ದುಬಾರಿಯಾಗಲಿದೆ Zomato ಮತ್ತು Swiggy ಆಹಾರ
Zomato and Swiggy: ನೀವು ಆನ್‌ಲೈನ್ ಆಹಾರ ವಿತರಣಾ ಪ್ಲಾಟ್‌ಫಾರ್ಮ್‌ಗಳಾದ ಜೊಮಾಟೊ ಮತ್ತು ಸ್ವಿಗ್ಗಿ ಮೂಲಕ ಫುಡ್ ಆರ್ಡರ್ ಮಾಡುತ್ತಿದ್ದರೆ ಈ ಸುದ್ದಿ ನಿಮಗಾಗಿ.
Zomato and Swiggy Food: ಆನ್‌ಲೈನ್ ಆಹಾರ ವಿತರಣಾ ಪ್ಲಾಟ್‌ಫಾರ್ಮ್‌ಗಳಾದ ಜೊಮಾಟೊ ಮತ್ತು ಸ್ವಿಗ್ಗಿ ತಮ್ಮ ಪ್ಲಾಟ್‌ಫಾರ್ಮ್ ಶುಲ್ಕವನ್ನು ಶೇಕಡಾ 20 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದ್ದು, ಇನ್ಮುಂದೆ ನೀವು ಜೊಮಾಟೊ ಮತ್ತು ಸ್ವಿಗ್ಗಿ ಮೂಲಕ ಆಹಾರವನ್ನು ಆರ್ಡರ್ ಮಾಡುವುದು ದುಬಾರಿಯಾಗಲಿದೆ.
ಖಾಸಗಿ ವಾಹಿನಿಯಲ್ಲಿನ ವರದಿಯ ಪ್ರಕಾರ, ಆಹಾರ ವಿತರಣಾ ದೈತ್ಯರಾದ ಜೊಮಾಟೊ ಮತ್ತು ಸ್ವಿಗ್ಗಿ (Zomato and Swiggy) ಬೆಂಗಳೂರು ಮತ್ತು ದೆಹಲಿಯಂತಹ ಕೆಲವು ಮಾರುಕಟ್ಟೆಗಳಲ್ಲಿ ತಮ್ಮ ಪ್ಲಾಟ್‌ಫಾರ್ಮ್ ಶುಲ್ಕವನ್ನು 6 ರೂ.ಗೆ ಏರಿಸಿದ್ದು, ಈ ಹೆಚ್ಚಳವು 20% ನಷ್ಟು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- NHAI Rules: ಈ ಎರಡು ಸಂದರ್ಭದಲ್ಲಿ ಶುಲ್ಕ ಪಾವತಿಸದೆ ಟೋಲ್ ಬೂತ್ ಹಾದು ಹೋಗಬಹುದು
ಗಮನಾರ್ಹವಾಗಿ, ಜೊಮಾಟೊ (Zomato) ಮತ್ತು ಸ್ವಿಗ್ಗಿ (Swiggy) ಎರಡೂ ಕಂಪನಿಗಳು ತಮ್ಮ ಪ್ಲಾಟ್‌ಫಾರ್ಮ್ ಶುಲ್ಕವನ್ನು ಹೆಚ್ಚಿಸಿರುವುದು ಇದೇ ಮೊದಲೇನಲ್ಲ. ಈ ಎರಡೂ ಪ್ಲಾಟ್‌ಫಾರ್ಮ್ ಗಳು 2023ರಲ್ಲೂ ಕೂಡ ಶುಲ್ಕ ಹೆಚ್ಚಳ ಘೋಷಿಸಿದ್ದವು.
ಜೊಮಾಟೊ ಕಂಪನಿ ಏಪ್ರಿಲ್‌ನಲ್ಲಿ, ರಾಷ್ಟ್ರೀಯ ರಾಜಧಾನಿ ದೆಹಲಿ, ಸಿಲಿಕಾನ್ ಸಿಟಿ ಬೆಂಗಳೂರು, ವಾಣಿಜ್ಯ ನಗರಿ ಮುಂಬೈ, ಹೈದರಾಬಾದ್ ಮತ್ತು ಲಕ್ನೋ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು 25% ರಷ್ಟು ಶುಲ್ಕ ಹೆಚ್ಚಳ ಘೋಷಿಸಿತ್ತು.
ಇದನ್ನೂ ಓದಿ- credit card ರೀತಿಯೇ ಕೆಲಸ ಮಾಡುತ್ತದೆ UPI : ಈ ಬ್ಯಾಂಕ್ ಗಳ ಗ್ರಾಹಕರಿಗೆ ಸಿಗುತ್ತಿದೆ ಹೊಸ ಸೌಲಭ್ಯ
ಜೊಮಾಟೊ ಮತ್ತು ಸ್ವಿಗ್ಗಿಯಲ್ಲಿ ಪ್ಲಾಟ್‌ಫಾರ್ಮ್ ಶುಲ್ಕ ಎಷ್ಟು?
ಪ್ರಸಿದ್ಧ ಆಹಾರ ವಿತರಣಾ ಸಂಸ್ಥೆಗಳಾದ ಜೊಮಾಟೊ ಮತ್ತು ಸ್ವಿಗ್ಗಿಯಲ್ಲಿ ಬ್ಲಿಂಕಿಟ್ ಮತ್ತು ಇನ್‌ಸ್ಟಾಮಾರ್ಟ್ ನಿರ್ವಹಿಸುವ ಕ್ವಿಕ್ ಕಾಮರ್ಸ್ ಶಾಖೆಗಳು ಹ್ಯಾಂಡ್ಲಿಂಗ್ ಚಾರ್ಜ್ ಎಂದು ಕರೆಯಲ್ಪಡುವ ಇದೇ ರೀತಿಯ ಶುಲ್ಕವನ್ನು ವಿಧಿಸುತ್ತವೆ. ಬೆಂಗಳೂರಿನಲ್ಲಿ, Blinkit ಪ್ರತಿ ಆರ್ಡರ್‌ಗೆ ನಿರ್ವಹಣಾ ಶುಲ್ಕವಾಗಿ 4 ರೂಪಾಯಿಗಳನ್ನು ವಿಧಿಸುತ್ತದೆ. ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಪ್ರತಿ ಆರ್ಡರ್‌ಗೆ 5 ರೂಪಾಯಿಗಳನ್ನು ವಿಧಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.