ನವದೆಹಲಿ: ಇಂಡಿಗೋದ ಸಿಬ್ಬಂದಿಯೊಬ್ಬರು ಮುಂಬೈ-ಅಬುಧಾಬಿ ವಿಮಾನದ (Mumbai-Abu Dhabi flight) ಕಾರ್ಗೋ ವಿಭಾಗದಲ್ಲಿ ನಿದ್ರೆಗೆ (IndiGo employee falls asleep) ಜಾರಿದ್ದಾರೆ. ಆದರೆ ಯುಎಇಯ ರಾಜಧಾನಿ ನಗರಕ್ಕೆ ಆಗಮಿಸಿದಾಗ ಈ ವಿಚಾರ ತಿಳಿದಿದೆ ಎಂದು ವಾಯುಯಾನ ನಿಯಂತ್ರಕ ಡಿಜಿಸಿಎ (DGCA) ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ವಿಮಾನದಲ್ಲಿ ಸಾಮಾನುಗಳನ್ನು ಲೋಡ್ ಮಾಡಿದ ನಂತರ, ಖಾಸಗಿ ಕ್ಯಾರಿಯರ್‌ನ ಲೋಡರ್‌ಗಳಲ್ಲಿ ಒಬ್ಬರು ಭಾನುವಾರದ ವಿಮಾನದಲ್ಲಿ ಕಾರ್ಗೋ ವಿಭಾಗದಲ್ಲಿ ಬ್ಯಾಗೇಜ್‌ನ ಹಿಂದೆ ಮಲಗಿದ್ದರು ಎಂದು ಅವರು ಹೇಳಿದರು. ಮುಂಬೈ ವಿಮಾನ ನಿಲ್ದಾಣದಿಂದ (Mumbai airport) ವಿಮಾನ ಟೇಕಾಫ್ ಆಗುತ್ತಿದ್ದಂತೆ ಕಾರ್ಗೋ ಬಾಗಿಲು ಮುಚ್ಚಿತ್ತು ಮತ್ತು ಲೋಡರ್ ಆಗ ಎಚ್ಚರಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನವು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ರಾಜಧಾನಿ ಅಬುಧಾಬಿಯಲ್ಲಿ ಇಳಿದ ನಂತರ, ಅಬುಧಾಬಿ ಅಧಿಕಾರಿಗಳು ಲೋಡರ್‌ನ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದರು ಮತ್ತು ಅವರ ದೈಹಿಕ ಸ್ಥಿತಿ ಸ್ಥಿರ ಮತ್ತು ಸಾಮಾನ್ಯವಾಗಿದೆ ಎಂದು ಹೇಳಿದರು.
ಅಬುಧಾಬಿಯಲ್ಲಿ ಅಧಿಕಾರಿಗಳಿಂದ ಅಗತ್ಯ ಅನುಮತಿಗಳನ್ನು ಪಡೆದ ನಂತರ, ಅದೇ ವಿಮಾನದಲ್ಲಿ ಪ್ರಯಾಣಿಕನಾಗಿ ಮುಂಬೈಗೆ ವಾಪಸ್ ಕಳುಹಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಅಧಿಕಾರಿಗಳು ತಿಳಿಸಿದ್ದಾರೆ.
ಇಂಡಿಗೋ ವಕ್ತಾರರು, "ಘಟನೆಯ ಬಗ್ಗೆ ನಮಗೆ ತಿಳಿದಿದೆ ಮತ್ತು ಅಗತ್ಯವಿರುವ ಅಧಿಕಾರಿಗಳಿಗೆ ತಿಳಿಸಲಾಗಿದೆ. ವಿಷಯವು ತನಿಖೆಯಲ್ಲಿದೆ." ಎಂದರು.
ಇದನ್ನೂ ಓದಿ: Janhvi Kapoor Photos: ಗೋಲ್ಡ್ , ಕಟ್-ಔಟ್ ಡ್ರೆಸ್‌ನಲ್ಲಿ ಜಾನ್ವಿ ಕಪೂರ್ ಲುಕ್ ಗೆ ಫ್ಯಾನ್ಸ್ ಫಿದಾ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.