NHAI New Rules: ಉದ್ದೇಶಪೂರ್ವಕವಾಗಿ ಟೋಲ್ ಶುಲ್ಕವನ್ನು ತಪ್ಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊಸ ನಿಯಮವನ್ನು ರೂಪಿಸಿದೆ. ಈ ನಿಯಮಾನುಸಾರ, ವಾಹನಗಳ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಫಾಸ್ಟ್‌ಟ್ಯಾಗ್‌ಗಳನ್ನು ಅಳವಡಿಸಬೇಕಾಗಿದ್ದು, ಈ ನಿಯಮವನ್ನು ಅನುಸರಿಸದ ವಾಹನಗಳ ಚಾಲಕರಿಗೆ ಪ್ರಮಾಣಿತ ಟೋಲ್ ಶುಲ್ಕಕ್ಕಿಂತ ದುಪ್ಪಟ್ಟು ಶುಲ್ಕವನ್ನು ವಿಧಿಸಲು ಎನ್‌ಎಚ್‌ಎಐ ನಿರ್ಧರಿಸಿದೆ. ಅಷ್ಟೇ ಅಲ್ಲದೆ, ಪುನರಾವರ್ತಿತ ಅಪರಾಧಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ತಿಳಿಸಲಾಗಿದೆ. 


COMMERCIAL BREAK
SCROLL TO CONTINUE READING

ಈ ಕುರಿತಂತೆ ಗುರುವಾರ (ಜುಲೈ 18) ಹೇಳಿಕೆ ನೀಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, "ವಿಂಡ್‌ಸ್ಕ್ರೀನ್‌ನಲ್ಲಿ ಉದ್ದೇಶಪೂರ್ವಕವಾಗಿ ಫಾಸ್ಟ್‌ಟ್ಯಾಗ್ (FASTAG) ಅನ್ನು ಅಂಟಿಸದೇ ಇರುವುದು ಟೋಲ್ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬಗಳಿಗೆ ಕಾರಣವಾಗುತ್ತದೆ, ಇದು ಸಹ ರಾಷ್ಟ್ರೀಯ ಹೆದ್ದಾರಿ (National Highway) ಬಳಕೆದಾರರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ". ಇದನ್ನು ತಡೆಯುವ ನಿಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ವಿಂಡ್‌ಸ್ಕ್ರೀನ್‌ನಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸದ ಜನರಿಂದ ಡಬಲ್ ಟೋಲ್ ತೆರಿಗೆ ಸಂಗ್ರಹಿಸಲು ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ತಿಳಿಸಿದೆ. 


ಇದನ್ನೂ ಓದಿ- ಅಂಬಾನಿ-ಅದಾನಿಗೆ ಟಕ್ಕರ್ ನೀಡಲು ಮುಂದಾದ ಟಾಟಾ: ಈ ಕ್ಷೇತ್ರದಲ್ಲಿ ಭಾರೀ ಹೂಡಿಕೆಗೆ ಸಜ್ಜು!


ಟೋಲ್ ಪ್ಲಾಜಾಗಳಲ್ಲಿ ಟ್ರಾಫಿಕ್ ಜಾಮ್: 
ವಾಹನದ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಅಂಟಿಸದೆ ಟೋಲ್ ಲೇನ್‌ಗೆ ಪ್ರವೇಶಿಸುವ ಜನರು ಟೋಲ್ ಪ್ಲಾಜಾದಲ್ಲಿ (Toll Plaza)ಅನಗತ್ಯ ವಿಳಂಬವನ್ನು ಉಂಟುಮಾಡುತ್ತಾರೆ. ಇದು ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಉಂಟು ಮಾಡುವುದರಿಂದ ಇತರ ಜನರಿಗೆ ಅನಾನುಕೂಲತೆ ಉಂಟಾಗುತ್ತದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಫಾಸ್ಟ್ಯಾಗ್ ಅಳವಡಿಸದಿದ್ದಲ್ಲಿ ಡಬಲ್ ಟೋಲ್ ತೆರಿಗೆಯನ್ನು ಸಂಗ್ರಹಿಸಲು ಎಲ್ಲಾ ಏಜೆನ್ಸಿಗಳಿಗೆ ವಿವರವಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಅನ್ನು ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. 


ಅಷ್ಟೇ ಅಲ್ಲದೆ, ವಾಹನದ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಸ್ಥಿರವಾದ ಫಾಸ್ಟ್‌ಟ್ಯಾಗ್ ಇಲ್ಲದೆ ಟೋಲ್ ಲೇನ್‌ಗೆ ಪ್ರವೇಶಿಸಿದರೆ ದಂಡ ವಿಧಿಸುವ ಬಗ್ಗೆ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಈ ಮಾಹಿತಿಯನ್ನು ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ. ಹೆಚ್ಚುವರಿಯಾಗಿ, ಫಾಸ್ಟ್‌ಟ್ಯಾಗ್‌ಗಳನ್ನು ಅಳವಡಿಸದ ವಾಹನಗಳಿಗೆ  ವಾಹನ ನೋಂದಣಿ ಸಂಖ್ಯೆ (VRN) ಅನ್ನು ಸೆರೆಹಿಡಿಯುವ CCTV ಫೂಟೇಜ್ ಅನ್ನು ದಾಖಲಿಸಲಾಗುತ್ತದೆ. ಈ ಕ್ರಮವು ವಿಧಿಸಲಾದ ಶುಲ್ಕಗಳ ಸರಿಯಾದ ದಾಖಲೆಗಳನ್ನು ಮತ್ತು ಟೋಲ್ ಲೇನ್‌ಗಳಲ್ಲಿ ಅಂತಹ ವಾಹನಗಳ ಉಪಸ್ಥಿತಿಯನ್ನು ನಿರ್ವಹಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 


ಇದನ್ನೂ ಓದಿ- ಹೊಸ ಸರ್ವಿಸ್ ಆರಂಭಿಸಿದ Air India : ಈಗ ಗಿಫ್ಟ್ ಕಾರ್ಡ್ ಮೂಲಕವೂ ಖರೀದಿಸಬಹುದು ಟಿಕೆಟ್ 


ಎನ್‌ಎಚ್‌ಎಐ ಅಧಿಕಾರಿಗಳು ಈ ಕ್ರಮವು ಟೋಲ್ ಸಂಗ್ರಹದ ದಕ್ಷತೆಯನ್ನು ಹೆಚ್ಚಿಸಲು ಮತ್ತು ಎಕ್ಸ್‌ಪ್ರೆಸ್‌ವೇಗಳು ಮತ್ತು ಗ್ರೀನ್‌ಫೀಲ್ಡ್ ಹೆದ್ದಾರಿಗಳಂತಹ ಮುಚ್ಚಿದ ಟೋಲಿಂಗ್ ಸ್ಟ್ರೆಚ್‌ಗಳಲ್ಲಿ ಟೋಲ್ ತಪ್ಪಿಸುವ ನಿದರ್ಶನಗಳನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ ಎಂದು ಒತ್ತಿ ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.