ನವದೆಹಲಿ : Indigo Offer : ನೀವು ಸಹ ಹೊಸ ವರ್ಷದಲ್ಲಿ ಎಲ್ಲಿಗಾದರೂ ಹೋಗುವ ಬಗ್ಗೆ ಯೋಚಿಸುತ್ತಿದ್ದರೆ, ದೇಶದ ಸುಂದರ ಸ್ಥಳಗಳನ್ನು ಅತ್ಯಂತ ಅಗ್ಗವಾಗಿ ಸುತ್ತಾಡಬಹುದು. ಅಷ್ಟೇ ಅಲ್ಲ, ಈಗ ವಿಮಾನದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆಪ್ರಯಾಣ ಬೆಳೆಸುವುದು ಕೂಡಾ ಬಹಳ ಸುಲಭವಾಗಲಿದೆ. ವಿಮಾನಯಾನ ಕಂಪನಿ ಇಂಡಿಗೋ (Indigo Offer) ಅನೇಕ ಹೊಸ ನೇರ ವಿಮಾನಗಳನ್ನು ಘೋಷಿಸಿದೆ. ಇದರೊಂದಿಗೆ ನಮ್ಮ ಪ್ರಯಾಣಿಕರಿಗೆ ಪಾಯಿಂಟ್ ಟು ಪಾಯಿಂಟ್ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದೇವೆ ಎಂದು ಇಂಡಿಗೋ ಹೇಳಿದೆ.


COMMERCIAL BREAK
SCROLL TO CONTINUE READING

ಟ್ವೀಟ್ ಮೂಲಕ ಮಾಹಿತಿ ನೀಡಿದ ಕಂಪನಿ : 
ಇಂಡಿಗೋ (Indigo) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡುವ ಮೂಲಕ ಈ ಕೊಡುಗೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದೆ. ಇಂಡಿಗೋ ಇಲ್ಲಿ ಲಿಂಕ್ ಅನ್ನು ಶೇರ್ ಮಾಡಿದ್ದು, ಈ ಲಿಂಕ್ ಮೂಲಕ ಟಿಕೆಟ್ ಬುಕ್ ಮಾಡುವುದು ಸಾಧ್ಯವಾಗುತ್ತದೆ. 


ಇದನ್ನೂ ಓದಿ : ದಿನದ ಆರಂಭದಲ್ಲಿ ಸೆನ್ಸೆಕ್ಸ್ 320 ಅಂಕಗಳ ಜಿಗಿತ, ನಿಫ್ಟಿ 17,180 ರಲ್ಲಿ ವಹಿವಾಟು


ಬುಕ್ ಮಾಡುವುದು ಹೇಗೆ?
ಟಿಕೆಟ್ ಬುಕ್ ಮಾಡಲು  ಇಂಡಿಗೋ ವೆಬ್‌ಸೈಟ್‌ಗೆ (Indigo Website) ಭೇಟಿ ನೀಡುವ ಮೂಲಕ ವಿವರವಾದ ಮಾಹಿತಿಯನ್ನು ಪಡೆಯಬಹುದು. ಇದರ ಹೊರತಾಗಿ, ಪ್ರಯಾಣಿಕರು ಇಂಡಿಗೋ ವಿಮಾನಗಳಿಗೆ ವಿಮಾನಯಾನದ ಅಧಿಕೃತ ವೆಬ್‌ಸೈಟ್ https://www.goindigo.in/ ಗೆ ಭೇಟಿ ನೀಡುವ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದು.


ಸ್ಪೈಸ್‌ಜೆಟ್ ಕೂಡ ನೀಡುತ್ತಿದೆ ಆಫರ್ :
ಕರೋನಾದಿಂದಾಗಿ (Coronavirus)  ದೀರ್ಘ ವಿರಾಮದ ನಂತರ, ಗ್ರಾಹಕರನ್ನು ಆಕರ್ಷಿಸಲು ವಿಮಾನಯಾನ ಸಂಸ್ಥೆಗಳು ವಿಭಿನ್ನ ಕೊಡುಗೆಗಳನ್ನು ನೀಡುತ್ತಿವೆ. ಸ್ಪೈಸ್‌ಜೆಟ್ 'ವಾವ್ ವಿಂಟರ್ ಸೇಲ್' ಅನ್ನು ತಂದಿದ್ದು, ಇದರ ಅಡಿಯಲ್ಲಿ ಪ್ರಯಾಣಿಕರು 1122 ರೂ.ಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶವನ್ನು ಪಡೆಯುತ್ತಿದ್ದಾರೆ. ಈ ಕೊಡುಗೆಯಲ್ಲಿ, ಡಿಸೆಂಬರ್ 27 ಮತ್ತು ಡಿಸೆಂಬರ್ 31 ರ ನಡುವೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು.


ಇದನ್ನೂ ಓದಿ : ಜನವರಿ 1 ರಿಂದ ಹೆಚ್ಚಾಗಲಿದೆ ಎಟಿಎಂ withdrawal ಶುಲ್ಕ: ನೀವು ಎಷ್ಟು ಪಾವತಿಸಬೇಕಾಗುತ್ತದೆ ಎಂಬುದನ್ನು ತಿಳಿಯಿರಿ


ಗೋ ಫಸ್ಟ್ ನಿಂದಲೂ ರಿಯಾಯಿತಿ :
ಇಂಡಿಗೋ ಮತ್ತು ಸ್ಪೈಸ್‌ಜೆಟ್‌ನಂತೆ (Spicejet) , ಗೋ ಫರ್ಸ್ಟ್ ದೇಶೀಯ ವಿಮಾನಗಳಲ್ಲಿ 20% ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಆದರೆ, ಈ ಕೊಡುಗೆಯ ಪ್ರಯೋಜನವು ಕರೋನಾ ವೈರಸ್ ಲಸಿಕೆಯ (Corona Vaccine) ಎರಡೂ ಡೋಸ್‌ಗಳನ್ನು ಹಾಕಿಸಿಕೊಂಡವರಿಗೆ ಮಾತ್ರ ಲಭ್ಯವಿರುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.