ಹೊಸ ಸರ್ವಿಸ್ ಆರಂಭಿಸಿದ Air India : ಈಗ ಗಿಫ್ಟ್ ಕಾರ್ಡ್ ಮೂಲಕವೂ ಖರೀದಿಸಬಹುದು ಟಿಕೆಟ್

Air India Update: ಏರ್ ಇಂಡಿಯಾ ಗಿಫ್ಟ್ ಕಾರ್ಡ್ ಅನ್ನು ಟಾಟಾ ಗ್ರೂಪ್‌ನ ಏರ್ ಇಂಡಿಯಾ ಏರ್‌ಲೈನ್ ಬಿಡುಗಡೆ ಮಾಡಿದೆ.ಈ ಕಾರ್ಡ್ ಮೂಲಕ ಬೇರೆಯವರಿಗೆ ವಿಮಾನ ಪ್ರಯಾಣವನ್ನು ಗಿಫ್ಟ್ ರೂಪದಲ್ಲಿ ನೀಡಬಹುದು.  

Written by - Ranjitha R K | Last Updated : Jul 17, 2024, 03:25 PM IST
  • ಏರ್ ಇಂಡಿಯಾ ಗಿಫ್ಟ್ ಕಾರ್ಡ್ ಬಿಡುಗಡೆ ಮಾಡಿದ ಏರ್ ಇಂಡಿಯಾ ಏರ್‌ಲೈನ್
  • ವಿಮಾನ ಪ್ರಯಾಣವನ್ನು ಗಿಫ್ಟ್ ರೂಪದಲ್ಲಿ ನೀಡಬಹುದು.
  • ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಬುಕಿಂಗ್‌ಗೆ ಬಳಸಬಹುದು.
ಹೊಸ ಸರ್ವಿಸ್ ಆರಂಭಿಸಿದ Air India : ಈಗ ಗಿಫ್ಟ್ ಕಾರ್ಡ್ ಮೂಲಕವೂ ಖರೀದಿಸಬಹುದು ಟಿಕೆಟ್  title=

Air India Update : ಏರ್ ಇಂಡಿಯಾ ಗಿಫ್ಟ್ ಕಾರ್ಡ್ ಅನ್ನು ಟಾಟಾ ಗ್ರೂಪ್‌ನ ಏರ್ ಇಂಡಿಯಾ ಏರ್‌ಲೈನ್ ಬಿಡುಗಡೆ ಮಾಡಿದೆ.ಈ ಕಾರ್ಡ್ ಮೂಲಕ ಬೇರೆಯವರಿಗೆ ವಿಮಾನ ಪ್ರಯಾಣವನ್ನು ಗಿಫ್ಟ್ ರೂಪದಲ್ಲಿ ನೀಡಬಹುದು.ಈ ಇ-ಕಾರ್ಡ್‌ಗಳು ಆನ್‌ಲೈನ್‌ನಲ್ಲಿ ರೂ 1,000 ರಿಂದ ರೂ 200,000 ವರೆಗೆ ಲಭ್ಯವಿರುತ್ತವೆ ಎಂದು ಏರ್‌ಲೈನ್‌ಗಳು ತಿಳಿಸಿವೆ. ಇವುಗಳನ್ನು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಬುಕಿಂಗ್‌ಗೆ ಬಳಸಬಹುದು.ಇದಲ್ಲದೆ, ಹೆಚ್ಚುವರಿ ಲಗೇಜ್ ಮತ್ತು ಸೀಟ್ ಆಯ್ಕೆಗೆ ಸಹ ಇದನ್ನು ಬಳಸಬಹುದು. ಈ ಮೂಲಕ ಪ್ರಯಾಣವು ಹೆಚ್ಚು ಸುಲಭ ಮತ್ತು ಆಹ್ಲಾದಕರವಾಗಿರುತ್ತದೆ.

ಸ್ಥಳ, ದಿನಾಂಕ ಮತ್ತು ಆಸನ ವರ್ಗವನ್ನು ಆಯ್ಕೆ ಮಾಡಬಹುದು : 
ಗಿಫ್ಟ್ ಕಾರ್ಡ್ ಸ್ವೀಕರಿಸುವ ವ್ಯಕ್ತಿಯು ತನ್ನ ಪ್ರಯಾಣದ ಸ್ಥಳ,ದಿನಾಂಕ ಮತ್ತು ಆಸನ ವರ್ಗವನ್ನು ಸ್ವತಃ ಆಯ್ಕೆ ಮಾಡಬಹುದು. ಏರ್‌ಲೈನ್ಸ್ ಪರವಾಗಿ, ಗಿಫ್ಟ್ ಕಾರ್ಡ್ ಸೇವೆಯನ್ನು ಪ್ರಾರಂಭಿಸುವುದರಿಂದ ಏರ್ ಇಂಡಿಯಾದ ಗ್ರಾಹಕ ಕೇಂದ್ರಿತ ಸೇವೆಯನ್ನು ಬಲಪಡಿಸುತ್ತದೆ ಎಂದು ಹೇಳಲಾಗಿದೆ.ಇದರೊಂದಿಗೆ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುವ ಮೂಲಕ ಡಿಜಿಟಲ್ ಕ್ಷೇತ್ರವನ್ನು ವಿಸ್ತರಿಸಬಹುದು.

