New RBI Rules : ಇಂದಿನಿಂದ ಬದಲಾಗಲಿದೆ ವೇತನ, ಪಿಂಚಣಿ, EMI ಪಾವತಿ ನಿಯಮ
New RBI Rules:ಒಂದನೇ ತಾರೀಕು ವಾರಾಂತ್ಯದಲ್ಲಿ ಬಂದರೆ, ವೇತನ ವರ್ಗವು ತಮ್ಮ ವೇತನ ಕ್ರೆಡಿಟ್ ಆಗಬೇಕಾದರೆ ಸೋಮವಾರದವರೆಗೆ ಕಾಯಬೇಕಾಗುತ್ತಿತ್ತು. ಆದರೆ, ಇನ್ನು ಹಾಗಾಗುವುದಿಲ್ಲ.
ನವದೆಹಲಿ : New RBI Rules: ಆಗಸ್ಟ್ 1 ರಿಂದ ಅಂದರೆ ಇಂದಿನಿಂದ ಬ್ಯಾಂಕಿಂಗ್ ವಲಯದಲ್ಲಿ ಹಲವು ಬದಲಾವಣೆಗಳಾಗಲಿವೆ. ಇದರೊಂದಿಗೆ, ಸಂಬಳ, ಪಿಂಚಣಿ ಮತ್ತು ಇಎಂಐ ಪಾವತಿಗಳಂತಹ ಪ್ರಮುಖ ವಹಿವಾಟುಗಳಿಗಾಗಿ ಇನ್ನು ವರ್ಕಿಂಗ್ ಡೇಸ್ ಗಾಗಿ ಕಾಯಬೇಕಾಗಿಲ್ಲ. National Automated Clearing House (NACH) ನ ನಿಯಮಗಳನ್ನು RBI ತಿದ್ದುಪಡಿ ಮಾಡಿದೆ. ಈ ಹೊಸ ನಿಯಮದ ಪ್ರಕಾರ, ಈಗ ವೇತನ ಅಥವಾ ಪಿಂಚಣಿಗಾಗಿ ಶನಿವಾರ ಮತ್ತು ಭಾನುವಾರ ಕಳೆಯುವವರೆಗೆ ಕಾಯಬೇಕಾಗಿಲ್ಲ. ಈ ಬದಲಾವಣೆಗಳು ಆಗಸ್ಟ್ 1, ರಿಂದ ಅಂದರೆ ಇಂದಿನಿಂದ ಅನ್ವಯವಾಗಲಿದೆ.
ಒಂದನೇ ತಾರೀಕು ವಾರಾಂತ್ಯದಲ್ಲಿ ಬಂದರೆ, ವೇತನ ವರ್ಗವು ತಮ್ಮ ವೇತನ ಕ್ರೆಡಿಟ್ (Salary credit) ಆಗಬೇಕಾದರೆ ಸೋಮವಾರದವರೆಗೆ ಕಾಯಬೇಕಾಗುತ್ತಿತ್ತು. ಆದರೆ, ಇನ್ನು ಹಾಗಾಗುವುದಿಲ್ಲ. ಗ್ರಾಹಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು, 24x7 ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ (RTGS), ಲಾಭವನ್ನು ಪಡೆಯಲು, NACH ಅನ್ನು ವಾರದ ಎಲ್ಲಾ ದಿನಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಇದು ಇಂದಿನಿಂದಲೇ ಅನ್ವಯವಾಗಲಿದೆ.
ಇದನ್ನೂ ಓದಿ : Sukanya Samriddhi Yojana: ಮಗಳ ಭವಿಷ್ಯ ಆರ್ಥಿಕವಾಗಿ ಭದ್ರಗೊಳಿಸಬೇಕಾದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ
ವಾರಾಂತ್ಯದಲ್ಲಿ ಕೂಡ ನಡೆಯಲಿದೆ ವೇತನ, ಪಿಂಚಣಿ, ಇಎಂಐ ಪಾವತಿ :
NACH ಎಂದರೆ ಅದೊಂದು ಬಲ್ಕ್ ಪೇಮೆಂಟ್ ಸಿಸ್ಟಮ್ . ಇದು ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಡಿವಿಡೆಂಡ್, ಬಡ್ಡಿ, ವೇತನ ಮತ್ತು ಪಿಂಚಣಿಯಂತಹ ವಿವಿಧ ರೀತಿಯ ಕ್ರೆಡಿಟ್ ಟ್ರಾನ್ಸ್ಫರ್ ಅನ್ನು ಸುಗಮಗೊಳಿಸುತ್ತದೆ. ಇದಲ್ಲದೇ, ವಿದ್ಯುತ್ ಬಿಲ್, ಗ್ಯಾಸ್ (Gas), ದೂರವಾಣಿ, ನೀರು, ಸಾಲದ ಇಎಂಐ(EMI), ಮ್ಯೂಚುವಲ್ ಫಂಡ್ ಹೂಡಿಕೆ ಮತ್ತು ವಿಮಾ ಕಂತು ಪಾವತಿಯ ಸೌಲಭ್ಯವನ್ನೂ ಒದಗಿಸಲಾಗಿದೆ. ಇನ್ನು ಮುಂದೆ ಈ ಪಾವತಿಗಳನ್ನು ಸೋಮವಾರದಿಂದ ಶುಕ್ರವಾರದ ಒಳಗೆ ಮಾಡಬೇಕೆಂದಿಲ್ಲ. ವಾರಾಂತ್ಯದಲ್ಲಿ ಕೂಡಾ ಇದು ಕಾರ್ಯ ನಿರ್ವಹಿಸಲಿದೆ.
ವಾರದ ಎಲ್ಲಾ ದಿನಗಳಲ್ಲಿ ಲಭ್ಯವಿರುವ ಸೌಲಭ್ಯಗಳು:
RBI ಪ್ರಕಾರ, NACH ಫಲಾನುಭವಿಗಳಿಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸಫರ್ ನ ಜನಪ್ರಿಯ ಮತ್ತು ಪ್ರಮುಖ ಡಿಜಿಟಲ್ ಮೋಡ್ ಆಗಿ ಹೊರಹೊಮ್ಮಿದೆ. ಇದು ಪ್ರಸ್ತುತ COVID-19 ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರದ ಸಬ್ಸಿಡಿಗಳನ್ನು ಸಕಾಲಿಕವಾಗಿ ಮತ್ತು ಪಾರದರ್ಶಕವಾಗಿ ವರ್ಗಾಯಿಸಲು ಸಹಾಯ ಮಾಡುತ್ತದೆ. ಇಲ್ಲಿಯವರೆಗೆ NACH ಸೇವೆಗಳು ಬ್ಯಾಂಕುಗಳು (Bank) ಕೆಲಸ ಮಾಡುವ ದಿನಗಳಲ್ಲಿ ಮಾತ್ರ ಲಭ್ಯವಿಟ್ಟು. ಆದರೆ ಇಂದಿನಿಂದ ಈ ಸೌಲಭ್ಯವು ವಾರದ ಎಲ್ಲಾ ದಿನಗಳಲ್ಲಿ ಲಭ್ಯವಿರುತ್ತದೆ.
ಇದನ್ನೂ ಓದಿ : LIC Kanyadan Policy : LIC ಈ ಹೊಸ ಯೋಜನೆಯಲ್ಲಿ ಕೇವಲ ₹121 ಪಾವತಿಸಿ : ಮಗಳ ಮದುವೆ ವೇಳೆಗೆ ಸಿಗಲಿದೆ 27 ಲಕ್ಷ ರೂ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