ಸ್ಕೂಲ್ ಐಡಿ ಇದ್ದರೆ ಕಡಿಮೆ ದರದಲ್ಲಿ ಸಿಗಲಿದೆ ಸ್ಯಾಮ್ ಸಂಗ್ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್
`ಬ್ಯಾಕ್ ಟು ಸ್ಕೂಲ್` ಅಭಿಯಾನದಡಿಯಲ್ಲಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಶಾಲಾ ಗುರುತಿನ ಚೀಟಿಯನ್ನು ತೋರಿಸಿ ಕಡಿಮೆ ಬೆಲೆಗೆ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನು ಖರೀದಿಸಬಹುದು.
ನವದೆಹಲಿ : ವೇಗವಾಗಿ ಹರಡುವ ಕೊರೊನಾವೈರಸ್ (Coronavirus) ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ದೇಶದಲ್ಲಿ ಮತ್ತೆ ಶಾಲೆಗಳನ್ನು ಬಂದ್ ಮಾಡಲಾಗಿದೆ. ಮತ್ತೆ ವಿದ್ಯಾರ್ಥಿಗಳು ಆನ್ ಲೈನ್ ತರಗತಿಯಲ್ಲಿ (Online class) ತಮ್ಮ ಪಾಠ ಅಭ್ಯಾಸ ಆರಂಭಿಸಿದ್ದಾರೆ. ಆನ್ ಲೈನ್ ಕ್ಲಾಸ್ ನಲ್ಲಿ ಕುಳಿತುಕೊಳ್ಳಬೇಕಾದರೆ ಟ್ಯಾಬ್ , ಲ್ಯಾಪ್ ಟಾಪ್ ಅಥವಾ ಮೊಬೈಲ್ ಇರಲೇಬೇಕು. ಈ ಹಿನ್ನೆಲೆಯಲ್ಲಿ ಸ್ಯಾಮ್ಸಂಗ್ 'ಬ್ಯಾಕ್ ಟು ಸ್ಕೂಲ್' (Back to School) ಅಭಿಯಾನವನ್ನು ಶುರು ಮಾಡಿದೆ.
ಈ ಉತ್ಪನ್ನಗಳಿಗೆ ಸಿಗಲಿದೆ ರಿಯಾಯಿತಿ :
'ಬ್ಯಾಕ್ ಟು ಸ್ಕೂಲ್' ಅಭಿಯಾನದಡಿಯಲ್ಲಿ, (back to school campaign) ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಶಾಲಾ ಗುರುತಿನ ಚೀಟಿಯನ್ನು (School ID) ತೋರಿಸಿ ಕಡಿಮೆ ಬೆಲೆಗೆ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು (Smartphone) ಮತ್ತು ಟ್ಯಾಬ್ಲೆಟ್‌ಗಳನ್ನು ಖರೀದಿಸಬಹುದು. ಗ್ಯಾಲಕ್ಸಿ ಟ್ಯಾಬ್ ಎಸ್ 6 ಲೈಟ್ ((Galaxy Tab S6 Lite), ಗ್ಯಾಲಕ್ಸಿ ಟ್ಯಾಬ್ ಎ 7 (Galaxy Tab A7), ಗ್ಯಾಲಕ್ಸಿ ಟ್ಯಾಬ್ ಎಸ್ 7 (Galaxy Tab S7) ಮತ್ತು ಗ್ಯಾಲಕ್ಸಿ ಟ್ಯಾಬ್ ಎಸ್ 7 ಪ್ಲಸ್ (Galaxy Tab S7 Plus) ಖರೀದಿ ಮೇಲೆ ಕಡೆಯಿಂದ ಆಫರ್ ಸಿಗಲಿದೆ.
ಇದನ್ನೂ ಓದಿ: Jio, Airtel ಮತ್ತು Vodafone-Idea ಬೆಸ್ಟ್ ರೀಚಾರ್ಜ್ ಪ್ಲಾನ್ ಯಾವುದು ತಿಳಿಯಿರಿ
ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು :
"ಬ್ಯಾಕ್ ಟು ಸ್ಕೂಲ್" ಅಭಿಯಾನದೊಂದಿಗೆ, ವಿದ್ಯಾರ್ಥಿಗಳಿಗೆ ಮತ್ತು ಕೈಗೆಟುಕುವ ದರದಲ್ಲಿ ಇ-ಲರ್ನಿಂಗ್ (e-learning) ಸಾಧನಗಳನ್ನು ಒದಗಿಸುವ ಉದ್ದೇಶವನ್ನು ಕಂಪನಿ ಹೊಂದಿದೆ ಎಂದು, ಸ್ಯಾಮ್ಸಂಗ್ (Samsung) ಇಂಡಿಯಾದ ಟ್ಯಾಬ್ಲೆಟ್ ಬಿಸ್ ನೆಸ್ ನಿರ್ದೇಶಕ ಮಾಧುರ್ ಚತುರ್ವೇದಿ ಹೇಳಿದ್ದಾರೆ. ಈ ಕೊಡುಗೆಯ ಮೂಲಕ, ವಿದ್ಯಾರ್ಥಿಗಳು ಸ್ಮಾರ್ಟ್ ಕಲಿಕೆಯ ಲಾಭವನ್ನು ಪಡೆಯಬಹುದು ಎಂದವರು ಹೇಳಿದ್ದಾರೆ. ಈ ಆಫರ್ ನ ಲಾಭ ಪಡೆಯಲು ಮೊದಲು samsung.comಗೆ ಭೇಟಿ ನೀಡಬೇಕು ಮತ್ತು Samsung Student Advantage ಅನ್ನು ಕ್ಲಿಕ್ ಮಾಡಿ. ನಂತರ, ನಿಮ್ಮ ವಿವರಗಳನ್ನು ಭರ್ತಿ ಮಾಡಿದರೆ 10% ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು.
ಇದನ್ನೂ ಓದಿ: BSNL Masterstroke Offer: ಕೇವಲ ರೂ.47 ನೀಡಿ 28 ದಿನಗಳ ಅವಧಿಗೆ ನಿತ್ಯ 1 ಜಿಬಿ ಡೇಟಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.