Sukanya Samriddhi Yojana: ಈ ಬ್ಯಾಂಕಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆದು ಡಬಲ್ ಲಾಭ ಪಡೆಯಿರಿ

Sukanya Samriddhi Yojana: ಸೆಪ್ಟೆಂಬರ್ 30 ರೊಳಗೆ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯುವ ಮೂಲಕ, ನೀವು ದ್ವಿಗುಣ ಲಾಭ ಪಡೆಯಬಹುದು.

Written by - Yashaswini V | Last Updated : Sep 8, 2021, 11:40 AM IST
  • ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣುಮಕ್ಕಳಿಗಾಗಿ ಕೇಂದ್ರ ಸರ್ಕಾರದ ಒಂದು ಸಣ್ಣ ಉಳಿತಾಯ ಯೋಜನೆ ಆಗಿದೆ
  • ಈ ಯೋಜನೆಯು ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕೆ ಅಡಿಪಾಯ ಹಾಕಬಹುದು
  • ಖಾತೆ ತೆರೆದ ದಿನಾಂಕದಿಂದ 21 ವರ್ಷಗಳ ನಂತರ ಯೋಜನೆ ಪಕ್ವವಾಗುತ್ತದೆ
Sukanya Samriddhi Yojana: ಈ ಬ್ಯಾಂಕಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆದು ಡಬಲ್ ಲಾಭ ಪಡೆಯಿರಿ title=
Key Features of PNB Sukanya Samriddhi Account

Sukanya Samriddhi Yojana: ಹೆಣ್ಣು ಮಕ್ಕಳೆಂದರೆ ಹೊರೆ ಎಂಬ ಭಾವನೆಯನ್ನು ನಿವಾರಿಸಲು ಮತ್ತು ಹೆಣ್ಣು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಆರಂಭಿಸಿತು. ಈಗ ಖಾತೆದಾರರಿಗೆ ಈ ಯೋಜನೆಯಡಿ ಬ್ಯಾಂಕ್‌ಗಳಿಂದ ಜಮೆ ಮಾಡಿದ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. ಅಂತಹ ಒಂದು ಕೊಡುಗೆಯನ್ನು ದೇಶದ ಪ್ರಮುಖ ಸರ್ಕಾರಿ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನೀಡಿದೆ. ಯಾರು ಬೇಕಾದರೂ ತಮ್ಮ ಹತ್ತಿರದ ಶಾಖೆಯಲ್ಲಿ ಈ ಖಾತೆಯನ್ನು ತೆರೆಯಬಹುದು ಎಂದು ಪಿಎನ್‌ಬಿ ತಿಳಿಸಿದೆ. ಪಿಎನ್‌ಬಿಯಿಂದ ಈ ಯೋಜನೆಯ ಲಾಭವನ್ನು ನೀವು ಹೇಗೆ ಪಡೆಯಬಹುದು ಎಂಬುದನ್ನು ತಿಳಿಯಿರಿ. 

ಕನಿಷ್ಠ ಠೇವಣಿ ?
ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ (Sukanya Samriddhi Yojane) ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆದ ನಂತರ ನೀವು ವಾರ್ಷಿಕ ಕನಿಷ್ಠ 250 ರೂ.  ಠೇವಣಿ ಮಾಡಬೇಕಾಗುತ್ತದೆ. ಇದನ್ನು ಹೊರತುಪಡಿಸಿ, ನೀವು ಪ್ರತಿ ವರ್ಷ 1,50,000 ರೂ.ಗಳವರೆಗೆ ಗರಿಷ್ಠ ಹೂಡಿಕೆ ಮಾಡಬಹುದು. ಈ ಖಾತೆಯನ್ನು ಗರಿಷ್ಠ 10 ವರ್ಷದೊಳಗಿನ ಇಬ್ಬರು ಹೆಣ್ಣು ಮಕ್ಕಳಿಗೆ ತೆರೆಯಬಹುದು. ಇದರಲ್ಲಿ ಹೂಡಿಕೆ ಮಾಡುವ ಮೂಲಕ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯ ಲಾಭವನ್ನು ಸಹ ನೀವು ಪಡೆಯುತ್ತೀರಿ.