ಇದನ್ನೂ ಓದಿ : Gruha Jyothi Scheme: ʼಗೃಹಜ್ಯೋತಿʼ ಫಲಾನುಭವಿಗಳಿಗೆ ಶಾಕ್‌ ನೀಡಿದ ರಾಜ್ಯ ಸರ್ಕಾರ!

ಏರ್ ಇಂಡಿಯಾ ಗಿಫ್ಟ್ ಕಾರ್ಡ್ ಅನ್ನು ಖರೀದಿಸುವುದು ಹೇಗೆ?: 
ಏರ್ ಇಂಡಿಯಾ ಗಿಫ್ಟ್ ಕಾರ್ಡ್ ಅನ್ನು ನಾಲ್ಕು ವಿಭಿನ್ನ ಥೀಮ್‌ಗಳಿಗಾಗಿ ಖರೀದಿಸಬಹುದು.ಪ್ರಯಾಣ,ವಿವಾಹ ವಾರ್ಷಿಕೋತ್ಸವ, ಜನ್ಮದಿನ ಮತ್ತು ವಿಶೇಷ ಸಂದರ್ಭಗಳು. ಈ ಕಾರ್ಡ್‌ಗಳನ್ನು ಖರೀದಿಸುವಾಗ, ನಿಮ್ಮ ಆಯ್ಕೆಯ ಥೀಮ್ ಅನ್ನು ನೀವು ಆಯ್ಕೆ ಮಾಡಬಹುದು. giftcards.airindia.com ವೆಬ್‌ಸೈಟ್‌ನಿಂದ  ಈ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು.

ಏರ್ ಇಂಡಿಯಾ ಗಿಫ್ಟ್ ಕಾರ್ಡ್ ಅನ್ನು ವರ್ಗಾಯಿಸಬಹುದೇ? : 
ಏರ್ ಇಂಡಿಯಾ ಗಿಫ್ಟ್ ಕಾರ್ಡ್ ಅನ್ನು ವರ್ಗಾಯಿಸಬಹುದು.ಅಂದರೆ ನೀವು ಯಾರಿಗೆ ಈ ಕಾರ್ಡ್ ಅನ್ನು ಉಡುಗೊರೆಯಾಗಿ ನೀಡುತ್ತೀರೋ ಅವರು ಬೇರೆಯವರಿಗೆ ವಿಮಾನವನ್ನು ಬುಕ್ ಮಾಡಬಹುದು. ಏಕಕಾಲದಲ್ಲಿ ಮೂರು ಗಿಫ್ಟ್ ಕಾರ್ಡ್‌ಗಳನ್ನು ಬಳಸಬಹುದು.ಹಣದ ಕೊರತೆಯಿದ್ದರೆ,ಉಳಿದ ಹಣವನ್ನು ನೀವು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬಹುದು.

ಇದನ್ನೂ ಓದಿ : ಮುಖೇಶ್-ನೀತಾ ಅಂಬಾನಿ ಸೊಸೆ ರಾಧಿಕಾಗೆ ನೀಡಿದ ಉಡುಗೊರೆಗಳಿವು !ವಿಶ್ವದ ದುಬಾರಿ ಗಿಫ್ಟ್ ಗಳೆಂದರೆ ಇವೇ !

ಒಂದಕ್ಕಿಂತ ಹೆಚ್ಚು ಪ್ರಯಾಣಕ್ಕಾಗಿ ಏರ್ ಇಂಡಿಯಾ ಗಿಫ್ಟ್ ಕಾರ್ಡ್ ಅನ್ನು ಬಳಸಬಹುದು.ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಅವುಗಳನ್ನು ಬಳಸಬಹುದು. ಗಿಫ್ಟ್ ಕಾರ್ಡ್‌ನ ಮಾನ್ಯತೆಯ ಅವಧಿ ಮುಗಿಯುವ ಮೊದಲು ಅದನ್ನು ಬಳಸಬೇಕು.ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನೀವು ಏರ್ ಇಂಡಿಯಾ ವೆಬ್‌ಸೈಟ್ ಅಥವಾ ಗ್ರಾಹಕ ಸೇವೆಯನ್ನು ಸಂಪರ್ಕಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News