ನವದೆಹಲಿ: ಜನಪ್ರಿಯ ಟ್ಯಾಕ್ಸಿ ಸೇವಾ ಕಂಪೆನಿ ಓಲಾ ಇದೇ ಮೊದಲ ಬಾರಿಗೆ ತನ್ನದೆ ಬ್ರ್ಯಾಂಡ್​ನ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದೆ. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದಂದು ನೂತನ ಸ್ಕೂಟರ್​ ಅನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಗೂ ಮೊದಲೇ ಸಖತ್ ಸೌಂಡ್ ಮಾಡಿದ್ದ ಓಲಾ ಇ-ಸ್ಕೂಟರ್​ ಅನ್ನು ಒಂದು ಲಕ್ಷಕ್ಕೂ ಅಧಿಕ ಮಂದಿ ಬುಕ್ ಮಾಡಿದ್ದರು.


COMMERCIAL BREAK
SCROLL TO CONTINUE READING

ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಸೇರಿ ಹಲವು ವಿಶೇಷತೆಗಳು ಈ ಸ್ಕೂಟರ್‌ನಲ್ಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ಮೈಲೇಜ್ ನೀಡಬಲ್ಲ ಸ್ಕೂಟರ್ ಇದಾಗಿದೆ. ಓಲಾ ಎಲೆಕ್ಟ್ರಿಕ್ S1 ಹಾಗೂ ಓಲಾ ಎಲೆಕ್ಟ್ರಿಕ್ S1 Pro ಎಂಬ 2 ವೇರಿಯೆಂಟ್ ಗಳಲ್ಲಿ ಸ್ಕೂಟರ್ ಲಭ್ಯವಿದೆ. ಸ್ಕೂಟರ್ ನ ಆರಂಭಿಕ ಬೆಲೆ ಕೇವಲ 99,999 ರೂ. ಆಗಿರಲಿದೆ ಎಂದು ಕಂಪನಿ ತಿಳಿಸಿದೆ.


ಸ್ವಾತಂತ್ರ್ಯ ದಿನದಂದು SBI ಗ್ರಾಹಕರಿಗೆ ಸಿಹಿ ಸುದ್ದಿ : Home Lone ಗೆ ಭರ್ಜರಿ ಆಫರ್, ಹೇಗೆ ಅರ್ಜಿ ಸಲ್ಲಿಸಬೇಕು?


ಓಲಾ S1 ಎಲೆಕ್ಟ್ರಿಕ್ ಸ್ಕೂಟರ್ ಅಂತರ್ನಿರ್ಮಿತ ಸ್ಪೀಕರ್‌ಗಳನ್ನು ಹೊಂದಿದ್ದು, ಇದನ್ನು ಫೋನ್ ಕರೆಗಳ ಜೊತೆಗೆ ಸಂಗೀತವನ್ನು ಆಲಿಸಲು ಬಳಸಬಹುದಾಗಿದೆ. ಇದಲ್ಲದೆ ಸ್ಕೂಟರ್ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬದಲಿಗೆ ಬೃಹತ್ ಟಚ್ ಸ್ಕ್ರೀನ್ ಅನ್ನು ಇರಿಸಲಾಗಿದೆ. ಇದು ಮೂವ್ಓಎಸ್‌(MoveOS)ನಿಂದ ಶಕ್ತಿಯನ್ನು ಪಡೆಯುತ್ತದೆ ಮತ್ತು ಹಲವು ಡಿಸ್ ಪ್ಲೇ ಥೀಮ್‌ಗಳನ್ನು ಹೊಂದಿರುತ್ತದೆ.


ಓಲಾ S1 ಎಲೆಕ್ಟ್ರಿಕ್ ಸ್ಕೂಟರ್ 99,999 .ರೂ.ಗೆ ಲಭ್ಯವಿರಲಿದೆ. ಅದರಂತೆ ಓಲಾ S1 ಪ್ರೊ ಹೆಚ್ಚಿನ ಸ್ಪೆಸಿಫಿಕೇಶನ್ ವೆರಿಯಂಟ್ ಅನ್ನು ಹೊಂದಿದ್ದು, ಇದರ ಬೆಲೆ ಸುಮಾರು 1,29,999 ರೂ. ಎಂದು ಹೇಳಲಾಗಿದೆ.


ಇದನ್ನೂ ಓದಿ: Viral Video: ಭೂಮಿಗಪ್ಪಳಿಸಿದ Asteroid, ಬಾಹ್ಯಾಕಾಶ ತಲುಪಿದ ಡೈನೋಸಾರ್ಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.