Wheat Price : ಗೋಧಿ ಮತ್ತು ಅದರ ಹಿಟ್ಟಿನ ಬೆಲೆಯ ಬಗ್ಗೆ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ!

Modi Government : ಹಣದುಬ್ಬರ ತಗ್ಗಿಸಲು ಕೇಂದ್ರದ ಮೋದಿ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಏತನ್ಮಧ್ಯೆ, ಹೆಚ್ಚಿದ ಗೋಧಿ ಮತ್ತು ಹಿಟ್ಟಿನ ಬೆಲೆಗಳು ಸಹ ಸರ್ಕಾರದ ಗಮನದಲ್ಲಿದೆ, ಅದರ ಮೇಲೆ ಮೋದಿ ಸರ್ಕಾರ ಈಗ ಕ್ರಮ ಕೈಗೊಂಡಿದೆ.

Written by - Channabasava A Kashinakunti | Last Updated : Feb 22, 2023, 09:03 AM IST
  • ಹಣದುಬ್ಬರ ತಗ್ಗಿಸಲು ಕೇಂದ್ರದ ಮೋದಿ ಸರ್ಕಾರ ನಿರಂತರ ಪ್ರಯತ್ನ
  • ಗೋಧಿ ಮತ್ತು ಹಿಟ್ಟಿನ ಬೆಲೆಯನ್ನು ಇಳಿಸಲು ಸರ್ಕಾರ ಈಗ ಕ್ರಮ
  • ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ
Wheat Price : ಗೋಧಿ ಮತ್ತು ಅದರ ಹಿಟ್ಟಿನ ಬೆಲೆಯ ಬಗ್ಗೆ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ! title=

Modi Government : ಹಣದುಬ್ಬರ ತಗ್ಗಿಸಲು ಕೇಂದ್ರದ ಮೋದಿ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಏತನ್ಮಧ್ಯೆ, ಹೆಚ್ಚಿದ ಗೋಧಿ ಮತ್ತು ಹಿಟ್ಟಿನ ಬೆಲೆಗಳು ಸಹ ಸರ್ಕಾರದ ಗಮನದಲ್ಲಿದೆ, ಅದರ ಮೇಲೆ ಮೋದಿ ಸರ್ಕಾರ ಈಗ ಕ್ರಮ ಕೈಗೊಂಡಿದೆ. ಗೋಧಿ ಮತ್ತು ಹಿಟ್ಟಿನ ಬೆಲೆಯನ್ನು ಇಳಿಸಲು ಸರ್ಕಾರ ಈಗ ಕ್ರಮ ಕೈಗೊಂಡಿದೆ. ವಾಸ್ತವವಾಗಿ, ಗೋಧಿ ಮತ್ತು ಹಿಟ್ಟಿನ ಬೆಲೆಯನ್ನು ತಗ್ಗಿಸಲು ಕೇಂದ್ರ ಸರ್ಕಾರವು ಹೆಚ್ಚುವರಿ 20 ಲಕ್ಷ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.

ಗೋದಿ ಹಿಟ್ಟಿನ ಬೆಲೆ

ಗೋಧಿ ಮತ್ತು ಅದರ ಹಿಟ್ಟಿನ ಬೆಲೆ ಏರಿಕೆಯನ್ನು ನಿಯಂತ್ರಿಸಲು ಜನವರಿ 25 ರಂದು ಕೇಂದ್ರವು ತನ್ನ ಬಫರ್ ಸ್ಟಾಕ್‌ನಿಂದ 30 ಲಕ್ಷ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಾಗಿ ಘೋಷಿಸಿತ್ತು. ಮಂಗಳವಾರ ಬಿಡುಗಡೆಯಾದ ಸರ್ಕಾರದ ಹೇಳಿಕೆಯ ಪ್ರಕಾರ, ಭಾರತೀಯ ಆಹಾರ ನಿಗಮ (ಎಫ್‌ಸಿಐ) ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್‌ಎಸ್) ಅಡಿಯಲ್ಲಿ ಹೆಚ್ಚುವರಿ 2 ಮಿಲಿಯನ್ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆಗೆ ತರಲು ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಭರ್ಜರಿ ಸಿಹಿ ಸುದ್ದಿ : ಶೇ.44 ರಷ್ಟು ಸಂಬಳ ಹೆಚ್ಚಳ!

ಹರಾಜು

ಈ ಸ್ಟಾಕ್ ಅನ್ನು ಇ-ಹರಾಜಿನ ಮೂಲಕ ಹಿಟ್ಟು ಗಿರಣಿಗಾರರು/ಖಾಸಗಿ ವ್ಯಾಪಾರಿಗಳು/ಬೃಹತ್ ಖರೀದಿದಾರರು/ಗೋಧಿ ಉತ್ಪನ್ನಗಳ ತಯಾರಕರಿಗೆ ಮಾರಾಟ ಮಾಡಲಾಗುತ್ತದೆ. ಗೋಧಿ ದಾಸ್ತಾನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ರಸ್ತಾವನೆಯನ್ನು ಸಚಿವರ ಗುಂಪು ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಮಾರುಕಟ್ಟೆ ಮೌಲ್ಯ

ಬಿಡುಗಡೆ ಮಡಿದ ಹೇಳಿಕೆಯ ಪ್ರಕಾರ, “ಇದುವರೆಗೆ 50 ಲಕ್ಷ ಟನ್ (30+20 ಲಕ್ಷ ಟನ್) ಗೋಧಿಯನ್ನು OMSS ಅಡಿಯಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. 20 ಲಕ್ಷ ಟನ್ ಗೋಧಿಯ ಹೆಚ್ಚುವರಿ ಮಾರಾಟದ ಜೊತೆಗೆ ಮೀಸಲು ಬೆಲೆಯಲ್ಲಿ ಕಡಿತದಂತಹ ನಿರ್ಧಾರಗಳು ಗ್ರಾಹಕರಿಗೆ ಗೋಧಿ ಮತ್ತು ಗೋಧಿ ಉತ್ಪನ್ನಗಳ ಮಾರುಕಟ್ಟೆ ಬೆಲೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : ದೇಶಾದ್ಯಂತದ ರೈತರಿಗೊಂದು ಭಾರಿ ಸಂತಸದ ಸುದ್ದಿ, ಈ ಕೆಲಸಕ್ಕೆ ಮೋದಿ ಸರ್ಕಾರ ನೀಡುತ್ತಿದೆ 3 ಲಕ್ಷ ರೂ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News