Cheque Books: ಮುಂದಿನ ತಿಂಗಳಿನಿಂದ ನಿರುಪಯುಕ್ತವಾಗಲಿವೆ ಈ ಬ್ಯಾಂಕುಗಳ Cheque Book! ಹೊಸದಕ್ಕಾಗಿ ತಕ್ಷಣ ಅರ್ಜಿ ಸಲ್ಲಿಸಿ
Cheque Books: ತಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಗ್ರಾಹಕರು ತಮ್ಮ ಹೊಸ ಚೆಕ್ ಬುಕ್ ಅನ್ನು ಪಡೆಯಬಹುದು. ಇದಲ್ಲದೇ, ನೀವು ಎಟಿಎಂ, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕವೂ ಹೊಸ ಚೆಕ್ ಪುಸ್ತಕಕ್ಕಾಗಿ ಅರ್ಜಿ ಸಲ್ಲಿಸಬಹುದು.
ನವದೆಹಲಿ: New Cheque Books- ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (OBC) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ (UBI) ಖಾತೆದಾರರನ್ನು ಎಚ್ಚರಿಸಿದೆ. ಈ ಎರಡು ಬ್ಯಾಂಕ್‌ಗಳ ಖಾತೆದಾರರು ಹಳೆಯ ಚೆಕ್‌ಬುಕ್‌ಗಳನ್ನು ಹೊಂದಿದ್ದರೆ, ಮುಂದಿನ ತಿಂಗಳಿನಿಂದ ಅವು ಯಾವುದೇ ಉಪಯೋಗಕ್ಕೆ ಬರುವುದಿಲ್ಲ ಎಂದು PNB ಹೇಳಿದೆ. ಆದ್ದರಿಂದ ನಿಮ್ಮ ವ್ಯವಹಾರದಲ್ಲಿ ಯಾವುದೇ ಅಡಚಣೆ ಎದುರಾಗದಂತೆ ನಿಗಾವಹಿಸಲು ತಕ್ಷಣವೇ ಹೊಸ ಚೆಕ್ ಪುಸ್ತಕಕ್ಕಾಗಿ ಅರ್ಜಿ ಸಲ್ಲಿಸಿ ಎಂದು ಗ್ರಾಹಕರಿಗೆ ಸೂಚಿಸಲಾಗಿದೆ.
ಗ್ರಾಹಕರನ್ನು ಎಚ್ಚರಿಸಿದ ಪಂಜಾಬ್ ನ್ಯಾಷನಲ್ ಬ್ಯಾಂಕ್:
ಈ ಕುರಿತಂತೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (OBC) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ (UBI) ದ ಹಳೆಯ ಚೆಕ್ ಬುಕ್ ಅನ್ನು 1-10-2021 ರಿಂದ ಮುಚ್ಚಲಾಗುವುದು. ದಯವಿಟ್ಟು ನಿಮ್ಮ ಹಳೆಯ eOBC ಮತ್ತು eUNI ಚೆಕ್ ಪುಸ್ತಕವನ್ನು PNB ಯ ನವೀಕರಿಸಿದ IFSC ಮತ್ತು MICR ಚೆಕ್ ಪುಸ್ತಕದೊಂದಿಗೆ ಬದಲಾಯಿಸಿ ಎಂದು ಬರೆದಿದೆ.
EPF Withdrawal Claim: ಈ 5 ಕಾರಣಗಳಿಂದಾಗಿ ನಿಮ್ಮ EPF ಕ್ಲೇಮ್ ಅನ್ನು ತಿರಸ್ಕರಿಸಬಹುದು, ಇಲ್ಲಿದೆ ಫುಲ್ ಡೀಟೇಲ್ಸ್
ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಶಾಖೆಗೆ ಭೇಟಿ ನೀಡುವ ಮೂಲಕ ನೀವು ಹೊಸ ಚೆಕ್ ಪುಸ್ತಕವನ್ನು ಪಡೆಯಬಹುದು. ಒಂದೊಮ್ಮೆ ನಿಮಗೆ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಹೊಸ ಚೆಕ್ ಬುಕ್ ಪಡೆಯಲು ಸಾಧ್ಯವಾಗದಿದ್ದರೆ, ನೀವು ಬೇರೆ ರೀತಿಯಲ್ಲಿಯೂ ಚೆಕ್ ಪುಸ್ತಕಕ್ಕಾಗಿ ಅರ್ಜಿ ಸಲ್ಲಿಸಬಹುದು.
1. ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂಗೆ (Punjab National Bank ATM) ಭೇಟಿ ನೀಡುವ ಮೂಲಕ ನೀವು ಚೆಕ್ ಬುಕ್ ಗಾಗಿ ವಿನಂತಿ ಸಲ್ಲಿಸಬಹುದು.
2. ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಚೆಕ್ ಬುಕ್ ಗೆ ಅರ್ಜಿ ಸಲ್ಲಿಸಬಹುದು
3. ನೀವು PNB One ಆಪ್ ಮೂಲಕ ಚೆಕ್‌ಬುಕ್‌ಗಾಗಿ ವಿನಂತಿಸಬಹುದು
4. ಕಾಲ್ ಸೆಂಟರ್ ಗೆ ಕರೆ ಮಾಡುವ ಮೂಲಕ ಕೂಡ ನೀವು ಚೆಕ್ ಬುಕ್ ಪಡೆಯಲು ವಿನಂತಿ ಸಲ್ಲಿಸಬಹುದು.
