EPFO Life Certificate: ಜೀವನ ಪ್ರಮಾಣ ಪತ್ರ ಸಲ್ಲಿಸುವ ಗಡುವು ವಿಸ್ತರಣೆ, ಹೊಸ ಗಡುವು ಇಲ್ಲಿದೆ

ಇದರಿಂದ EPFO ಬಳಿ ಇರುವ ಸುಮಾರು 35 ಲಕ್ಷ ಪೆನ್ಷನ್ ಧಾರಕರಿಗೆ ಲಾಭ ಸಿಗಲಿದೆ.

Last Updated : Nov 28, 2020, 06:25 PM IST
  • ಜೀವನ ಪ್ರಮಾಣ ಪತ್ರ ಸಲ್ಲಿಸುವ ಗಡುವು ವಿಸ್ತರಣೆ.
  • ಫೆಬ್ರವರಿ 28, 2021ರವರೆಗೆ ಗಡುವು ವಿಸ್ತರಣೆ ಮಾಡಿದೆ EPFO.
  • ಇದಕ್ಕೂ ಮೊದಲು ನವೆಂಬರ್ 30, 2020 ಜೀವನ ಪ್ರಮಾಣ ಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
EPFO Life Certificate: ಜೀವನ ಪ್ರಮಾಣ ಪತ್ರ ಸಲ್ಲಿಸುವ ಗಡುವು ವಿಸ್ತರಣೆ, ಹೊಸ ಗಡುವು ಇಲ್ಲಿದೆ title=

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಪಿಂಚಣಿದಾರರಿಗೆ 2021 ಫೆಬ್ರವರಿ 28 ರವರೆಗೆ ಜೀವ ಪ್ರಮಾಣಪತ್ರಗಳನ್ನು ಸಲ್ಲಿಸುವ ಗಡುವನ್ನು ವಿಸ್ತರಿಸಿದೆ. ಇದರಿಂದ ಇಪಿಎಫ್‌ಒ ಇರುವ 35 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕ ಮತ್ತು ವಯಸ್ಸಾದ ಜನರು ಕರೋನಾ ವೈರಸ್‌ಗೆ ತುತ್ತಾಗುವ ಕಾರಣ, ಇಪಿಎಫ್‌ಒ ಲೈಫ್ ಸರ್ಟಿಫಿಕೇಟ್ (Life Certification) ಸಲ್ಲಿಸುವ ಗಡುವನ್ನು ವಿಸ್ತರಿಸಿದೆ ಎಂದು EPFO ಹೇಳಿಕೆಯಲ್ಲಿ ತಿಳಿಸಿದೆ. ಹೇಳಿಕೆಯ ಪ್ರಕಾರ, EPS 1995 ರ ಅಡಿಯಲ್ಲಿ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರಿಗೆ ಈ ಈ ಗಡುವು ವಿಸ್ತರಣೆ ಅನ್ವಯಿಸಲಿದೆ ಎನ್ನಲಾಗಿದೆ.

ಇದನ್ನು ಓದಿ- Pension: Life Certificate ಇನ್ನೂ ಸಲ್ಲಿಸಿಲ್ಲವೇ? ಇವರಿಗೆ ಕರೆ ಮಾಡಿ ನಿಮ್ಮ ಕೆಲಸ ಪೂರ್ಣಗೊಳಿಸಿ

ಪೆನ್ಷನ್ ನಿಲ್ಲುವುದಿಲ್ಲ
ಪ್ರಸ್ತುತ, ಪಿಂಚಣಿದಾರರು ನವೆಂಬರ್ 30 ರವರೆಗೆ ಯಾವುದೇ ಸಮಯದಲ್ಲಿ ಜೀವ ಪ್ರಮಾಣಪತ್ರಗಳನ್ನು ಸಲ್ಲಿಸಬಹುದು, ಇದು ವಿತರಣೆಯ ದಿನಾಂಕದಿಂದ ಒಂದು ವರ್ಷದ ಅವಧಿಗೆ ಮಾನ್ಯವಾಗಿರುತ್ತದೆ. ಈ ವಿಸ್ತೃತ ಅವಧಿಯಲ್ಲಿ ನವೆಂಬರ್ 30ರವರೆಗೆ ತಮ್ಮ ಜೀವನ ಪ್ರಮಾಣ ಪತ್ರ ಸಲ್ಲಿಸಲು ಸಾಧ್ಯವಾಗದ 35 ಲಕ್ಷ ಪಿಂಚಣಿದಾರರ ಪಿಂಚಣಿ ತಡೆಹಿಡಿಯಲಾಗುವುದಿಲ್ಲ, ಇಪಿಎಫ್‌ಒ ಸ್ಪಷ್ಟಪಡಿಸಿದೆ.

