Verification Of Passport : ವಿದೇಶಗಳಿಗೆ ಪ್ರಯಾಣ ಬೆಳೆಸಬೇಕಾದರೆ ಪಾಸ್‌ಪೋರ್ಟ್ ಹೊಂದಿರಲೇಬೇಕು. ಪಾಸ್ ಪೋರ್ಟ್ ಇಲ್ಲದೆ ವಿದೇಶಗಳಿಗೆ ತೆರಳುವುದು ಸಾಧ್ಯವಿಲ್ಲ. ಪಾಸ್ ಪೋರ್ಟ್ ಇಲ್ಲ ಎನ್ನುವುದೇ ವಿದೇಶ ಯಾನಕ್ಕೆ ಅಡ್ಡಿಯಾಗುತ್ತಿದ್ದರೆ ನಿರಾಸೆಯಾಗಬೇಕೆಂದಿಲ್ಲ ಪಾಸ್‌ಪೋರ್ಟ್‌ ಪಡೆಯಲು ಇಚ್ಛಿಸುವವರಿಗೆ ಇಲ್ಲಿದೆ ಭರ್ಜರಿ ಸುದ್ದಿ.  ಪಾಸ್‌ಪೋರ್ಟ್ ಪರಿಶೀಲನೆ ಸೌಲಭ್ಯ ಸಂಪೂರ್ಣ ಆಟೋಮ್ಯಾಟಿಕ್ ಆಗಿದೆ. ಹೀಗಾಗಿ ಇನ್ನು ಪಾಸ್ ಪೋರ್ಟ್ ಗಾಗಿ 15 ದಿನಗಳವರೆಗೆ ಕಾಯುವ ಅಗತ್ಯವಿಲ್ಲ. ಕೇವಲ 5 ದಿನಗಳಲ್ಲಿ ಪಾಸ್‌ಪೋರ್ಟ್  ನಿಮ್ಮ ಕೈ ಸೇರಲಿದೆ. 


COMMERCIAL BREAK
SCROLL TO CONTINUE READING

ಪಾಸ್ಪೋರ್ಟ್ ಮಾಡಿಸುವುದು  ಹೇಗೆ? :
ಭಾರತೀಯ ಪ್ರಜೆಯಾಗಿದ್ದು, ಪಾಸ್‌ಪೋರ್ಟ್ ಮಾಡಿಸಬೇಕಾದರೆ  ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಪಾಸ್‌ಪೋರ್ಟ್ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು  ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.


ಇದನ್ನೂ ಓದಿ : SBI ನ ಈ ಹೊಸ ಯೋಜನೆಯಲ್ಲಿ ಸಿಗುತ್ತಿದೆ ಶೇ.7.1ರಷ್ಟು ಬಡ್ಡಿಯ ಲಾಭ! ಹೂಡಿಕೆಗೆ ಕೇವಲ ಮಾರ್ಚ್ ವರೆಗೆ ಮಾತ್ರ ಅವಕಾಶ


ಈ ಹಂತಗಳನ್ನು ಅನುಸರಿಸಿ :
1. ಮೊದಲು ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಾಯಿಸಿ. 
2. ನಂತರ  Passport Seva Online Portalನಲ್ಲಿ  ಲಾಗಿನ್ ಮಾಡಿ.
3. Apply for Background varification for GEP ಲಿಂಕ್‌ ಮೇಲೆ ಕ್ಲಿಕ್ ಮಾಡಿ.
4. ಇದರ ನಂತರ ಫಾರ್ಮ್‌ನಲ್ಲಿ ಮಾಹಿತಿಯನ್ನು ಭರ್ತಿ ಮಾಡಿ  ಸಬ್ಮಿಟ್ ಮಾಡಿ. 
5. ಈಗ Pay And Schedule Appointment ಲಿಂಕ್  ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
6. ಇಲ್ಲಿ ಯಾವ ಸ್ಥಳದ  Appointment ಬೇಕೋ ಆ ಸ್ಥಳವನ್ನು ಆರಿಸಿ. 
7. ಅಪಾಯಿಂಟ್‌ಮೆಂಟ್ ಬುಕ್ ಮಾಡಲು ಆನ್‌ಲೈನ್  ಪೇಮೆಂಟ್ ಮಾಡಿ.
8. ಇದರ ನಂತರ, Print Application Receipt  ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ ಪ್ರಿಂಟರ್‌ನಿಂದ ಅಪ್ಲಿಕೇಶನ್‌ನ ಪ್ರಿಂಟ್ ಹೊರಬರುತ್ತದೆ. ನಿಮ್ಮ ಮೊಬೈಲ್‌ನಲ್ಲಿ ಅಪಾಯಿಂಟ್‌ಮೆಂಟ್ ಸಂದೇಶವೂ ಬರುತ್ತದೆ. ಅದನ್ನು ಸೇವ್ ಮಾಡಿಕೊಳ್ಳಿ. 
9. ಪಾಸ್‌ಪೋರ್ಟ್ ಪರಿಶೀಲನೆಯ ಸೌಲಭ್ಯವು ಸಂಪೂರ್ಣವಾಗಿ ಆನ್‌ಲೈನ್ ಆಗಿದ್ದರೆ, ನಂತರ ದೈಹಿಕವಾಗಿ ಪೊಲೀಸ್ ಪರಿಶೀಲನೆ  ಮಾಡಿಸಿಕೊಳ್ಳುವ ಅಗತ್ಯವಿರುವುದಿಲ್ಲ. 


ಇದನ್ನೂ ಓದಿ : ಆದಾಯ ಹೆಚ್ಚಳಕ್ಕೆ ರೈಲ್ವೆ ಮಹತ್ವದ ನಿರ್ಧಾರ, ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ!


ಪಾಸ್‌ಪೋರ್ಟ್‌ನ ಪರಿಶೀಲನೆಯು ಪ್ರಸ್ತುತ ದೆಹಲಿಯಲ್ಲಿ ಮಾತ್ರ ಸಂಪೂರ್ಣ  ಆಟೋಮ್ಯಾಟಿಕ್ ಆಗಿದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.