Yamaha RX100 ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬಿಡುಗಡೆ! ಎದೆಬಡಿತ ಹೆಚ್ಚಿಸುವ ಮಾಹಿತಿ ಬಹಿರಂಗ
New Yamaha RX100: ಮೋಟಾರ್ ಸೈಕಲ್ ಗಳ ಜಗತ್ತಿನಲ್ಲಿ ಇಂದಿಗೂ ಕೂಡ ಬೈಕ್ ಗಳ ಬಗ್ಗೆ ಸ್ವಲ್ಪ ಆಸಕ್ತಿ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಯಮಹಾ RX 100 ಒಂದು ಚಿರಪರಿಚಿತ ಹೆಸರಾಗಿದೆ. ಆದರೆ, ಬಹಳ ಹಿಂದೆಯೇ ಈ ಬೈಕ್ ಗಳ ಉತ್ಪಾದನೆ ಸ್ಥಗಿತಗೊಂಡಿದೆ.
Yamaha RX100 Launch Details: ಮೋಟಾರ್ ಸೈಕಲ್ ವಿಭಾಗದಲ್ಲಿ ಇಂದಿಗೂ ಕೂಡ ಬೈಕ್ ಗಳ ಬಗ್ಗೆ ಸ್ವಲ್ಪ ಆಸಕ್ತಿ ಇರುವವರಿಗೂ ಕೂಡ ತಿಳಿದಿರುವ ಒಂದು ಚಿರಪರಿಚಿತ ಹೆಸರು ಅಂದರೆ ಅದುವೇ ಯಮಹಾ ಆರ್ಎಕ್ಸ್ 100. ಈ ಬೈಕ್ ಗಳ ಉತ್ಪಾದನೆಯನ್ನು ಕಂಪನಿ ಬಹಳ ಹಿಂದೆಯೇ ಸ್ಥಗಿತಗೊಳಿಸಿದೆ. ಯಮಹಾ ಕಂಪನಿಯ ಒಂದು ಐಕಾನಿಕ್ ಬೈಕ್ ಇದಾಗಿತ್ತು. ಆದರೂ ಕೂಡ ಭಾರತದಲ್ಲಿ ಕಂಪನಿ ಇದರ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಆದರೆ, ಇಂದಿಗೂ ಕೂಡ ಈ ಬೈಕ್ ಬಗ್ಗೆ ಯುವಕರಲ್ಲಿ ಸಾಕಷ್ಟು ಕ್ರೇಜ್ ಇದೆ. ಇದನ್ನೇ ಗಮನದಲ್ಲಿಟ್ಟುಕೊಂಡಿರುವ ಹೊಸ ಜನರೇಶನ್ ಯಮಹಾ RX100 ಬಿಡುಗಡೆಗೊಳಿಸಲು ಕಂಪನಿ ಸಿದ್ಧತೆಯನ್ನು ನಡೆಸುತ್ತಿದೆ. ಈ ಕುರಿತು ಈ ಮೊದಲೇ ಬಹಿರಂಗ ಹೇಳಿಕೆ ನೀಡಿದ್ದ ಯಮಹಾ ಇಂಡಿಯಾ ಚೇರ್ಮನ್ ಆಗಿರುವ ಇಶಾನ್ ಚಿಹಾನಾ, RX 100 ಮತ್ತೆ ಮಾರುಕಟ್ಟೆಗೆ ಮರಳಲಿದೆ ಎಂದು ಹೇಳಿದ್ದರು. ಉದ್ದೇಶ ಪೂರ್ವಕವಾಗಿ ಕಂಪನಿ ತನ್ನ ಬೇರೆ ಯಾವುದೇ ಬೈಕ್ ಗೆ RX 100 ಬ್ಯಾಡ್ಜ್ ಅನ್ನು ಬಳಸಿಲ್ಲ. ಏಕೆಂದರೆ ಈ ಬೈಕ್ ಅನ್ನು ಮತ್ತೆ ಹೊಸರೂಪದಲ್ಲಿ ಮಾರುಕಟ್ಟೆಗೆ ಇಳಿಸುವ ಯೋಜನೆಯನ್ನು ಕಂಪನಿ ಹೊಂದಿದೆ.