ನಿಮಗೆ ಎಷ್ಟು ಬಡ್ಡಿ ಸಿಗುತ್ತದೆ?
ಪ್ರಸ್ತುತ, ಸುಕನ್ಯಾ ಸಮೃದ್ಧಿ ಯೋಜನೆಯ (Sukanya Samriddhi Yojane) ವಾರ್ಷಿಕ ಬಡ್ಡಿ ದರ ಶೇಕಡಾ 7.6 ರಷ್ಟಿದೆ. ಕೇಂದ್ರ ಸರ್ಕಾರವು ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಪರಿಷ್ಕರಿಸುತ್ತದೆ. ಇದು SSY ಅನ್ನು ಸಹ ಒಳಗೊಂಡಿದೆ. ಗಮನಾರ್ಹವಾಗಿ, ಸುಕನ್ಯಾ ಸಮೃದ್ಧಿ ಯೋಜನೆಯು ಅತಿ ಹೆಚ್ಚು ಬಡ್ಡಿ ಪಡೆಯುತ್ತಿರುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ- Sukanya Samriddhi: ನಿಮ್ಮ ಮಗಳ ಉಜ್ವಲ ಭವಿಷ್ಯಕ್ಕಾಗಿ ಈ ಯೋಜನೆಯಲ್ಲಿ ದಿನಕ್ಕೆ 131 ರೂ. ಹೂಡಿಕೆ ಮಾಡಿ 20 ಲಕ್ಷ ರೂ. ಪಡೆಯಿರಿ!

ಪಂಜಾಬ್ ನ್ಯಾಷನಲ್ ಬ್ಯಾಂಕಿನ (Punjab National Bank) ಯಾವುದೇ ಶಾಖೆಯಲ್ಲಿ ನೀವು ಈ ಖಾತೆಯನ್ನು ತೆರೆಯಬಹುದು. ನೀವು ಅಂಚೆ ಕಚೇರಿ ಅಥವಾ ವಾಣಿಜ್ಯ ಬ್ಯಾಂಕುಗಳ ಪ್ರತಿಯೊಂದು ಶಾಖೆಯಲ್ಲೂ ಸುಕನ್ಯಾ ಸಮೃದ್ಧಿ ಯೋಜನೆಯ ಸೌಲಭ್ಯವನ್ನು ಪಡೆಯುತ್ತೀರಿ.

ಪೋಷಕರು ಅಥವಾ ಕಾನೂನು ತಮ್ಮ ಮಗಳಿಗೆ ದಿನಕ್ಕೆ 100 ರೂ.ಗಳನ್ನು ಉಳಿಸಿದರೆ, ಅವರು ಯೋಜನೆಯ ಮುಕ್ತಾಯದ ಮೇಲೆ ಉತ್ತಮ ಮೊತ್ತವನ್ನು ಪಡೆಯಬಹುದು. ಪ್ರತಿ 100 ರೂ.ಗೆ ಹೂಡಿಕೆ ಮಾಡಿದರೆ, ಅವರು ಪ್ರತಿ ತಿಂಗಳು 3,000 ರೂ. ಅಂದರೆ ವಾರ್ಷಿಕ 36,000 ಉಳಿತಾಯ ಮಾಡುತ್ತಾರೆ ಎಂದರ್ಥ. ಹೀಗಾಗಿ, ಪ್ರಸ್ತುತ ಬಡ್ಡಿದರದಲ್ಲಿ (7.4 ಶೇಕಡಾ) ಇದನ್ನು ಲೆಕ್ಕ ಹಾಕಿದರೆ, 14 ವರ್ಷಗಳ ಮುಕ್ತಾಯದ ನಂತರ ಈ ಮೊತ್ತವು ಅಸಲು ಸೇರಿದಂತೆ ಒಟ್ಟು 15,22,221 ರೂ. ಆಗಿರುತ್ತದೆ.

