ಬೆಂಗಳೂರು: ಬ್ಲಿಂಕಿಟ್ ಈಗ ಮೊಬೈಲ್ ಫೋನ್‌ಗಳ ಡೇಲಿವರಿ ಕೂಡ ಮಾಡಲಿದೆ.  Blinkit ಸಹಾಯದಿಂದ, ಗ್ರಾಹಕರು 10 ನಿಮಿಷಗಳಲ್ಲಿ ಐಫೋನ್ 15 ರ ವಿತರಣೆಯನ್ನು ಪಡೆಯಬಹುದು. Zomato-ಮಾಲೀಕತ್ವದ ಕ್ವಿಕ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಆಪಲ್‌ನ ಪ್ರೀಮಿಯಂ ಮರುಮಾರಾಟಗಾರ ಯುನಿಕಾರ್ನ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ದೆಹಲಿ-ಎನ್‌ಸಿಆರ್, ಮುಂಬೈ, ಪುಣೆ ಮತ್ತು ಬೆಂಗಳೂರಿನಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ (Business News In Kannada).


COMMERCIAL BREAK
SCROLL TO CONTINUE READING

ಆರ್ಡರ್ ಮಾಡಿದ 10 ನಿಮಿಷಗಳಲ್ಲಿ ವಿತರಣೆ ಸಿಗಲಿದೆ
"ಕೇವಲ ನಿಮಿಷಗಳಲ್ಲಿ iPhone 15 ಅನ್ನು ತಲುಪಿಸಲು ಯೂನಿಕಾರ್ನ್ APR ನೊಂದಿಗೆ ಪಾರ್ಟ್ನರ್ ಶಿಪ್ ಮಾಡಿಕೊಂಡಿದ್ದು ನಮಗೆ ಹೆಮ್ಮೆಯ ವಿಷಯ ಎಂದು Blinkit ನ ಸಹ-ಸಂಸ್ಥಾಪಕ ಮತ್ತು CEO ಅಲ್ಬಿಂದರ್ ದಿಂಡ್ಸಾ ಹೇಳಿದ್ದಾರೆ. ಇದು ನಮ್ಮ ಗ್ರಾಹಕರಿಗೆ ತುಂಬಾ ಸಂತೋಷವನ್ನು ನೀಡಲಿದೆ ಎಂಬುದು ಖಚಿತವಾಗಿದೆ. ಅವರು ಆರ್ಡರ್ ಮಾಡಿದ 10 ನಿಮಿಷಗಳಲ್ಲಿ ಬಹು ನಿರೀಕ್ಷಿತ ಉತ್ಪನ್ನ iPhone 15 ಅನ್ನು ಪಡೆಯಲು ಅವರಿಗೆ ಸಾಧ್ಯವಾಗಲಿದೆ.


ಈ 4 ನಗರಗಳಲ್ಲಿ ಡೆಲಿವರಿ ಲಭ್ಯವಿರುತ್ತದೆ
Blinkit 10 ನಿಮಿಷಗಳಲ್ಲಿ ಗ್ರಾಹಕರಿಗೆ ಐಫೋನ್‌ಗಳನ್ನು ತಲುಪಿಸಬಹುದು ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ದಿಂಡ್ಸಾ ಹೇಳಿದ್ದಾರೆ. "ಆಪಲ್ ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಇದೀಗ ದೆಹಲಿ-ಎನ್‌ಸಿಆರ್, ಮುಂಬೈ, ಪುಣೆ ಮತ್ತು ಬೆಂಗಳೂರಿನಲ್ಲಿ ಬ್ಲಿಂಕಿಟ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ" ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ.