ಇದನ್ನು ಓದಿ- Pensionಗಾಗಿ ಆನ್ಲೈನ್ ನಲ್ಲಿ Life Certificate ಪಡೆಯುವುದು ಹೇಗೆ, ಇಲ್ಲಿದೆ ಸ್ಟೆಪ್-ಬೈ-ಸ್ಟೆಪ್ ಮಾಹಿತಿ

ಪಿಂಚಣಿದಾರರು ಪ್ರತಿ ವರ್ಷ ನವೆಂಬರ್‌ನಲ್ಲಿ ಪಿಂಚಣಿ ಖಾತೆದಾರರು  ಬ್ಯಾಂಕಿನಲ್ಲಿ ಲೈಫ್ ಸರ್ಟಿಫಿಕೆಟ್ ಅಥವಾ ಜೀವ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಜೀವ ಪ್ರಮಾಣಪತ್ರವು ಪಿಂಚಣಿದಾರರ ಜೀವಿಸುತ್ತಿರುವ ಪುರಾವೆಯಾಗಿದೆ. ಇದನ್ನು ಸಲ್ಲಿಸದೆ ಹೋದ ಪಿಂಚಣಿದಾರರ ಪಿಂಚಣಿ ನಿಂತುಹೋಗಬಹುದು.

ಇದನ್ನು ಓದಿ- ಶೀಘ್ರದಲ್ಲಿಯೇ 65 ಲಕ್ಷ ಪೆನ್ಷನ್ ಧಾರಕರಿಗೆ ಸಿಗಲಿದೆ Modi Govt ನೀಡಲಿದೆಯೇ ಈ ಗಿಫ್ಟ್

ಲೈಫ್ ಸರ್ಟಿಫಿಕೆಟ್ ಈ ರೀತಿ ಸಲ್ಲಿಸಿ
ಲೈಫ್ ಸರ್ಟಿಫಿಕೆಟ್ ಸಲ್ಲಿಸಲು ಪಿಂಚಣಿದಾರರು ತಾವು ಪೆನ್ಷನ್ ಖಾತೆ ಹೊಂದಿರುವ ಬ್ಯಾಂಕ್ ನ ಯಾವುದೇ ಬ್ರಾಂಚ್ ಅಥವಾ ಹೋಮ್ ಬ್ರಾಂಚ್ ಗೆ  ಭೇಟಿ ನೀಡಬೇಕು. ಇದಲ್ಲದೆ ಹತ್ತಿರದ ಅಂಚೆ ಕಚೇರಿಯಲ್ಲಿ, PC/ಲ್ಯಾಪ್ ಟಾಪ್, ಮೊಬೈಲ್ ಮೂಲಕ ಕೂಡ ಸಲ್ಲಿಸಬಹುದು. ಇದಲ್ಲದೆ ನೀವು https://jeevanpramaan.gov.in, ಹತ್ತಿರವಿರುವ ಆಧಾರ್ ಔಟ್ಲೆಟ್ ಅಥವಾ CSC, ಉಮಂಗ್ ಆಪ್, EPFOನ 135 ಕ್ಷೇತ್ರೀಯ ಕಾರ್ಯಾಲಯಗಳಿಗೆ ಭೇಟಿ ನೀಡುವ ಮೂಲಕ ಕೂಡ ನೀವು ಲೈಫ್ ಸರ್ಟಿಫಿಕೆಟ್ ಸಲ್ಲಿಸಬಹುದು. ಇದಲ್ಲದೆ EPS ಪೆನ್ಷನ್ ಧಾರಕರು ಇದೀಗ ಮಾಮೂಲಿ ಶುಲ್ಕ ಪಾವತಿಸಿ ಈ ಸೇವೆಯನ್ನು ತಮ್ಮ ಮನೆ ಬಾಗಿಲಿಗೆ ಕೂಡ ಬರಮಾಡಿಕೊಳ್ಳಬಹುದು. ಹತ್ತಿರದ ಅಂಚೆ ಕಚೇರಿಯ ಓರ್ವ ಸಿಬ್ಬಂದಿ ಇದಕ್ಕಾಗಿ ನಿಮ್ಮ ಮನೆಗೆ ಭೇಟಿ ನೀಡಿ ನಿಮಗೆ ಡಿಜಿಟಲ್ ಲೈಫ್ ಸರ್ಟಿಫಿಕೆಟ್ ರಚಿಸಲು ಸಹಕರಿಸುತ್ತಾರೆ.

Trending News