ಪಿಎನ್‌ಬಿ ಸುಕನ್ಯಾ ಸಮೃದ್ಧಿ ಖಾತೆಯ ಪ್ರಮುಖ ಲಕ್ಷಣಗಳು (Key Features of PNB Sukanya Samriddhi Account): 
ಖಾತೆ ತೆರೆಯುವಿಕೆ:  ಭಾರತೀಯ ನಿವಾಸಿ ಪೋಷಕರು ಅಥವಾ ಕಾನೂನು ಪಾಲಕರು ಮಾತ್ರ ಇಬ್ಬರು ಹೆಣ್ಣು ಮಕ್ಕಳಿಗೆ ಎರಡು ಖಾತೆಗಳನ್ನು ತೆರೆಯಬಹುದು. ಮೊದಲ ಹೆರಿಗೆಯಲ್ಲಿ ತ್ರಿವಳಿ ಅಥವಾ ಮೊದಲ ಹೆಣ್ಣು ಮಗುವಿನ ನಂತರ ಎರಡನೇ ಜನ್ಮದಲ್ಲಿ ಅವಳಿ ಹೆಣ್ಣು ಮಕ್ಕಳಿದ್ದರೆ ಮೂರನೇ ಹೆಣ್ಣು ಮಗುವನ್ನು ಪರಿಗಣಿಸಬಹುದು.

ಅವಧಿ : ಒಂದು SSY ಖಾತೆಯ (SSY Account) ಅಧಿಕಾರಾವಧಿ 21 ವರ್ಷಗಳು ಅಥವಾ 18 ವರ್ಷದ ನಂತರ ಹೆಣ್ಣು ಮಗು ಮದುವೆಯಾಗುವವರೆಗೆ. ಖಾತೆ ತೆರೆದ ದಿನಾಂಕದಿಂದ ಗರಿಷ್ಠ 21 ವರ್ಷಗಳವರೆಗೆ ಖಾತೆಯನ್ನು ಸಕ್ರಿಯವಾಗಿ ಇರಿಸಿಕೊಳ್ಳಬಹುದು. ಈ ಅವಧಿ ಮುಗಿದ ನಂತರ, PNB ಸುಕನ್ಯಾ ಸಮೃದ್ಧಿ ಖಾತೆಯು ಅದರ ಮೇಲೆ ಯಾವುದೇ ಬಡ್ಡಿಯನ್ನು ಗಳಿಸುವುದಿಲ್ಲ.

ವಯಸ್ಸಿನ ಮಾನದಂಡ  - ಹೆಣ್ಣು ಮಗುವಿಗೆ 10 ವರ್ಷ ತುಂಬುವವರೆಗೆ ಖಾತೆ ತೆರೆಯಬಹುದು.

ಇದನ್ನೂ ಓದಿ- Post Office ಈ ಯೋಜನೆಗಳಲ್ಲಿ ಡಬಲ್ ಆಗಲಿದೆ ನಿಮ್ಮ ಹಣ : ಬಡ್ಡಿ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ!

ಠೇವಣಿ ಮಾನದಂಡ  - PNB ಯಲ್ಲಿ ಒಂದು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಕ ಠೇವಣಿಯೊಂದಿಗೆ ಪ್ರಾರಂಭಿಸಬಹುದು ವರ್ಷಕ್ಕೆ 250 ರೂ. ಮತ್ತು ಗರಿಷ್ಠ ಠೇವಣಿ ಒಂದು ವರ್ಷದಲ್ಲಿ 1.5 ಲಕ್ಷ ರೂ. PNB SSY ಠೇವಣಿಗಳನ್ನು ನಗದು ಮತ್ತು/ಅಥವಾ ಚೆಕ್ ಮೂಲಕ ಮಾಡಬಹುದು. ಖಾತೆ ತೆರೆದ ದಿನಾಂಕದಿಂದ 15 ವರ್ಷಗಳ ಅವಧಿ ಪೂರ್ಣಗೊಳ್ಳುವವರೆಗೆ ಖಾತೆಯಲ್ಲಿ ಠೇವಣಿಗಳನ್ನು ಸಲ್ಲಿಸಬಹುದು.

