ಕೆಟ್ಟ ಮೇಲೆ ಬುದ್ದಿ ಬಂತು: ಡೆಡ್ಲಿ ಟ್ರಾನ್ಸ್‌ಫಾರ್ಮರ್‌ಗಳನ್ನು ರಿಪೇರಿ ಮಾಡಿಸಿದ ಬೆಸ್ಕಾಂ

ಬೆಂಗಳೂರು ಭಾಗದ ಸಾಕಷ್ಟು ಜಾಗದಲ್ಲಿ ಟ್ರಾನ್ಸ್‌ಫಾರ್ಮರ್‌ಗಳ ಸಮಸ್ಯೆ ಇದೆ.‌ ಈ ಬಗ್ಗೆ ಸಾರ್ವಜನಿಕರ‌ ದೂರ ಬಂದರೂ ಅಧಿಕಾರಿಗಳು ಮಾತ್ರ ತಲೆಕೆಡಸಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ಮೃತಪಟ್ಟ ತಂದೆ ಮಗಳ ಪ್ರಕರಣದ ಬಳಿಕ ಎಚ್ಚೆತುಕೊಂಡಿದ್ದಾರೆ. ಅಪಾಯಕಾರಿ ಅನುಪಯುಕ್ತ ಟ್ರಾನ್ಸ್‌ಫಾರ್ಮರ್‌ಗಳನ್ನು ಸರಿಪಡಿಸುವ ಕೆಲಸ ಮಾಡಲಾಗ್ತಿದ್ದು ಕಳೆದ 15 ದಿನಗಳಲ್ಲಿ ಸಾವಿರಾರು ಟ್ರಾನ್ಸ್‌ಫಾರ್ಮರ್‌ಗಳನ್ನ ಸರಿಪಡಿಸಲಾಗಿದೆ.

Written by - Manjunath Hosahalli | Edited by - Bhavishya Shetty | Last Updated : May 22, 2022, 05:26 PM IST
  • ಅವಘಡಗಳನ್ನ ತಗ್ಗಿಸಲು ಬೆಸ್ಕಾಂ ಕಾರ್ಯಾಚರಣೆ
  • 15 ದಿನದಲ್ಲಿ 10,794 ಟಿಸಿಗಳ ರಿಪೇರಿ
  • ಇಲ್ಲಿದೆ ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆಯ ಜಿಲ್ಲಾವಾರು ವಿವರ
ಕೆಟ್ಟ ಮೇಲೆ ಬುದ್ದಿ ಬಂತು: ಡೆಡ್ಲಿ ಟ್ರಾನ್ಸ್‌ಫಾರ್ಮರ್‌ಗಳನ್ನು ರಿಪೇರಿ ಮಾಡಿಸಿದ ಬೆಸ್ಕಾಂ title=
Transformer repair

ಬೆಂಗಳೂರು: ಬೆಂಗಳೂರಿನ ಮಂಗನಹಳ್ಳಿ ಬ್ರಿಡ್ಜ್ ಬಳಿ ತಂದೆ ಮಗಳು ಡೆಡ್ಲಿ ಟ್ರಾನ್ಸ್ ಫಾರ್ಮರ್‌ನಿಂದ ಸಾವನ್ನಪ್ಪಿದ ಪ್ರಕರಣ ಬೆನ್ನಲ್ಲೇ ಬೆಸ್ಕಾಂ ಅಲರ್ಟ್ ಆಗಿದೆ. ಜೊತೆಗೆ ಸಾಲು ಸಾಲು ಅವಘಡಗಳ ಬಳಿಕ ಬೆಸ್ಕಾಂ ಅಧಿಕಾರಿಗಳು ಎಚ್ಚೆತುಕೊಂಡಿದ್ದಾರೆ.‌ ಬೆಸ್ಕಾಂಗೆ ಸಂಬಂಧಿಸಿದ ಎಲ್ಲಾ ಕಡೆ ಅವಘಡಗಳನ್ನ ತಪ್ಪಿಸುವ ಕೆಲಸಕ್ಕೆ ಅಧಿಕಾರಿಗಳ ತಂಡ ಮುಂದಾಗಿದೆ. ಅದರಂತೆ ಎಲ್ಲೆಲ್ಲಿ ಡೆಡ್ಲಿ ಟ್ರಾನ್ಸ್‌ಫಾರ್ಮ್‌ ಇದೆಯೋ, ಎಲ್ಲೆಲ್ಲಿ ವಿದ್ಯುತ್ ಲೈನ್‌ಗಳ ಸಮಸ್ಯೆ ಇದೆಯೋ ಅಲ್ಲೆಲ್ಲ ಕಾರ್ಯಾಚರಣೆಗೆ ಮುಂದಾಗಿ ಎಂದು ಸಿಬ್ಬಂದಿಗೆ ಸೂಚಿಸಲಾಗಿದೆ.

ಇದನ್ನು ಓದಿ: ಖಾಲಿ ಬಿಟ್ಟ ಸೈಟ್ಗಳೇ ಟಾರ್ಗೆಟ್: ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್

ಅದರಂತೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಎಲ್ಲಾ ಜಿಲ್ಲಾಪ್ರದೇಶಗಳಲ್ಲಿ ಟ್ರಾನ್ಸ್‌ಫಾರ್ಮರ್‌ ರಿಪೇರಿ ಕೆಲಸಕ್ಕೆ ಸೂಚಿಸಲಾಗಿದೆ.

