ಸ್ವಾತಂತ್ರ್ಯ ದಿನದಂದು SBI ಗ್ರಾಹಕರಿಗೆ ಸಿಹಿ ಸುದ್ದಿ : Home Lone ಗೆ ಭರ್ಜರಿ ಆಫರ್, ಹೇಗೆ ಅರ್ಜಿ ಸಲ್ಲಿಸಬೇಕು?

ಸ್ವಾತಂತ್ರ್ಯ ದಿನಾಚರಣೆಯ ಬಾಡಿಗೆ ಮನೆ ಹೊಂದಿರುವವರಿಗೆ ಸ್ವಂತ ಮನೆ ಹೊಂದಲು SBI ಗೃಹ ಸಾಲದ ಮೇಲೆ ಶೂನ್ಯ ಸಂಸ್ಕರಣಾ ಶುಲ್ಕವನ್ನು ನೀಡುತ್ತಿದೆ. ಎಸ್‌ಬಿಐ ಸ್ವತಃ ಈ ಮಾಹಿತಿಯನ್ನು ಹೊಂಚಿಕೊಂಡಿದೆ. ಸಂಪೂರ್ಣ ಮಾಹಿತಿ ಈ ಕೆಳಗಿದೆ ನೋಡಿ.

Written by - Channabasava A Kashinakunti | Last Updated : Aug 14, 2021, 06:57 PM IST
  • ಸ್ವಾತಂತ್ರ್ಯ ದಿನಾಚರಣೆಯಂದು SBI ಗ್ರಾಹಕರಿಗೆ ಭಂಪರ್ ಆಫರ್
  • ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ನೋಡಿ
  • ಬ್ಯಾಂಕಿನಿಂದ ಆಕರ್ಷಕ ಬಡ್ಡಿ ದರ
ಸ್ವಾತಂತ್ರ್ಯ ದಿನದಂದು SBI ಗ್ರಾಹಕರಿಗೆ ಸಿಹಿ ಸುದ್ದಿ : Home Lone ಗೆ ಭರ್ಜರಿ ಆಫರ್, ಹೇಗೆ ಅರ್ಜಿ ಸಲ್ಲಿಸಬೇಕು? title=

ನವದೆಹಲಿ : ಸ್ವಾತಂತ್ರ್ಯ ದಿನಾಚರಣೆಯ ಶುಭದಿನದಂದು ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಸುವರ್ಣಾವಕಾಶವನ್ನು ನೀಡಿದೆ. ಸ್ವಾತಂತ್ರ್ಯ ದಿನಾಚರಣೆಯ ಬಾಡಿಗೆ ಮನೆ ಹೊಂದಿರುವವರಿಗೆ ಸ್ವಂತ ಮನೆ ಹೊಂದಲು SBI ಗೃಹ ಸಾಲದ ಮೇಲೆ ಶೂನ್ಯ ಸಂಸ್ಕರಣಾ ಶುಲ್ಕವನ್ನು ನೀಡುತ್ತಿದೆ. ಎಸ್‌ಬಿಐ ಸ್ವತಃ ಈ ಮಾಹಿತಿಯನ್ನು ಹೊಂಚಿಕೊಂಡಿದೆ. ಸಂಪೂರ್ಣ ಮಾಹಿತಿ ಈ ಕೆಳಗಿದೆ ನೋಡಿ.