ಅರ್ಹತಾ ಮಾನದಂಡ : ಈ ಯೋಜನೆ ಭಾರತದ ನಿವಾಸಿಗಳಿಗೆ ಮಾತ್ರ ಮಾನ್ಯವಾಗಿರುತ್ತದೆ. ಅನಿವಾಸಿ ಭಾರತೀಯ ಸ್ಥಾನಮಾನ ಹೊಂದಿರುವ ಹೆಣ್ಣು ಮಕ್ಕಳಿಗೆ ಎಸ್‌ಎಸ್‌ವೈ ಖಾತೆ ತೆರೆಯಲು ಅವಕಾಶವಿಲ್ಲ. ಆದಾಗ್ಯೂ, ಖಾತೆಯನ್ನು ತೆರೆದ ನಂತರ, ಖಾತೆದಾರರು ಅನಿವಾಸಿ ಭಾರತೀಯ ಸ್ಥಾನಮಾನವನ್ನು ಪಡೆದರೆ, ಆಕೆಯ ಪೋಷಕರು/ಕಾನೂನು ಪಾಲಕರು ಈ ಬದಲಾವಣೆಯ ಕುರಿತು 1 ತಿಂಗಳೊಳಗೆ ಸಂಬಂಧಿತ PNB ಶಾಖೆಗೆ ಸೂಚನೆ ನೀಡಬೇಕು, ಅದರ ಆಧಾರದ ಮೇಲೆ ಖಾತೆಯನ್ನು ಮುಚ್ಚಲಾಗುತ್ತದೆ.

ಭಾಗಶಃ ಹಿಂಪಡೆಯುವಿಕೆ  - ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ PNB ಸುಕನ್ಯಾ ಸಮೃದ್ಧಿ ಖಾತೆಯಿಂದ 50% ಹಣವನ್ನು ಹಿಂಪಡೆಯಲು ಅನುಮತಿಸಲಾಗಿದೆ. ಈ ನಿಧಿಯನ್ನು ಹೆಣ್ಣು ಮಗುವಿನ ಉನ್ನತ ಶಿಕ್ಷಣ/ಮದುವೆಗೆ ಬಳಸಿಕೊಳ್ಳಬಹುದು.

ಪಿಎನ್‌ಬಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ಹೇಗೆ ತೆರೆಯುವುದು? (How to Open a Sukanya Samriddhi Yojana account in PNB?)
ಎಸ್‌ಎಸ್‌ವೈ ಖಾತೆಯನ್ನು ತೆರೆಯಲು ಪಿಎನ್‌ಬಿ (PNB) ತಡೆರಹಿತ ಮಾರ್ಗವನ್ನು ಒದಗಿಸುತ್ತದೆ. PNB ಯೊಂದಿಗೆ ಖಾತೆಯನ್ನು ಹೊಂದಿರದ ವ್ಯಕ್ತಿಗಳು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸುವ ಮೂಲಕ SSY ಖಾತೆಯನ್ನು ತೆರೆಯಬಹುದು:

ಇದನ್ನೂ ಓದಿ- PPF, KVP, SSY, NSC: ಸಣ್ಣ ಉಳಿತಾಯ ಯೋಜನೆಯ ಹೂಡಿಕೆದಾರರಿಗೆ ಸಂತಸದ ಸುದ್ದಿ

ಪಿಎನ್‌ಬಿಯಲ್ಲಿ ಎಸ್‌ಎಸ್‌ವೈ ಖಾತೆ ತೆರೆಯಲು ಅಗತ್ಯವಾದ ದಾಖಲೆಗಳು (Documents required to open an SSY account in PNB):
* ಹೆಣ್ಣು ಮಗುವಿನ ಜನನ ಪ್ರಮಾಣಪತ್ರ
* ಪೋಷಕರು ಅಥವಾ ಕಾನೂನು ಪಾಲಕರ ಫೋಟೋ ಐಡಿ
* ಮಗು ಮತ್ತು ಪೋಷಕರ ಛಾಯಾಚಿತ್ರ (ಅರ್ಜಿದಾರರು)

