ಸರ್ಕಾರಿ ನೌಕರರಿಗೆ ಬಂಪರ್ ! ಡಿಎ ಮಾತ್ರವಲ್ಲ ಒಂದೇ ಬಾರಿ ಈ ಮೂರು ಭತ್ಯೆಗಳಲ್ಲಿ ಏರಿಕೆ

7th Pay Commission Latest News:ಸರ್ಕಾರದ ಕಡೆಯಿಂದ ತುಟ್ಟಿಭತ್ಯೆಯನ್ನು ಹೆಚ್ಚಿಸುವುದರ ಜೊತೆಗೆ, ಇತರ ಭತ್ಯೆಗಳು ಕೂಡಾ ಹೆಚ್ಚಾಗುತ್ತವೆ. ಉದ್ಯೋಗಿಗಳು ಮತ್ತು ಪಿಂಚಣಿದಾರರು ಜುಲೈ 2023 ರಿಂದ ಅದರ ಪ್ರಯೋಜನಗಳನ್ನು ಪಡೆಯಲು ಪ್ರಾರಂಭಿಸುತ್ತಾರೆ.

Written by - Ranjitha R K | Last Updated : May 11, 2023, 12:13 PM IST
  • ನೌಕರರ ತುಟ್ಟಿಭತ್ಯೆಯನ್ನು ಮತ್ತೊಮ್ಮೆ ಹೆಚ್ಚಿಸಲಿದೆ.
  • ತುಟ್ಟಿಭತ್ಯೆಯಲ್ಲಿನ ಹೆಚ್ಚಳ ಜುಲೈ 1 ರಿಂದ ಅನ್ವಯ
  • ನೌಕರರ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ.
ಸರ್ಕಾರಿ ನೌಕರರಿಗೆ ಬಂಪರ್ ! ಡಿಎ ಮಾತ್ರವಲ್ಲ ಒಂದೇ ಬಾರಿ ಈ ಮೂರು ಭತ್ಯೆಗಳಲ್ಲಿ ಏರಿಕೆ   title=

7th Pay Commission Latest News : ಕೇಂದ್ರ ಸರ್ಕಾರವು ನೌಕರರ ತುಟ್ಟಿಭತ್ಯೆಯನ್ನು ಮತ್ತೊಮ್ಮೆ ಹೆಚ್ಚಿಸಲಿದೆ. ತುಟ್ಟಿಭತ್ಯೆಯಲ್ಲಿನ ಹೆಚ್ಚಳ ಜುಲೈ 1 ರಿಂದ ಅನ್ವಯವಾಗಲಿದೆ. ತುಟ್ಟಿಭತ್ಯೆ ಹೆಚ್ಚಳದಿಂದ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ತುಟ್ಟಿಭತ್ಯೆ  ಹೆಚ್ಚಳದೊಂದಿಗೆ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ. 

ಸರ್ಕಾರದ ಕಡೆಯಿಂದ ತುಟ್ಟಿಭತ್ಯೆಯನ್ನು ಹೆಚ್ಚಿಸುವುದರ ಜೊತೆಗೆ, ಇತರ ಭತ್ಯೆಗಳು ಕೂಡಾ ಹೆಚ್ಚಾಗುತ್ತವೆ. ಉದ್ಯೋಗಿಗಳು ಮತ್ತು ಪಿಂಚಣಿದಾರರು ಜುಲೈ 2023ರಿಂದ ಅದರ ಪ್ರಯೋಜನಗಳನ್ನು ಪಡೆಯಲು ಪ್ರಾರಂಭಿಸುತ್ತಾರೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. 

ಇದನ್ನೂ ಓದಿ Adani Hindenburg Case: ಅದಾನಿ ಸಮೂಹಕ್ಕೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಮಾರಿಷಸ್ ಮಂತ್ರಿ, ಹಿಂಡೆನ್ಬರ್ಗ್ ಆರೋಪಗಳು ಆಧಾರರಹಿತ!