ಅವಘಡಗಳನ್ನ ತಗ್ಗಿಸಲು ಕಾರ್ಯಾಚರಣೆ: 
ಬೆಂಗಳೂರು ಭಾಗದ ಸಾಕಷ್ಟು ಜಾಗದಲ್ಲಿ ಟ್ರಾನ್ಸ್‌ಫಾರ್ಮರ್‌ಗಳ ಸಮಸ್ಯೆ ಇದೆ.‌ ಈ ಬಗ್ಗೆ ಸಾರ್ವಜನಿಕರ‌ ದೂರ ಬಂದರೂ ಅಧಿಕಾರಿಗಳು ಮಾತ್ರ ತಲೆಕೆಡಸಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ಮೃತಪಟ್ಟ ತಂದೆ ಮಗಳ ಪ್ರಕರಣದ ಬಳಿಕ ಎಚ್ಚೆತುಕೊಂಡಿದ್ದಾರೆ. ಅಪಾಯಕಾರಿ ಅನುಪಯುಕ್ತ ಟ್ರಾನ್ಸ್‌ಫಾರ್ಮರ್‌ಗಳನ್ನು ಸರಿಪಡಿಸುವ ಕೆಲಸ ಮಾಡಲಾಗ್ತಿದ್ದು ಕಳೆದ 15 ದಿನಗಳಲ್ಲಿ ಸಾವಿರಾರು ಟ್ರಾನ್ಸ್‌ಫಾರ್ಮರ್‌ಗಳನ್ನ ಸರಿಪಡಿಸಲಾಗಿದೆ.

15 ದಿನದಲ್ಲಿ 10,794 ಟಿಸಿಗಳ ರಿಪೇರಿ:
ರೈಲು ಹೋದಮೇಲೆ ಟಿಕೆಟ್ ತೆಗೆದುಕೊಂಡರು ಅನ್ನೋ ಮಾತಿನಂತೆ ನಡೆದುಕೊಂಡ ಬೆಸ್ಕಾಂ ಅಧಿಕಾರಿಗಳು, ತಂದೆ ಮಗಳ ಪ್ರಾಣ ಹೋದ ಬಳಿಕ ಟಿಸಿ ರಿಪೇರಿ ಅಭಿಯಾನಕ್ಕೆ ಇಂಧನ ಸಚಿವ ಸುನೀಲ್ ಕುಮಾರ್ ಚಾಲನೆ ನೀಡಿದ್ದಾರೆ. ಮೇ 5ರಂದು ಟಿಸಿ ನಿರ್ವಹಣೆ ಅಭಿಯಾನಕ್ಕೆ ಚಾಲನೆ ನೀಡಿದ್ದು, ಅಂದಿನಿಂದ ಇಲ್ಲಿವರೆಗೂ 10ಸಾವಿರಕ್ಕೂ ಹೆಚ್ಚು ಟಿಸಿಗಳ‌ ಗುಣಮಟ್ಟ ಪರೀಕ್ಷಿಸಲಾಗಿದೆ. ಜೊತೆಗ ಸರಿಪಡಿಸುವ ಕೆಲಸ‌ ಬೆಸ್ಕಾಂ ಸಿಬ್ಬಂದಿ ಮಾಡಿದ್ದಾರೆ. 

ತಾಂತ್ರಿಕ ಸಮಸ್ಯೆ ಉಂಟಾಗಿರುವ ಟಿಸಿಗಳಿಗೆ ಶಾಶ್ವತ ಕಾಯಕಲ್ಪಕ್ಕೆ ನೀಡಲು ಬೆಸ್ಕಾಂ ಮುಂದಾಗಿದ್ದು,ಬೆಂಗಳೂರಿನಲ್ಲೆಡೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ಟಿಸಿಗಳ ನಿರ್ವಹಣೆ ಮಾಡಲಾಗಿದೆ. ಅಲ್ಲದೇ ಕಳೆದ 15 ದಿನಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲೇ ಬರೊಬ್ಬರಿ 3,476 ಟಿಸಿಗಳ ನಿರ್ವಹಣೆ ನಡೆಸಲಾಗಿದೆ.

ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆಯ ಜಿಲ್ಲಾವಾರು ವಿವರ:
ದಾವಣಗೆರೆ-1881
ತುಮಕೂರು-1602
ಚಿತ್ರದುರ್ಗ -1090 
ರಾಮನಗರ- 814
ಚಿಕ್ಕಬಳ್ಳಾಪುರ- 797
ಕೋಲಾರ- 598
ಬೆಂಗಳೂರು ಗ್ರಾಮಾಂತರ -537 

ಬೆಂಗಳೂರು ನಗರ ವ್ಯಾಪ್ತಿ:
ಪಶ್ಚಿಮ ವಲಯದಲ್ಲಿ-804,
ದಕ್ಷಿಣ ವಲಯ- 760 
ಪೂರ್ವ ವಲಯ- 835
ಉತ್ತರ ವಲಯ- 826 

ಇದನ್ನು ಓದಿ: SSLC Topper: ರೈತನ‌ ಮಗಳು ರಾಜ್ಯಕ್ಕೆ ಟಾಪರ್

ಬೆಸ್ಕಾಂ ವ್ಯಾಪ್ತಿಯ ಒಟ್ಟು 8 ಜಿಲ್ಲೆಗಳಲ್ಲಿ 10794 ಟಿಸಿಗಳನ್ನು ಸರಿಪಡಿಸುವ ಕೆಲಸವನ್ನು ಸಿಬ್ಬಂದಿ ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News