PNB ಯೊಂದಿಗೆ SSY ಖಾತೆಯನ್ನು ತೆರೆಯಲು ಹಂತ ಹಂತದ ಪ್ರಕ್ರಿಯೆ (Stepwise Process to open an SSY account with PNB):
>> ಶಾಖೆಯಿಂದ ಖಾತೆ ತೆರೆಯುವ ನಮೂನೆಯನ್ನು ಪಡೆಯಿರಿ ಮತ್ತು ಅಗತ್ಯವಿರುವ ಎಲ್ಲಾ ಕ್ಷೇತ್ರಗಳನ್ನು ಭರ್ತಿ ಮಾಡಿ
>> ಫೋಟೋಗಳೊಂದಿಗೆ ದಾಖಲೆಗಳನ್ನು ಸಲ್ಲಿಸಿ
>> ಮೊತ್ತವನ್ನು ಜಮಾ ಮಾಡಿ (ಕನಿಷ್ಠ ರೂ. 250)
>> ಖಾತೆಯು ಸಕ್ರಿಯಗೊಂಡ ನಂತರ, ಒಬ್ಬರು ನಗದು, ಚೆಕ್ ಅಥವಾ ಡಿಮಾಂಡ್ ಡ್ರಾಫ್ಟ್ ಮೂಲಕ ಠೇವಣಿ ಮಾಡಬಹುದು.

PNB ಯೊಂದಿಗೆ ಸುಕನ್ಯಾ ಸಮೃದ್ಧಿ ಖಾತೆಯ ಪ್ರಯೋಜನಗಳು (Benefits of Sukanya Samriddhi Account with PNB):
ಕೆಳಗಿನ ಅನುಕೂಲಗಳು PNB SSY ಖಾತೆಯನ್ನು ಹೆಚ್ಚು ಆಕರ್ಷಕವಾಗಿಸುತ್ತದೆ...
* ಈ ಖಾತೆಯ ಉತ್ತಮ ವಿಷಯವೆಂದರೆ ಹೆಚ್ಚಿನ PNB ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರ: 2020-21 ರಂತೆ, ಎಸ್‌ಎಸ್‌ವೈ ಖಾತೆಯಲ್ಲಿ ಪಿಎನ್‌ಬಿಯಿಂದ ವಾರ್ಷಿಕ 7.6% ಬಡ್ಡಿದರವನ್ನು ಒದಗಿಸಲಾಗುತ್ತದೆ.
* 21 ವರ್ಷಗಳ ಮೆಚ್ಯೂರಿಟಿ ಅವಧಿಯ ನಂತರ ಹಿಂತೆಗೆದುಕೊಳ್ಳದಿದ್ದರೆ ಯೋಜನೆಯಲ್ಲಿ ಸೂಚಿಸಲಾದ ದರಗಳಲ್ಲಿ ಈ ಮೊತ್ತವು ಸಂಯುಕ್ತ ಬಡ್ಡಿಯನ್ನು ಗಳಿಸುತ್ತದೆ.
*  ಠೇವಣಿ ಮೊತ್ತವು ಕನಿಷ್ಠವಾಗಿದ್ದು, ಯಾವುದೇ ತೊಂದರೆಗಳನ್ನು ಎದುರಿಸದೆ ಪ್ರತಿ ಕುಟುಂಬವು ಅದನ್ನು ನಿಭಾಯಿಸಬಹುದೆಂದು ಖಚಿತಪಡಿಸುತ್ತದೆ.
* ಒಂದು ವೇಳೆ ಖಾತೆದಾರರು ಬೇರೆ ಸ್ಥಳಕ್ಕೆ ತೆರಳಬೇಕಾದರೆ, ಖಾತೆಯನ್ನು ಬೇರೆ ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೊಸ ಸ್ಥಳದಲ್ಲಿ ವರ್ಗಾಯಿಸಬಹುದು ಮತ್ತು ಖಾತೆಗೆ ಸಂಬಂಧಿಸಿದ ಮುಂದಿನ ಕ್ರಮಗಳನ್ನು ಸ್ಥಳೀಯವಾಗಿ ಮಾಡಬಹುದು.
* ಪಿಎನ್ ಬಿ ಎಸ್ ಎಸ್ ವೈ ಖಾತೆಗೆ ಜಮಾ ಮಾಡಿದ ಹಣಕ್ಕೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಪ್ರಕಾರ ತೆರಿಗೆ ವಿಧಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News