ಉಚಿತ ಓಲಾ ಎಲೆಕ್ಟ್ರಿಕ್ ಸ್ಕೂಟರ್:  ಓಲಾ ಎಲೆಕ್ಟ್ರಿಕ್‌ನ ಸಹ-ಸಂಸ್ಥಾಪಕರಾದ ಭವಿಶ್ ಅಗರ್ವಾಲ್ ತಮ್ಮ ಗ್ರಾಹಕರಿಗೆ ಅದ್ಭುತ ಕೊಡುಗೆಯನ್ನು ನೀಡಿದ್ದಾರೆ. ಈ ಕೊಡುಗೆಯೊಂದಿಗೆ ನೀವು ಓಲಾ ಸ್ಕೂಟರ್ ಅನ್ನು ಉಚಿತ ಪಡೆಯಬಹುದು. ಆದರೆ, ಇದಕ್ಕಾಗಿ ಒಂದೇ ಒಂದು ಕೆಲಸ ಮಾಡಬೇಕು. ಒಂದೇ ಚಾರ್ಜ್‌ನಲ್ಲಿ 200 ಕಿಮೀ ವರೆಗೆ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆ ಮಾಡುವ ಗ್ರಾಹಕರಿಗೆ ಓಲಾ ಉಚಿತ ಓಲಾ ಎಲೆಕ್ಟ್ರಿಕ್ ಸ್ಕೂಟರ್ ನೀಡುತ್ತದೆ. ಓಲಾ ಎಲೆಕ್ಟ್ರಿಕ್ ಸಿಇಒ ಭವಿಶ್ ಅವರ್ವಾಲ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತಂತೆ ಟ್ವೀಟ್ ಮಾಡಿರುವ ಓಲಾ ಎಲೆಕ್ಟ್ರಿಕ್ ಸಿಇಒ ಭವಿಶ್ ಅವರ್ವಾಲ್,  'ಜನರ ಉತ್ಸಾಹವನ್ನು ನೋಡಿ, ಒಂದೇ ಚಾರ್ಜ್‌ನಲ್ಲಿ 200 ಕಿಮೀ ದೂರವನ್ನು ದಾಟುವ ಇನ್ನೂ 10 ಗ್ರಾಹಕರಿಗೆ ನಾವು ಉಚಿತ ಗೇರುವಾ ಸ್ಕೂಟರ್ ಅನ್ನು ನೀಡುತ್ತೇವೆ! ಈಗಾಗಲೇ ಈ ಸಾಧನೆ ಮಾಡಿರುವ ಇಬ್ಬರು ಗ್ರಾಹಕರನ್ನು ನಾವು ಹೊಂದಿದ್ದೇವೆ.  ಒಬ್ಬ ಗ್ರಾಹಕರು MoveOS 2 ನಲ್ಲಿ ಈ ಸಾಧನೆ ಗೈದಿದ್ದರೆ, ಇನ್ನೋರ್ವ ಗ್ರಾಹಕರು 1.0.16. ಸ್ಕೂಟರ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.  ವಿಜೇತರಿಗೆ  ಜೂನ್‌ನಲ್ಲಿ ಫ್ಯೂಚರ್‌ಫ್ಯಾಕ್ಟರಿಯಲ್ಲಿ ಉಚಿತ ಸ್ಕೂಟರ್ ವಿತರಣೆ ಲಭ್ಯವಾಲಿದೆ ಎಂದು ಮಾಹಿತಿ ನೀಡಿದ್ದಾರೆ. 


E Cycles Subsidy: ನಿಮ್ಮ ಬಳಿಯೂ ಆಧಾರ್ ಕಾರ್ಡ್ ಇದೆಯೇ? ಸರ್ಕಾರದಿಂದ ಸಿಗುತ್ತೆ 5500 ರೂ.ಗಳ ಪ್ರಯೋಜನ


ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 10,000 ರೂ. ಹೆಚ್ಚಳ:
ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಬೆಂಕಿ ಪ್ರಕರಣಗಳ ನಂತರ, ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸುವ ಬಗ್ಗೆ ಗ್ರಾಹಕರಲ್ಲಿ ಭಯವಿದೆ. ಏತನ್ಮಧ್ಯೆ, ಓಲಾ ಎಲೆಕ್ಟ್ರಿಕ್ S1 ಪ್ರೊಗಾಗಿ ಮಾರಾಟ ವಿಂಡೋವನ್ನು ಮರು-ತೆರೆದಿದೆ, ಆದರೆ ಕಂಪನಿಯು ಈ ಬಾರಿ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆಯನ್ನು 10,000 ರೂ.ಗಳಷ್ಟು ಹೆಚ್ಚಿಸಿದೆ. ಓಲಾ ಮೂರನೇ ಬಾರಿಗೆ ಎಸ್1 ಪ್ರೊಗಾಗಿ ಬುಕ್ಕಿಂಗ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಓಲಾ ಮೊದಲ ಬಾರಿಗೆ ಇವಿ ಬೆಲೆಯನ್ನು ಹೆಚ್ಚಿಸಿದೆ, ಅದರ ನಂತರ ಎಸ್1 ಪ್ರೊ ನ ಎಕ್ಸ್ ಶೋ ರೂಂ ಬೆಲೆ ಈಗ 1.40 ಲಕ್ಷಕ್ಕೆ ಏರಿದೆ.


ಇ-ಸ್ಕೂಟರ್‌ನ ಪರೀಕ್ಷಾರ್ಥ ಸವಾರಿ ನಡೆಯುತ್ತಿದೆ:
ಓಲಾ ಎಲೆಕ್ಟ್ರಿಕ್ 15 ಆಗಸ್ಟ್ 2021 ರಂದು ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿತು ಮತ್ತು ಈಗ ಕಂಪನಿಯು ಮೂರನೇ ಬಾರಿಗೆ ಅದನ್ನು ಮಾರಾಟ ಮಾಡಲು ಪ್ರಾರಂಭಿಸಿದೆ. ಕಂಪನಿಯು ದೇಶಾದ್ಯಂತ 5 ನಗರಗಳಲ್ಲಿ ಇವಿ ಯ ಟೆಸ್ಟ್ ರೈಡ್‌ಗಳನ್ನು ಪ್ರಾರಂಭಿಸಿದೆ ಮತ್ತು ಬುಕ್ ಮಾಡಿದ ಗ್ರಾಹಕರಿಗೆ ಮೇಲ್ ಐಡಿಯಲ್ಲಿ ಅದರ ವಿತರಣೆಯ ಬಗ್ಗೆ ತಿಳಿಸಲಾಗುವುದು ಎಂದು ಓಲಾ ಕಂಪನಿ ಹೇಳಿದೆ. ಎಸ್1 ಪ್ರೊ ಅನ್ನು ಒಂದೇ ಚಾರ್ಜ್‌ನಲ್ಲಿ 185 ಕಿಮೀ ವರೆಗೆ ಓಡಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ, ಆದರೆ ವಾಸ್ತವದಲ್ಲಿ ಇದು 131 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 115 ಕಿ.ಮೀ. ಎಂದು ಕಂಪನಿ ಹೇಳಿಕೊಂಡಿದೆ.


ಇದನ್ನೂ ಓದಿ-  ಕೆಟ್ಟ ಮೇಲೆ ಬುದ್ದಿ ಬಂತು: ಡೆಡ್ಲಿ ಟ್ರಾನ್ಸ್‌ಫಾರ್ಮರ್‌ಗಳನ್ನು ರಿಪೇರಿ ಮಾಡಿಸಿದ ಬೆಸ್ಕಾಂ


ಓಲಾ ಏಪ್ರಿಲ್ 2022 ರಲ್ಲಿ 12,683 ಗ್ರಾಹಕರಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ವಿತರಿಸಿದೆ, ಈ ಅಂಕಿ ಅಂಶದೊಂದಿಗೆ, ಓಲಾ ಮಾರಾಟದ ವಿಷಯದಲ್ಲಿ ಹೀರೋ ಎಲೆಕ್ಟ್ರಿಕ್ ಅನ್ನು ಹಿಂದಿಕ್ಕಿದೆ. ಇದಲ್ಲದೆ, ಓಲಾ ದೇಶದಲ್ಲಿ 10,000 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು  ಅತ್ಯಂತ ವೇಗವಾಗಿ ಮಾರಾಟ ಮಾಡುವ ಕಂಪನಿಯಾಗಿದೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.