Pension : ನಿಯಮಗಳಲ್ಲಿ ಸಡಿಲಿಕೆ, ಈಗ ಪಿಂಚಣಿ ಪಡೆಯುವಲ್ಲಿ ಎದುರಾಗುವುದಿಲ್ಲ ಯಾವುದೇ ತೊಡುಕು
ಪಿಂಚಣಿ ಪಡೆಯುವ ನಿವೃತ್ತ ನೌಕರರಿಗೆ ಮೋದಿ ಸರ್ಕಾರ ದೊಡ್ಡ ಪರಿಹಾರ ನೀಡಿದೆ. ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ ಡಿಜಿಟಲ್ ಲೈಫ್ ಪ್ರಮಾಣಪತ್ರ ಪಡೆಯಲು ಆಧಾರ್ ಕಾರ್ಡ್ ಅಗತ್ಯವಿಲ್ಲ.
ನವದೆಹಲಿ : ಪಿಂಚಣಿದಾರರು ಪ್ರತಿ ವರ್ಷದ ಆರಂಭದಲ್ಲಿ ಜೀವನ ಪ್ರಮಾಣ ಪತ್ರ (Life Certificate) ನೀಡಲು ಸುತ್ತಾಡಬೇಕಾಗುತ್ತದೆ. ಒಂದೊಮ್ಮೆ ಪಿಂಚಣಿದಾರರ ಆಧಾರ್ ಕಾರ್ಡ್‌ನಲ್ಲಿ ನೀಡಲಾದ ಬಯೋಮೆಟ್ರಿಕ್ ಮಾಹಿತಿಯನ್ನು ನವೀಕರಿಸದಿದ್ದಾಗ ಅಥವಾ ತಾಂತ್ರಿಕ ಸಮಸ್ಯೆಗಳು ಎದುರಾದಾಗ ಅವರ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. ಆದರೆ ಇನ್ನು ಮುಂದೆ ಪಿಂಚಣಿದಾರರಿಗೆ ಈ ತಲೆಬಿಸಿ ಇರುವುದಿಲ್ಲ. ಏಕೆಂದರೆ ಕೇಂದ್ರ ಸರ್ಕಾರ ಈ ನಿಯಮಗಳನ್ನು ಸಡಿಗೊಳಿಸಿದೆ.
ಈ ನಿಯಮಗಳು ಬದಲಾಗಿವೆ:
ಪಿಂಚಣಿಗೆ ಸಂಬಂಧಿಸಿದ ಹೊಸ ನಿಯಮಗಳ ಬಗ್ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ, ಜೀವನ ಪ್ರಮಾಣಪತ್ರಕ್ಕಾಗಿ ಆಧಾರ್‌ನ ಅಗತ್ಯವನ್ನು ರದ್ದುಪಡಿಸಲಾಗಿದೆ. ವಾಸ್ತವವಾಗಿ ಈ ಮೊದಲು ಲೈಫ್ ಸರ್ಟಿಫಿಕೆಟ್ (Life Certificate) ಪಡೆಯಲು ಅಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಲಾಗಿತ್ತು. ಇದೀಗ ಆಧಾರ್ ಕಾರ್ಡ್ ಕಡ್ಡಾಯವಾಗಿರುವುದಿಲ್ಲ ಬದಲಿಗೆ ಸ್ವಯಂಪ್ರೇರಿತವಾಗಲಿದೆ. ಇದರರ್ಥ ಪಿಂಚಣಿದಾರರು ಆಧಾರ್ ಬಗ್ಗೆ ಮಾಹಿತಿ ನೀಡಲು ಬಯಸುತ್ತಾರೋ ಇಲ್ಲವೋ ಅದು ಅವರ ಇಚ್ಛೆಗೆ ಬಿಟ್ಟಿರುತ್ತದೆ. ಈ ನಿಯಮವು ಸ್ವಯಂಪ್ರೇರಿತವಾಗಿರುವುದರಿಂದ ಪಿಂಚಣಿದಾರರ ಪ್ರಮುಖ ಸಮಸ್ಯೆಯನ್ನು ನಿವಾರಣೆಯಾಗಲಿದೆ.
