Free Ration Latest Update: ನೀವು ಪಡಿತರ ಚೀಟಿ ಹೊಂದಿದ್ದರೆ, ಸರ್ಕಾರದ ಉಚಿತ ಪಡಿತರ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದರೆ ನಿಮಗಾಗಿ ಇಲ್ಲಿದೆ ಪ್ರಮುಖ ಸುದ್ದಿ. ಸರ್ಕಾರದ ನಿಯಮಗಳ ಅನ್ವಯ ರೇಷನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡುವುದು ಅತ್ಯಗತ್ಯವಾಗಿದೆ. ನೀವು ಇನ್ನೂ ಕೂಡ ಈ ಕೆಲಸವನ್ನು ಪೂರ್ಣಗೊಳಿಸದೇ ಇದ್ದರೆ 01 ಜುಲೈ 2023ರ ಮೊದಲು ಈ ಕೆಲಸವನ್ನು ಪೂರ್ಣಗೊಳಿಸಿ. ಇಲ್ಲದಿದ್ದರೆ ನೀವು ಉಚಿತ ಪಡಿತರ ಪ್ರಯೋಜನದಿಂದ ವಂಚಿತರಾಗಬಹುದು. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಕೇಂದ್ರ ಸರ್ಕಾರವು ರೇಷನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡುವಂತೆ ಗ್ರಾಹಕರಿಗೆ ನಿರಂತರವಾಗಿ ಸೂಚನೆ ನೀಡುತ್ತಲೇ ಇದೆ. ಈ ವರೆಗೂ ಕೋಟ್ಯಾಂತರ ಮಂದಿ ತಮ್ಮ ಆಧಾರ್-ರೇಷನ್ ಕಾರ್ಡ್ ಅನ್ನು ಲಿಂಕ್ ಮಾಡಿದ್ದಾರೆ. ಆದಾಗ್ಯೂ, ಇನ್ನು ಬಹುತೇಕ ಜನರು ಈ ಕೆಲಸವನ್ನು ಪೂರ್ಣಗೊಳಿಸಿಲ್ಲ. ಈ ಮೊದಲು ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡಲು 31 ಮಾರ್ಚ್ 2023ರವರೆಗೆ ಡೆಡ್ ಲೈನ್ ನೀಡಲಾಗಿತ್ತು. ಇದೀಗ ಈ ಸಮಯವನ್ನು 30 ಜೂನ್ 2023ರವರೆಗೆ ಗಡುವನ್ನು ವಿಸ್ತರಿಸಿದೆ. ನಿಗದಿತ ದಿನಾಂಕದೊಳಗೆ ನಿಮ್ಮ ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್  ಸ್ವಯಂಚಾಲಿತವಾಗಿ ರದ್ದಾಗಲಿದೆ. 


ಇದನ್ನೂ ಓದಿ- ಹೆಚ್ಚುವರಿ ಪಿಂಚಣಿ ಬಗ್ಗೆ ಸರ್ಕಾರದ ಬಿಗ್ ಅಪ್ಡೇಟ್ ! ಉದ್ಯೋಗದಲ್ಲಿರುವವರಿಗೆ ತಿಳಿದಿರಬೇಕಾದ ವಿಚಾರ !


ರೇಷನ್ ಕಾರ್ಡ್- ಆಧಾರ್ ಕಾರ್ಡ್ ಲಿಂಕ್ ಮಾಡುವುದರ ಪ್ರಯೋಜನಗಳು: 
* ಯಾವುದೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಹೊಂದಿರುವುದನ್ನು ತಡೆಯಲು ಸಾಧ್ಯವಾಗುತ್ತದೆ. 
* ಅನರ್ಹ ಫಲಾನುಭವಿಗಳನ್ನು ಗುರುತಿಸಬಹುದು.
* ಇದು ಅರ್ಹ ಜನರು ಮಾತ್ರ ಸಬ್ಸಿಡಿ ಗ್ಯಾಸ್ ಅಥವಾ ಪಡಿತರವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. 
* ಆಧಾರ್ ಕಾರ್ಡ್ ಮತ್ತು ರೇಷನ್ ಲಿಂಕ್ ಮಾಡುವುದರಿಂದ ನಕಲಿ ಪಡಿತರ ಚೀಟಿಗಳು ಮತ್ತು ಮಧ್ಯವರ್ತಿಗಳ ಅನಿಯಂತ್ರಿತತೆಯನ್ನು ಕೊನೆಗೊಳಿಸಲು ಸಹಾಯವಾಗಿದೆ. 


ಇದನ್ನೂ ಓದಿ- ಸರ್ಕಾರಿ ನೌಕರರಿಗೆ ಬಂಪರ್ ! ಡಿಎ ಮಾತ್ರವಲ್ಲ ಒಂದೇ ಬಾರಿ ಈ ಮೂರು ಭತ್ಯೆಗಳಲ್ಲಿ ಏರಿಕೆ


ಆನ್‌ಲೈನ್‌ನಲ್ಲಿ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ?
>> ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
>> ಆಧಾರ್ ಕಾರ್ಡ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆಯಂತಹ ವಿವರಗಳನ್ನು ನಮೂದಿಸಿ.
>> ಇದರ ನಂತರ Continue ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
>> ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ.
>> ಒಟಿಪಿ ಅನ್ನು ನಮೂದಿಸುವ ಮೂಲಕ ಮತ್ತು ಲಿಂಕ್ ಪಡಿತರ ಚೀಟಿ-ಆಧಾರ್ ಕಾರ್ಡ್ ಅನ್ನು ಕ್ಲಿಕ್ ಮಾಡಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.