ಬ್ಯಾಂಕಿನಿಂದ ಆಕರ್ಷಕ ಕೊಡುಗೆ

ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ ಗೃಹ ಸಾಲ(SBI Home Lone)ದ ಮೇಲೆ ಅತ್ಯಂತ ಆಕರ್ಷಕ ರಿಯಾಯಿತಿ ಸೌಲಭ್ಯದ ಲಾಭವನ್ನು ನೀಡುತ್ತಿದೆ. ಗೃಹ ಸಾಲ ಸೌಲಭ್ಯದ ಅಡಿಯಲ್ಲಿ, ಮಹಿಳೆಯರಿಗೆ ಬಡ್ಡಿ ದರದಲ್ಲಿ 5 ಬೇಸಿಸ್ ಪಾಯಿಂಟ್‌ಗಳ ರಿಯಾಯಿತಿಯ ಲಾಭವನ್ನು ನೀಡುತ್ತಿದೆ. ನೀವು SBI ಯೊನೊ ಸೇವೆಯ ಅಡಿಯಲ್ಲಿ ಗೃಹ ಸಾಲವನ್ನು ಪಡೆಯಲು ಬಯಸಿದರೂ ಸಹ, ನೀವು 5 bps ಬಡ್ಡಿ ರಿಯಾಯಿತಿಯ ಲಾಭವನ್ನು ಪಡೆಯುತ್ತೀರಿ. ಎಸ್‌ಬಿಐ ಗೃಹ ಸಾಲದ ಬಡ್ಡಿ ದರ ಶೇ.6.70 ರಷ್ಟಿದೆ. ಎಸ್‌ಬಿಐ ತನ್ನ ಗ್ರಾಹಕರಿಗೆ 30 ಲಕ್ಷದವರೆಗಿನ ಗೃಹ ಸಾಲವನ್ನು ಶೇ. 6.70 ರ ಬಡ್ಡಿದರದಲ್ಲಿ ನೀಡುತ್ತಿದೆ. 30 ಲಕ್ಷದಿಂದ 75 ಲಕ್ಷದವರೆಗಿನ ಗೃಹ ಸಾಲದ ಮೇಲಿನ ಬಡ್ಡಿ ದರವು ಶೇ.6.95 ರಷ್ಟಾಗುತ್ತದೆ. ಮತ್ತೆ 75 ಲಕ್ಷಕ್ಕಿಂತ ಹೆಚ್ಚಿನ ಗೃಹ ಸಾಲ ಪಡೆದರೆ ದಕ್ಕೆ ಬಡ್ಡಿದರವು ಶೇ.7.05 ರಷ್ಟಾಗುತ್ತದೆ.

ಇದನ್ನೂ ಓದಿ : Diesel Doorstep Delivery : ವಾಹನ ಸವಾರರಿಗೆ ಸಿಹಿ ಸುದ್ದಿ : ಡೀಸೆಲ್‌ 'ಹೋಂ ಡೆಲಿವರಿ' ಆರಂಭಿಸಿದ BPCL 

ಈ ರೀತಿ ಅನ್ವಯಿಸಿ

ಆಜಾದಿ ಕಾ ಅಮೃತ್ ಮಹೋತ್ಸವ ಅಭಿಯಾನದ ಅಡಿಯಲ್ಲಿ, ಎಸ್‌ಬಿಐನ ಈ ಆಕರ್ಷಕ ಗೃಹ ಸಾಲ(Home Lone) ಸೌಲಭ್ಯವನ್ನು ಆಗಸ್ಟ್ 15 ರಂದು ಪಡೆಯಬಹುದು. ಎಸ್‌ಬಿಐನ ಡಿಜಿಟಲ್ ಸೇವೆ ಯೋನೊ ಎಸ್‌ಬಿಐ ಮೂಲಕ ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದಲ್ಲದೇ ಎಸ್‌ಬಿಐ 7208933140 ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಗೃಹ ಸಾಲಕ್ಕಾಗಿ ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದು.

ಯಾವ ಆಧಾರದ ಮೇಲೆ ನೀವು ಸಾಲ ಪಡೆಯಬಹುದು?

ಎಸ್‌ಬಿಐ(State Bank of India) ತನ್ನ ಅಧಿಕೃತ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದು, ಸಾಲ ಮಂಜೂರಾತಿಯು ಆದಾಯ, ಸರಕುಗಳನ್ನು ವಾಗ್ದಾನ ಮಾಡುವುದು, ಪ್ರಸ್ತುತ ಸಾಲ, ಸಾಲದ ಇತಿಹಾಸ, ಕಾರ್ಯಸಾಧ್ಯತೆ ಇತ್ಯಾದಿಗಳನ್ನು ನೋಡಿಕೊಳ್ಳುತ್ತದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ : Gold Rate : ಆಭರಣ ಪ್ರಿಯರಿಗೆ ಬಿಗ್ ಶಾಕ್ : 50 ಸಾವಿರ ರೂ. ಗಡಿ ದಾಟಿದ ಚಿನ್ನದ ಬೆಲೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News