ಐಫೋನ್ 15 ಸೆಪ್ಟೆಂಬರ್ 22 ರಿಂದ ಭಾರತದಲ್ಲಿ ಮಾರಾಟವನ್ನು ಆರಂಭಿಸಿದೆ
ಆಪಲ್ ಐಫೋನ್ 15 ಸರಣಿಯ ಮಾರಾಟವು ಭಾರತದಲ್ಲಿ ಆರಂಭಗೊಂಡಿದೆ ಎಂಬುದು ಇಲ್ಲಿ ಉಲ್ಲೇಖನೀಯ, ಈ ಸೇಲ್ ಸೆಪ್ಟೆಂಬರ್ 22 ರಂದು ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಿದೆ. ಈ ಮಾರಾಟವು iPhone 15 ಸರಣಿಯ 4 ಮಾದರಿಗಳನ್ನು ಒಳಗೊಂಡಿದೆ - iPhone 15, iPhone 15 Plus, iPhone 15 Pro ಮತ್ತು iPhone 15 Pro Max. ಇದರ ಬೇಡಿಕೆ ಎಷ್ಟಿತ್ತೆಂದರೆ ದೆಹಲಿ ಮತ್ತು ಮುಂಬೈನ ಆಪಲ್ ಸ್ಟೋರ್‌ನ ಹೊರಗೆ ಉದ್ದನೆಯ ಸರತಿ ಸಾಲುಗಳನ್ನೇ ನೋಡಲಾಗಿದೆ. ರಾತ್ರಿ 12 ಗಂಟೆಯಿಂದಲೇ ಹಲವರು ಸರದಿ ಸಾಲಿನಲ್ಲಿ ನಿಂತು ಫೋನ್ ಖರೀದಿಸುತ್ತಿದ್ದಾರೆ.


ಐಫೋನ್ 15 ಬೆಲೆ
iPhone 15 128GB ಸ್ಟೋರೇಜ್ ಬೆಲೆ ₹79,900
iPhone 15 256GB ಸ್ಟೋರೇಜ್ ಬೆಲೆ ₹89,900
iPhone 15 512GB ಸ್ಟೋರೇಜ್ ಬೆಲೆ ₹1,09,900


ಐಫೋನ್ 15 ಪ್ಲಸ್ ಬೆಲೆ
iPhone 15 Plus 128GB ಸ್ಟೋರೇಜ್ ಬೆಲೆ ₹89900
iPhone 15 Plus 256GB ಸ್ಟೋರೇಜ್ ಬೆಲೆ ₹99900
iPhone 15 Plus 512GB ಸ್ಟೋರೇಜ್ ಬೆಲೆ ₹119900


ಇದನ್ನೂ ಓದಿ-No Risk No Tension ಈ ಯೋಜನೆಯಲ್ಲಿ ಕೇವಲ 120 ತಿಂಗಳಲ್ಲಿ ನಿಮ್ಮ ಹೂಡಿಕೆ ಡಬಲ್ ಗಿಂತಲೂ ಜಾಸ್ತಿಯಾಗುತ್ತೆ!


ಐಫೋನ್ 15 ಪ್ರೊ ಬೆಲೆ
iPhone 15 Pro 128GB ಸ್ಟೋರೇಜ್ ಬೆಲೆ ₹134900
iPhone 15 Pro 256GB ಸ್ಟೋರೇಜ್ ಬೆಲೆ ₹144900
iPhone 15 Pro 512GB ಸ್ಟೋರೇಜ್ ಬೆಲೆ ₹164900
iPhone 15 Pro 1TB ಸಂಗ್ರಹಣೆ ಬೆಲೆ ₹184900


ಇದನ್ನೂ ಓದಿ-ಈ ಫೋನ್ ಖರೀದಿಸಿದ ಗ್ರಾಹಕರಿಗೆ ಜಿಯೋ ನೀಡುತ್ತಿದೆ 6 ತಿಂಗಳ ಉಚಿತ ಅನಿಯಮಿತ ಕಾಲಿಂಗ್ ಮತ್ತು ನಿತ್ಯ 3ಜಿಬಿ ಡೇಟಾ ಉಚಿತ!


iPhone 15 Pro ಮ್ಯಾಕ್ಸ್ ಬೆಲೆ
iPhone 15 Pro Max 256GB ಸ್ಟೋರೇಜ್ ಬೆಲೆ ₹159900
iPhone 15 Pro Max 512GB ಸ್ಟೋರೇಜ್ ಬೆಲೆ ₹ 179900
iPhone 15 Pro Max 1TB ಸಂಗ್ರಹಣೆ ಬೆಲೆ ₹199900


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