Samsung Galaxy M12: ಮಾರಾಟದ ಎಲ್ಲ ದಾಖಲೆಗಳನ್ನು ಮುರಿದು Amazon ನಲ್ಲಿ No.1 ಪಟ್ಟ ಅಲಂಕರಿಸಿದ ಸ್ಮಾರ್ಟ್ ಫೋನ್

Samsung Galaxy M12 - ಈ ಫೋನ್ ವಿಶೇಷತೆ ಎಂದರೆ ಇದು  6000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ 4 ಜಿಬಿ ಪ್ಲಸ್ 64 ಜಿಬಿ ವೇರಿಯಂಟ್‌ ಬೆಲೆ 10,999 ರೂ ಮತ್ತು 6 ಜಿಬಿ ಪ್ಲಸ್ 128 ಜಿಬಿ ವೇರಿಯಂಟ್‌ ಬೆಲೆ 13,499 ರೂ. ಆಗಿದೆ.

Written by - Nitin Tabib | Last Updated : Mar 21, 2021, 02:46 PM IST
  • ಅಮೆಜಾನ್ ನಲ್ಲಿ ದಾಖಲೆ ಬರೆದ ಸ್ಯಾಮ್ಸುಂಗ್ ಗ್ಯಾಲಕ್ಸಿ ಎಂ೧೨.
  • ಬೆಸ್ಟ್ ಸೇಲ್ಲಿಂಗ್ ಸ್ಮಾರ್ಟ್ ಫೋನ್ ಪಟ್ಟಿಯಲ್ಲಿ ಆಗ್ರಸ್ಥಾನ.
  • 6GB ಪ್ಲಾಸ್ ವೇರಿಯಂಟ್ ಬೆಲೆ ರೂ.13,499 ಗಷ್ಟಾಗಿದೆ.
Samsung Galaxy M12: ಮಾರಾಟದ ಎಲ್ಲ ದಾಖಲೆಗಳನ್ನು ಮುರಿದು Amazon ನಲ್ಲಿ No.1 ಪಟ್ಟ ಅಲಂಕರಿಸಿದ ಸ್ಮಾರ್ಟ್  ಫೋನ್ title=
samsung galaxy m12 (File Photo)

ನವದೆಹಲಿ: Samsung Galaxy M12 - ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎಂ 12 ಸ್ಮಾರ್ಟ್‌ಫೋನ್ ಭಾರತದಲ್ಲಿ ಮೊದಲ ದಿನವೇ ಅಮೆಜಾನ್‌ನ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್ ಪಟ್ಟಿಯಲ್ಲಿ ಅಗ್ರ ಶ್ರೇಯಾಂಕಿತ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮಿದೆ ಎಂದು ಘೋಷಿಸಿದೆ. ಕಂಪನಿಯ ಪ್ರಕಾರ, ಗ್ಯಾಲಕ್ಸಿ ಎಂ 12 ಸೆಲ್ ಆರಂಭವಾದ 48 ಗಂಟೆಗಳ ಒಳಗೆ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಅಮೆಜಾನ್‌ನಲ್ಲಿ ಹೆಚ್ಚು ಮಾರಾಟವಾದ ಫೋನ್ ಆಗಿ ಹೊರಹೊಮ್ಮಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ 'ಗ್ಯಾಲಕ್ಸಿ ಎಂ 12  (2020) ಮತ್ತು ಗ್ಯಾಲಕ್ಸಿ ಎಂ 21 (2020)  ನ ಉತ್ತರಾಧಿಕಾರಿ ಗ್ಯಾಲಕ್ಸಿ ಎಂ 12 ಸಹ ಸ್ಯಾಮ್‌ಸಂಗ್‌ಗೆ ತನ್ನ ವಿಭಾಗದಲ್ಲಿ ಹೊಸ ಮೊದಲ ದಿನದ ಮಾರಾಟ ದಾಖಲೆಯನ್ನು ಬರೆದುಕೊಟ್ಟಿದೆ. ಮಾರಾಟದ ಮೊದಲ ದಿನ, ಗ್ಯಾಲಕ್ಸಿ ಎಂ 12 ಮಾರಾಟವು ಗ್ಯಾಲಕ್ಸಿ ಎಂ 02 ಎಸ್ ಗಿಂತ ಶೇ. 3.65 ಪಟ್ಟು ಹೆಚ್ಚಾಗಿದೆ, ಇದನ್ನು ಜನವರಿ 2021 ರಲ್ಲಿ ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ- iPhone ಮೇಲೆ ಸಿಗುತ್ತಿದೆ 52,000 ರೂ.ಗಳ ಭಾರೀ ರಿಯಾಯಿತಿ

