ಇನ್ನು ಪೆಟ್ರೋಲ್ ಮೇಲಿಲ್ಲ ಅಬಕಾರಿ ಸುಂಕ : ಡೀಸೆಲ್ ಮೇಲಿನ ಸುಂಕವೂ ಕಡಿತ
ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 12 ರೂ.ನಿಂದ 10 ರೂ.ಗೆ ಇಳಿಸಲಾಗಿದೆ. ಏವಿಯೇಷನ್ ಟರ್ಬೈನ್ ಇಂಧನ ಮೇಲಿನ ಅಬಕಾರಿ ಸುಂಕವನ್ನು 6 ರೂ.ನಿಂದ 4 ರೂ.ಗೆ ಇಳಿಸಲಾಗಿದೆ.
Petrol Diesel Export : ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನ ಮೇಲಿನ ಅಬಕಾರಿ ಸುಂಕದಲ್ಲಿ ದೊಡ್ಡ ರಿಲೀಫ್ ಘೋಷಿಸಲಾಗಿದೆ. ಜೂನ್ 30ರಂದು ನೀಡಿದ್ದ ಆದೇಶಕ್ಕೆ ತಿದ್ದುಪಡಿ ತಂದಿರುವ ಹಣಕಾಸು ಸಚಿವಾಲಯ, ಪೆಟ್ರೋಲ್ ಮತ್ತು ಡೀಸೆಲ್ ರಫ್ತಿನ ಮೇಲಿನ ಅಬಕಾರಿ ಸುಂಕದಲ್ಲಿ ರಿಲೀಫ್ ನೀಡಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 10 ರೂ.ಗೆ ಇಳಿಕೆ :
ಈ ಹಿಂದೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 5 ರೂ. ಆಗಿತ್ತು. ಆದರೆ ಅದನ್ನು ರದ್ದುಗೊಳಿಸುವುದಾಗಿ ಘೋಷಿಸಲಾಗಿದೆ. ಇದಲ್ಲದೇ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 12 ರೂ.ನಿಂದ 10 ರೂ.ಗೆ ಇಳಿಸಲಾಗಿದೆ. ಏವಿಯೇಷನ್ ಟರ್ಬೈನ್ ಇಂಧನ ಮೇಲಿನ ಅಬಕಾರಿ ಸುಂಕವನ್ನು 6 ರೂ.ನಿಂದ 4 ರೂ.ಗೆ ಇಳಿಸಲಾಗಿದೆ. ಕಚ್ಚಾ ತೈಲದ ಮೇಲಿನ ಅಬಕಾರಿ ಸುಂಕವನ್ನು ಕೆಜಿಗೆ 23,250 ರೂ.ನಿಂದ 17000 ರೂ.ಗೆ ಇಳಿಸಲಾಗಿದೆ.
ಇದನ್ನೂ ಓದಿ : Today Vegetable Price: ಟೊಮೆಟೊ, ಈರುಳ್ಳಿ ಸೇರಿ ಇಂದಿನ ತರಕಾರಿ ದರ ಹೀಗಿದೆ
ಹಣಕಾಸು ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಒಂದು ರೂಪಾಯಿ ಹೆಚ್ಚುವರಿ ಅಬಕಾರಿ ಸುಂಕವನ್ನೂ ಅನ್ವಯಿಸಲಾಗುವುದಿಲ್ಲ. ವಿಶೇಷ ಆರ್ಥಿಕ ವಲಯದಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಯಾವುದೇ ಅಬಕಾರಿ ಸುಂಕವನ್ನು ವಿಧಿಸಲಾಗುವುದಿಲ್ಲ.
ಇದನ್ನೂ ಓದಿ : Arecanut today Price: ಯಾವ್ಯಾವ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ..?
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.