ಪಿಎಫ್ ಮತ್ತು ಗ್ರಾಚ್ಯುಟಿಯಲ್ಲೂ ಏರಿಕೆ : 
ಜುಲೈ 1 ರಿಂದ ನೌಕರರು ಪಡೆಯುವ ಭತ್ಯೆಗಳಲ್ಲಿ ಪ್ರಯಾಣ ಭತ್ಯೆ ಮತ್ತು ನಗರ ಭತ್ಯೆ ಸೇರಿವೆ. ಇದಲ್ಲದೇ, ತುಟ್ಟಿ ಭತ್ಯೆ ಹೆಚ್ಚಳದಿಂದಾಗಿ ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿಯಲ್ಲಿಯೂ ಏರಿಕೆಯಾಗಲಿದೆ. ನೌಕರರ ತುಟ್ಟಿ ಭತ್ಯೆ ಶೇ.42ರಿಂದ 46ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ಡಿಎ ಹೆಚ್ಚಳವು ಪ್ರಯಾಣ ಭತ್ಯೆ (ಟಿಎ) ಮೇಲೂ ಪರಿಣಾಮ ಬೀರಲಿದೆ ಎನ್ನುತ್ತಾರೆ ತಜ್ಞರು.

ಡಿಎ ಹೆಚ್ಚಳದಿಂದ ಅವರ ವೇತನ, ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿ ಕೂಡಾ ಹೆಚ್ಚಾಗಲಿದೆ. ವಾಸ್ತವವಾಗಿ, ಪಿಎಫ್ ಮತ್ತು ಗ್ರಾಚ್ಯುಟಿಯನ್ನು ಮೂಲ ವೇತನ + ತುಟ್ಟಿಭತ್ಯೆಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಡಿಎ ಹೆಚ್ಚಳದಿಂದ ಈ ಭತ್ಯೆಗಳು ಹೆಚ್ಚಾಗುವುದು ಖಚಿತ. ಈ ಬದಲಾವಣೆಯ ನಂತರ ನೌಕರರು ಮಾತ್ರವಲ್ಲದೆ ಪಿಂಚಣಿದಾರರು  ಕೂಡಾ ಇದರ ಪ್ರಯೋಜನವನ್ನು ಪಡೆಯುತ್ತಾರೆ. ಯಾಕೆಂದರೆ ಪಿಂಚಣಿದಾರರ ಡಿಆರ್  ಅಥವಾ ಡಿಯರ್ನೆಸ್ ರಿಲೀಫ್ ನಲ್ಲಿ ಕೂಡಾ  ವ್ಯತ್ಯಾಸ ಕಂಡು ಬರಲಿದೆ. 

ಇದನ್ನೂ ಓದಿ : Nissan Magnite: ಬಜೆಟ್ ಬೆಲೆಗೆ ಅದ್ಭುತ ವೈಶಿಷ್ಟ್ಯ ಮತ್ತು ಮೈಲೇಜ್ ಹೊಂದಿರುವ SUV!

ಈ ಬಾರಿ ತುಟ್ಟಿಭತ್ಯೆ ಏರಿಕೆಯೊಂದಿಗೆ ಇದು 46 ಪ್ರತಿಶತಕ್ಕೆ ಹೆಚ್ಚಳ ವಾಗಲಿದೆ. ಉದ್ಯೋಗಿಯ ನಿವೃತ್ತಿಯ ನಂತರ, ಇದು ಡಿಯರ್ನೆಸ್ ರಿಲೀಫ್ ಆಗಿ ಲಭ್ಯವಿರುತ್ತದೆ. ಹಾಗಾಗಿ ಡಿಆರ್ ಕೂಡಾ ಶೇ.42ರಿಂದ ಶೇ.46ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಇದರಿಂದ ನೌಕರರ ಮಾಸಿಕ ಪಿಂಚಣಿ ಹೆಚ್ಚಳವಾಗಲಿದೆ. ಡಿಎ ಹೆಚ್ಚಳವನ್ನು ಸೆಪ್ಟೆಂಬರ್‌ನಿಂದ ಪ್ರಕಟಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News