ನವದೆಹಲಿ : ದೇಶದಾದ್ಯಂತ ಆನ್‌ಲೈನ್ ವಹಿವಾಟುಗಳನ್ನು ಉತ್ತೇಜಿಸುವ ಸಲುವಾಗಿ UPI ಸೌಲಭ್ಯವನ್ನು ಪ್ರಾರಂಭಿಸಲಾಗಿತ್ತು. ಈ ಸೌಲಭ್ಯದ ಅಡಿಯಲ್ಲಿ ಇದೀಗ ಜಾಗತಿಕ ಮಟ್ಟದಲ್ಲಿಯೂ ವಹಿವಾಟು ನಡೆಸಬಹುದಾಗಿದೆ. ಭಾರತದ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮತ್ತು ಸಿಂಗಾಪುರದ 'ಪೇ ನೌ' ಸಿಸ್ಟಮ್ ನಡುವೆ ಸಂಪರ್ಕ ಸೌಲಭ್ಯವನ್ನು ಪರಿಚಯಿಸಿದ್ದು, ಉಭಯ ದೇಶಗಳ ನಡುವಿನ ಸಂಬಂಧಗಳಿಗೆ ಹೊಸ ಮೈಲಿಗಲ್ಲು ಎಂದು ಇಂದು ಪ್ರಧಾನಿ ಮೋದಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಸಿಂಗಾಪುರದ ಜನರು ಸಹ ವಹಿವಾಟು ಮಾಡಲು ಸಾಧ್ಯವಾಗುತ್ತದೆ :
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಸಿಂಗಾಪುರ್ ಹಣಕಾಸು ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ರವಿ ಮೆನನ್ ಈ ಸೌಲಭ್ಯವನ್ನು ಪ್ರಾರಂಭಿಸಿದ್ದಾರೆ. 'ಕ್ರಾಸ್ ಬಾರ್ಡರ್ ಫಿನ್‌ಟೆಕ್ ಸಂಪರ್ಕ'ದ ಹೊಸ ಅಧ್ಯಾಯವನ್ನು ನಿನ್ನೆಯಿಂದ ಪ್ರಾರಂಭಿಸಲಾಗಿದೆ.   ಇದೀಗ ಸಿಂಗಾಪುರ ಮತ್ತು ಭಾರತದ ಜನರು ತಮ್ಮ ತಮ್ಮ ದೇಶಗಳಲ್ಲಿ ಮಾಡುವ ರೀತಿಯಲ್ಲಿಯೇ ತಮ್ಮ ಮೊಬೈಲ್ ಫೋನ್‌ಗಳಿಂದ ಹಣದ ವಹಿವಾಟು ಮಾಡಲು ಸಾಧ್ಯವಾಗುತ್ತದೆ.


ಇದನ್ನೂ ಓದಿ : ಕಡಿಮೆ ಅವಧಿಯಲ್ಲಿ ಹಣವೂ ದ್ವಿಗುಣ ಬಡ್ಡಿದರವೂ ಹೆಚ್ಚು ! ಅಂಚೆ ಕಚೇರಿಯ ಹೊಸ ಸ್ಕೀಮ್


ಯಾರಿಗೆ ಲಾಭ? :
ಈ ಸೌಲಭ್ಯವು ವಿಶೇಷವಾಗಿ ಅನಿವಾಸಿ ಭಾರತೀಯರು, ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಅವರ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ. 2022 ರಲ್ಲಿ ಯುಪಿಐ ಮೂಲಕ 12,6,000 ಶತಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ವಹಿವಾಟು ನಡೆದಿದೆ. ಈ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಪಾವತಿ ವ್ಯವಸ್ಥೆಯು ಅತ್ಯಂತ ಸುರಕ್ಷಿತವಾಗಿದೆ ಎಂಬುದನ್ನು  ಇಷ್ಟು ದೊಡ್ಡ ಸಂಖ್ಯೆಯ ವಹಿವಾಟುಗಳು ತೋರಿಸುತ್ತದೆ"  ಎನ್ನುವುಡು ಪ್ರಧಾನಿ ಮೋದಿ ಅಭಿಪ್ರಾಯ. 


ಇದನ್ನೂ ಓದಿ : LIC ಪಾಲಿಸಿದಾರರೆ ಮಾರ್ಚ್ 24 ರೊಳಗೆ ಈ ಕೆಲಸ ಮಾಡಿ, ಇಲ್ಲದಿದ್ದರೆ ಭಾರಿ ನಷ್ಟ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.