ಬ್ಯಾಟರಿ ಸಾಮರ್ಥ್ಯ ಗ್ಯಾಲಕ್ಸಿ ಎಂ12 ವೈಶಿಷ್ಟ್ಯತೆ
ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಒಂದು ಎರಡು ವಿಧಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಎರಡೂ ವೇರಿಯಂಟ್ ಗಳ ವೈಶಿಷ್ಟ್ಯ ಎಂದರೆ ಇವುಗಳ 6000 ಎಂಎಹೆಚ್ ಕ್ಷಮತೆಯ ಬ್ಯಾಟರಿ.ಈ ಸ್ಮಾರ್ಟ್‌ಫೋನ್‌ನ 4 ಜಿಬಿ ಪ್ಲಸ್ 64 ಜಿಬಿ ವೇರಿಯಂಟ್‌ ಬೆಲೆ 10,999 ರೂ ಮತ್ತು 6 ಜಿಬಿ ಪ್ಲಸ್ 128 ಜಿಬಿ ವೇರಿಯಂಟ್‌ ಬೆಲೆ 13,499 ರೂ. ಆಗಿದೆ. ICICI ಬ್ಯಾಂಕ್ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸುವ ಗ್ರಾಹಕರಿಗೆ ಸ್ಯಾಮ್ಸಂಗ್ ಡಾಟ್ ಇನ್, ಅಮೆಜಾನ್ ಡಾಟ್ ಇನ್ ಹಾಗೂ ಆಯ್ದ ಚಿಲ್ಲರೆ ವ್ಯಾಪಾರ ಮಳಿಗೆಗಳಲ್ಲಿ ರೂ.1000 ಕ್ಯಾಶ್ ಬ್ಯಾಕ್ ಕೂಡ ಸಿಗುತ್ತಿದೆ. ಇದರಲ್ಲಿ 6.5 ಇಂಚ್ ಗಾತ್ರದ HD+ (720X1600 PIXELS) TFT Infinity V ಡಿಸ್ಪ್ಲೇ ನೀಡಲಾಗಿದೆ. ಈ ಫೋನ್ 20:9 ಆಸ್ಪೆಕ್ಟ್ ರೆಶ್ಯೋ ಹೊಂದಿದೆ. ಇದು ಏಕ್ಸಿನೋಸ್ 850 ಪ್ರೊಸೆಸರ್ ಚಾಲಿತವಾಗಿದ್ದು, ಇದನ್ನು 6 ಜಿಬಿ RAM ಜೊತೆಗೆ ಜೋಡಿಸಲಾಗಿದೆ. ಈ ಫೋನ್ 128 ಜಿಬಿ ಆಂತರಿಕ ಶೇಖರಣಾ ಸಾಮರ್ಥ್ಯ ಕೂಡ ಹೊಂದಿದೆ.

ಇದನ್ನೂ ಓದಿ-Gmail App New Feature: ಇನ್ಮುಂದೆ Gmailನಲ್ಲಿ e-Mail Address ಅನ್ನು Copy ಅಥವಾ Remove ಮಾಡುವುದು ಇನ್ನಷ್ಟು ಸುಲಭವಾಗಿದೆ

8 MP ಸೇಲ್ಫಿ ಕ್ಯಾಮೆರಾ
ಸ್ಯಾಮ್ಸಂಗ್ ನ ಈ ಡಿವೈಸ್ ಅಂಡ್ರಾಯ್ದ್ ಆಧಾರಿತ 1UI ಕೋರ್ OS ಸಂಚಾಲಿತವಾಗಿದೆ ಹಾಗೂ ಡುಯೇಲ್ ನ್ಯಾನೋ ಸಿಮ್ ಸ್ಲಾಟ್ ಸಪೋರ್ಟ್ ಮಾಡುತ್ತದೆ. ಈ ಫೋನ್ ನ ಹಿಂಭಾಗದಲ್ಲಿ ಕ್ವಾಡ್ ಕ್ಯಾಮೆರ ಸೆಟಪ್ ನೀಡಲಾಗಿದೆ. ಇದರಲ್ಲಿ F/2.0 ಅಪರ್ಚರ್ ಜೊತೆಗೆ 48 MP ಪ್ರಿಮರಿ ಸೆನ್ಸಾರ್, ಮೆಗಾಪಿಕ್ಸಲ್ ಸೆಕೆಂಡರಿ ಅಲ್ಟ್ರಾ ವೈಡ್ ಸೆನ್ಸಾರ್, 2MP ಮೈಕ್ರೋ ಸೆನ್ಸಾರ್ ಹಾಗೂ 2 MP ಡೆಪ್ತ್ ಸೆನ್ಸಾರ್ ಪೇಸ್ ನೀಡಲಾಗಿದೆ. ಇದರಲ್ಲಿ 8MP ಸೇಲ್ಫಿ ಕ್ಯಾಮೆರಾ ಕೂಡ ನೀಡಲಾಗಿದೆ.

ಇದನ್ನೂ ಓದಿ- Android, ಐಫೋನ್‌ನಲ್ಲಿ WhatsApp Call ರೆಕಾರ್ಡ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ತಂತ್ರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News