿಶೇಷ ಪ್ರಕ್ರಿಯೆಯನ್ನು ಪರಿಚಯಿಸಿದ್ದರು. ಅಸ್ತಿತ್ವದಲ್ಲಿರುವ ಪ್ಯಾಕಿಂಗ್ ಯಂತ್ರಗಳ ವಿವರಗಳು, ಈ ಯಂತ್ರಗಳ ಪ್ಯಾಕಿಂಗ್ ಸಾಮರ್ಥ್ಯದೊಂದಿಗೆ ಹೊಸದಾಗಿ ಸ್ಥಾಪಿಸಲಾದ ಯಂತ್ರಗಳು ನಮೂನೆ GST SRM-I ನಲ್ಲಿ ನೀಡಬೇಕು. ಆದರೆ, ಕಳೆದ ವರ್ಷ ಇದಕ್ಕೆ ಯಾವುದೇ ರೀತಿಯ ದಂಡದ ಬಗ್ಗೆ ಉಲ್ಲೇಖವನ್ನು ಮಾಡಿರಲಿಲ್ಲ.


ನೋಂದಣಿ ಏಕೆ ಮಾಡಲಾಗುತ್ತಿದೆ?
ಪಾನ್ ಮಸಾಲಾ, ಗುಟ್ಕಾ ಮತ್ತು ಅಂತಹುದೇ ಉತ್ಪನ್ನಗಳಿಗೆ ಸಂಬಂಧಿಸಿದ ಯಂತ್ರಗಳನ್ನು ನೋಂದಣಿ ಮಾಡಬೇಕು ಎಂದು ಜಿಎಸ್‌ಟಿ ಕೌನ್ಸಿಲ್ ಕಳೆದ ಸಭೆಯಲ್ಲಿ ನಿರ್ಧರಿಸಿದ್ದು, ಅವುಗಳ ಉತ್ಪಾದನಾ ಸಾಮರ್ಥ್ಯವನ್ನು ನಾವು ಗಮನಿಸಬಹುದು ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.


ಇದನ್ನೂ ಓದಿ-FD Interest Rate Hike: ಈ ಸರ್ಕಾರಿ ಬ್ಯಾಂಕುಗಳು ಎಫ್ಡಿ ಮೇಲೆ ನೀಡುತ್ತಿವೆ ಶೇ.8.40ರಷ್ಟು ಬಡ್ಡಿದರ!


ಕಳೆದ ವರ್ಷದವರೆಗೂ ನೋಂದಣಿ ಮಾಡದವರಿಗೆ ಯಾವುದೇ ದಂಡ ವಿಧಿಸಲಾಗುತ್ತಿರಲಿಲ್ಲ ಎಂದು ಮಲ್ಹೋತ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸದ್ಯ ಇದಕ್ಕೆ ಸ್ವಲ್ಪ ದಂಡ ವಿಧಿಸಬೇಕು ಎಂದು ಈ ಬಾರಿ ಕೌನ್ಸಿಲ್ ತೀರ್ಮಾನಿಸಿದೆ. ಈ ಕಾರಣಕ್ಕಾಗಿ ಈಗ ನೋಂದಣಿ ಮಾಡದವರಿಗೆ 1 ಲಕ್ಷ ದಂಡ ವಿಧಿಸಲು ನಿರ್ಧರಿಸಲಾಗಿದೆ.


ಇದನ್ನೂ ಓದಿ-Zero Income Tax Countries: ಎಷ್ಟು ಬೇಕಾದಷ್ಟೂ ಹಣ ಸಂಪಾದಿಸಿ, ಇಲ್ಲಿ ನೈಯಾ ಪೈಸೆ ಕೂಡ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ!


ಕಳೆದ ವರ್ಷ ಫೆಬ್ರವರಿಯಲ್ಲಿ, ಪಾನ್ ಮಸಾಲಾ ಮತ್ತು ಗುಟ್ಖಾ ವ್ಯವಹಾರದಲ್ಲಿ ತೆರಿಗೆ ವಂಚನೆಯನ್ನು ತಡೆಯುವ ಕುರಿತು ರಾಜ್ಯ ಹಣಕಾಸು ಸಚಿವರ ಸಮಿತಿಯ ವರದಿಯನ್ನು ಜಿಎಸ್‌ಟಿ ಕೌನ್ಸಿಲ್ ಅನುಮೋದಿಸಿತ್ತು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