ಅಕ್ಟೋಬರ್ 1 ರಿಂದ ಹೊಸ ಚೆಕ್ ಬುಕ್ ಮಾತ್ರ ಕಾರ್ಯನಿರ್ವಹಿಸುತ್ತದೆ:
ಯಾವುದೇ ವಹಿವಾಟಿಗೆ ಸಂಬಂಧಿಸಿದ ಅನಾನುಕೂಲತೆಯನ್ನು ತಪ್ಪಿಸಲು ಎಲ್ಲಾ ಗ್ರಾಹಕರು ನವೀಕರಿಸಿದ PNB IFSC ಮತ್ತು MICR ನೊಂದಿಗೆ ಹೊಸ PNB ಚೆಕ್ ಪುಸ್ತಕವನ್ನು ಬಳಸಲು ವಿನಂತಿಸಲಾಗಿದೆ ಎಂದು ಪಿಎನ್‌ಬಿ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದೆ. ಜೊತೆಗೆ ಬ್ಯಾಂಕಿಂಗ್ ಗೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆ ಇದ್ದಲ್ಲಿ ದಯವಿಟ್ಟು ನಮ್ಮ ಟೋಲ್-ಫ್ರೀ ಸಂಖ್ಯೆ 1800-180-2222 ಅನ್ನು ಸಂಪರ್ಕಿಸಿ ಎಂದು ಟ್ವೀಟ್ ನಲ್ಲಿ ಸೂಚಿಸಲಾಗಿದೆ.
ಪಿಎನ್‌ಬಿ ಫೆಸ್ಟಿವಲ್ ಬೊನಾನ್ಜಾ (PNB Festival Bonanza) :
ಹಬ್ಬದ ಸೀಸನ್ ಅನ್ನು ಗಮನದಲ್ಲಿಟ್ಟುಕೊಂಡು, PNB ಎಲ್ಲಾ ಚಿಲ್ಲರೆ ಸಾಲಗಳ ಮೇಲೆ ಅನೇಕ ಶುಲ್ಕಗಳನ್ನು ಮನ್ನಾ ಮಾಡಿದೆ. ಗೃಹ ಸಾಲ (Home Loan), ವಾಹನ ಸಾಲ (Vehicle Loan), ವೈಯಕ್ತಿಕ ಸಾಲ (Personal Loan), ಆಸ್ತಿ ಸಾಲ (Property Loan), ಪಿಂಚಣಿ ಸಾಲ (Pension Loan) ಮತ್ತು ಚಿನ್ನದ ಸಾಲದಂತಹ (Gold Loan) ಉತ್ಪನ್ನಗಳ ಮೇಲೆ ಸಂಸ್ಕರಣಾ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಬ್ಯಾಂಕ್ ಹೇಳಿದೆ. ಇದು ಮಾತ್ರವಲ್ಲ, ಈ ಎಲ್ಲ ಸಾಲಗಳ ಮೇಲೆ ಸೇವಾ ಶುಲ್ಕ ಮತ್ತು ದಾಖಲಾತಿ ಶುಲ್ಕವನ್ನು ಸಹ ಮನ್ನಾ ಮಾಡಲಾಗಿದೆ.
ಇದನ್ನೂ ಓದಿ- Sukanya Samriddhi Yojana: ಈ ಬ್ಯಾಂಕಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆದು ಡಬಲ್ ಲಾಭ ಪಡೆಯಿರಿ
ಡಿಸೆಂಬರ್ 31 ರವರೆಗೆ ಅವಕಾಶ:
ಇದಲ್ಲದೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇ .8.95 ರಷ್ಟು ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡುತ್ತಿದೆ. PNB ತನ್ನ ವೈಯಕ್ತಿಕ ಸಾಲವು ಉದ್ಯಮದಲ್ಲಿ ಅಗ್ಗವಾಗಿದೆ ಎಂದು ಹೇಳುತ್ತದೆ. ಪಿಎನ್‌ಬಿ ಗೃಹ ಸಾಲವನ್ನು ಆಕರ್ಷಕ ಬಡ್ಡಿದರದಲ್ಲಿ ಎಂದರೆ 6.8% ನಲ್ಲಿ ನೀಡುತ್ತಿದ್ದು, ಕಾರ್ ಸಾಲವನ್ನು ಶೇ. 7.15 ದರದಲ್ಲಿ ನೀಡಲಾಗುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದನ್ನು ಫೆಸ್ಟಿವಲ್ ಬೊನಾನ್ಜಾ ಆಫರ್ ಎಂದು ಹೆಸರಿಸಿದೆ. ಇದಲ್ಲದೇ, ಬ್ಯಾಂಕ್ ಗೃಹ ಸಾಲದ ಮೇಲಿನ ಟಾಪ್ ಅಪ್ ಅನ್ನು ಆಕರ್ಷಕವಾಗಿಸಿದೆ, ಅದರ ಮೇಲೆ ಬಡ್ಡಿದರಗಳು ಕಡಿಮೆ ಇರುತ್ತದೆ. ಗ್ರಾಹಕರು ಈ ಎಲ್ಲಾ ಕೊಡುಗೆಗಳನ್ನು 31 ಡಿಸೆಂಬರ್ 2021 ರವರೆಗೆ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.