ಕಟ್ಟುನಿಟ್ಟಾದ BS6 ಹಂತ 2 ಹೊರಸೂಸುವಿಕೆಯ ಮಾನದಂಡಗಳ ಕಾರಣದಿಂದಾಗಿ ಕಂಪನಿಯು RX100 ನ 2-ಸ್ಟ್ರೋಕ್ ಎಂಜಿನ್ ಅನ್ನು ಮರಳಿ ತರಲು ಸಾಧ್ಯವಿಲ್ಲ ಎಂಬುದು ಬಹುತೇಕ ಸ್ಪಷ್ಟವಾಗಿದೆ. ಆದರೆ, ಇತ್ತೀಚಿನ ಮಾಧ್ಯಮ ವರದಿಯ ಪ್ರಕಾರ, ಯಮಹಾ ಹೊಸ RX100 ಗಾಗಿ ದೊಡ್ಡ ಎಂಜಿನ್ ಅನ್ನು ಪರಿಗಣಿಸುತ್ತಿದೆ ಎನ್ನಲಾಗಿದೆ. ತನ್ನ ವಿನ್ಯಾಸ, ಧ್ವನಿ ಮತ್ತು ಕಾರ್ಯಕ್ಷಮತೆಯಿಂದಾಗಿ RX100 ಭಾರತೀಯರಲ್ಲಿ ಭಾರಿ ಜನಪ್ರಿಯವಾಗಿದೆ ಎಂದು ಯಮಹಾ ಇಂಡಿಯಾ ಚೇರ್ಮನ್ ಹೇಳಿದ್ದಾರೆ. ಹೊಸ ಬೈಕ್ ದೊಡ್ಡ ಎಂಜಿನ್ ಅನ್ನು ಹೊಂದಿರಲಿದೆ ಎಂದು ಅವ್ರು ಹೇಳಿದ್ದಾರೆ.
ಇದನ್ನೂ ಓದಿ-WhatsApp ನ ಈ ಅದ್ಭುತ ವೈಶಿಷ್ಟ್ಯ ಶೀಘ್ರದಲ್ಲಿಯೇ ಬಿಡುಗಡೆ, ಬಳಕೆದಾರರಿಗೇನು ಲಾಭ?
ಮುಂಬರುವ ಯಮಹಾ RX100 100cc ಎಂಜಿನ್‌ನಿಂದ ನಿಯಂತ್ರಿಸಲ್ಪಡುವುದಿಲ್ಲ, ಆದರೆ ದೊಡ್ಡ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ ಎಂಬುದು ಇದರಿಂದ ಸ್ಪಷ್ಟವಾಗಿದ್ದರೂ. ಇದರಲ್ಲಿ ಯಾವ ಎಂಜಿನ್ ಅಳವಡಿಸಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯಮಹಾ ಪ್ರಸ್ತುತ ತನ್ನ ಸ್ಕೂಟರ್ ಶ್ರೇಣಿಯಲ್ಲಿ 125 ಸಿಸಿ ಎಂಜಿನ್‌ಗಳನ್ನು ಹೊಂದಿದೆ. ಇದಲ್ಲದೆ, ಇದು 150 ಸಿಸಿ ಮತ್ತು 250 ಸಿಸಿ ಎಂಜಿನ್‌ಗಳನ್ನು ಸಹ ಹೊಂದಿದೆ. ಇವುಗಳಲ್ಲಿ ಯಾವುದಾದರೂ ಎಂಜಿನ್ ಅನ್ನು ಮಾತ್ರ ಬಳಸಬಹುದು. 125 ಸಿಸಿ ಎಂಜಿನ್ ಅಥವಾ 150 ಸಿಸಿ ಎಂಜಿನ್ ಬಳಕೆಯಾಗುವ ನಿರೀಕ್ಷೆ ಹೆಚ್ಚಾಗಿದೆ.
ಆದರೆ ಕಂಪನಿಯು ಒಂದು ವೇಳೆ ರಾಯಲ್ ಎನ್‌ಫೀಲ್ಡ್ ಅನ್ನು RX ಎಂಬ ಸಾಂಪ್ರದಾಯಿಕ ಹೆಸರಿನೊಂದಿಗೆ ಗುರಿಯಾಗಿಸಲು ಬಯಸಿದರೆ, ಅದು 250cc ಎಂಜಿನ್ ಅನ್ನು ಸಹ ಬಳಸಬಹುದು, ಇದರಿಂದ ಅದು ರಾಯಲ್ ಎನ್‌ಫೀಲ್ಡ್‌ನ 350cc ಶ್ರೇಣಿಯೊಂದಿಗೆ ಸ್ಪರ್ಧಿಸಬಹುದು. ಏಕೆಂದರೆ ಈ ಹಿಂದೆ ರಾಯಲ್ ಎನ್‌ಫೀಲ್ಡ್ ಮೋಟಾರ್ ಸೈಕಲ್‌ಗಳಿಗೆ ಹೋಲಿಸಿದರೆ RX100 ಬೈಕ್ ಹೆಚ್ಚು ಜನರನ್ನು ಆಕರ್ಷಿಸಿತ್ತು. ಆದರೆ, ಇನ್ನೂ ಅದರ ಬಿಡುಗಡೆಗಾಗಿ ಸ್ವಲ್ಪ ಕಾಲ ಕಾಯಬೇಕಾಗಲಿದೆ. ಇದು 2026 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.