ಇದನ್ನೂ ಓದಿ - PM-SYM ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಸಿಗಲಿದೆ 3,000 ರೂ., ಹೀಗೆ ನೋಂದಾಯಿಸಿ
ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೌಲಭ್ಯ :
ಪಿಂಚಣಿ ಪಡೆಯುವವರು ತಮ್ಮ ಪಿಂಚಣಿ (Pension) ಸೌಲಭ್ಯವನ್ನು ಮುಂದುವರೆಸಲು ಪ್ರತಿವರ್ಷ ಜೀವನ ಪ್ರಮಾಣಪತ್ರ ಅರ್ಥಾತ್ ಲೈಫ್ ಸರ್ಟಿಫಿಕೆಟ್ ನೀಡಬೇಕಾಗುತ್ತದೆ. ಈ ಮೂಲಕ ಪಿಂಚಣಿದಾರರು ಬದುಕುಳಿಯುವಿಕೆಯ ಪುರಾವೆ ನೀಡಿದ ನಂತರವೇ ಅವರಿಗೆ ಪಿಂಚಣಿ ಸಿಗುತ್ತದೆ. ಈ ಮೊದಲು ಪಿಂಚಣಿದಾರರು ಇದಕ್ಕಾಗಿ ಪದೇ ಪದೇ ಅಲೆಯಬೇಕಿತ್ತು. ಈ ಹಿಂದೆ ಪಿಂಚಣಿದಾರರು ಹಾಲ್ ನಿವಾಸ್ ಅಥವಾ ಅವರು ಕೆಲಸ ಮಾಡಿದ ಇಲಾಖೆಯಿಂದ ಪಿಂಚಣಿ ನೀಡುವ ಏಜೆನ್ಸಿಗೆ ಹೋಗಬೇಕಾಗಿತ್ತು. ಆದರೆ ಡಿಜಿಟಲ್ ಮೂಲಕ ಲೈಫ್ ಸರ್ಟಿಫಿಕೆಟ್ ಸೌಲಭ್ಯ ಒದಗಿಸಿದ ನಂತರ ಪಿಂಚಣಿದಾರರಿಗೆ ಸಾಕಷ್ಟು ಸೌಲಭ್ಯ ಸಿಕ್ಕಿದೆ. ಆದರೆ ಈಗ ಮನೆಯಿಂದ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯಬಹುದು. ಇದಲ್ಲದೆ ಆಧಾರ್ ಕಾರ್ಡ್ ಅನಿವಾರ್ಯತೆ ನಿಯಮವನ್ನು ಸಡಿಲಗೊಳಿಸಿದ ನಂತರ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವುದು ಇನ್ನೂ ಸುಲಭವಾಗುತ್ತದೆ.
ಇದನ್ನೂ ಓದಿ - Pension Schemes Latest News: ಸುನಿಶ್ಚಿತ Pension ನೀಡುವ ಯೋಜನೆ ಜಾರಿಗೆ ತರಲಿದೆ PFRDA, ಹೆಚ್ಚುವರಿ ಪೆನ್ಷನ್ ಮೇಲೂ ನಿರ್ಧಾರ
Sandes ಪಡೆಯಲು ಅನಿವಾರ್ಯವಲ್ಲ ಆಧಾರ್:
ಡಿಜಿಟಲ್ ಲೈಫ್ ಪ್ರಮಾಣಪತ್ರದ ಹೊರತಾಗಿ ಸರ್ಕಾರಿ ಕಚೇರಿಗಳಿಗೆ ಹಾಜರಾಗಲು ಕಡ್ಡಾಯಗೊಳಿಸಲಾಗಿರುವ ಆಪ್ ಸಂದೇಶ್ (Sandes)ಗಾಗಿ ಆಧಾರ್ ವೆರಿಫಿಕೆಶನ್ ತೆಗೆದುಹಾಕುವ ಮೂಲಕ ಆಧಾರ್ ಪರಿಶೀಲನೆಯನ್ನು ಸ್ವಯಂಪ್ರೇರಿತವಾಗಿ ಮಾಡಲಾಗಿದೆ. ಸಂದೇಶ್ ಎಂಬುದು ಸರ್ಕಾರಿ ಕಚೇರಿಗಳಲ್ಲಿ ನೌಕರರ ಉಪಸ್ಥಿತಿಗಾಗಿ ವಿನ್ಯಾಸಗೊಳಿಸಲಾದ ಒಂದು ಆಪ್ ಆಗಿದೆ. ಈಗ ಸರ್ಕಾರಿ ನೌಕರರು ಸಂದೇಶ್ ಮೂಲಕವೇ ಹಾಜರಾಗಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.